'ಮೂರು ದಿನ ಶಬರಿಮಲೆ ದೇವಸ್ಥಾನ ಮುಚ್ಚಿರುವುದು ಸ್ವಾಗತಾರ್ಹ'
ಉಡುಪಿ, ಜನವರಿ 03: ಶಬರಿಮಲೆ ದೇವಸ್ಥಾನಕ್ಕೆ ಇಬ್ಬರು ಮಹಿಳೆಯರು ಪ್ರವೇಶಿಸಿದ ವಿಚಾರದ ಬಗ್ಗೆ ಶ್ರೀ ವಿಶ್ವ ಸಂತೋಷ ಭಾರತಿ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರು ಪ್ರವೇಶಿಸಿರುವುದು ಕ್ಷೇತ್ರಕ್ಕೆ ಮಾಡಿದ ಅಪಚಾರ. ಹಿಂದೂ ಧರ್ಮದ ಮೇಲೆ ಮಾಡಿದ ಅತ್ಯಾಚಾರ ಎಂದು ಕಿಡಿಕಾರಿದರು.
ನಿಜವಾಗಿ ಆ ಮಹಿಳೆಯರು ಶಬರಿಮಲೆ ಕ್ಷೇತ್ರಕ್ಕೆ ಬೇಕಂತ ಹೋಗಿದ್ದಲ್ಲ. ಬೇರೆಯವರ ಪ್ರಚೋದನೆಯಿಂದ ಹೋದದ್ದು. ತಡ ರಾತ್ರಿ 3:45 ಕ್ಕೆ ಸನ್ನಿಧಾನದ ಹಿಂಭಾಗದ ಬಾಗಿಲು ಮೂಲಕ ಮಹಿಳೆಯರು ದೇವಾಲಯ ಪ್ರವೇಶಿಸಿದ್ದಾರೆ.ದೇವಸ್ಥಾನ ಪ್ರವೇಶಕ್ಕೂ ಮೊದಲು ಆಡಳಿತ ಕಛೇರಿಯಲ್ಲಿ ಮಹಿಳೆಯರನ್ನು ಕೂರಿಸಿ, ಅವರ ರಕ್ಷಣೆಗಾಗಿ 30 ಜನ ಸಿವಿಲ್ ಡ್ರೆಸ್ ನಲ್ಲಿ ಪೊಲೀಸ್ ನಿಯೋಜಿಸಲಾಗಿತ್ತು.

ಕೇರಳ ಸರಕಾರಕ್ಕೆ ಏನು ತಿಳಿದಿದೆ. ತನ್ನ ಕ್ರಮಗಳಿಂದ ಹಿಂದೂಗಳ ಭಾವನೆ ಅತ್ಯಾಚಾರ ಮಾಡಿದೆ. ನಂಬಿಕೆ, ಭಕ್ತಿ ಇಲ್ಲದ ನಾಸ್ತಿಕ ಮಹಿಳೆಯರನ್ನು ಕರೆತಂದು ಪ್ರಾಯೋಜಿತ ಕಾರ್ಯ ಮಾಡಲಾಗಿದೆ. ಇದು ಶಬರಿಮಲೆ ಕ್ಷೇತ್ರಕ್ಕೆ ಮಾಡಿದ ಅಪಚಾರ. ಹಿಂದೂ ಧರ್ಮದ ಮೇಲೆ ಮಾಡಿದ ಅತ್ಯಾಚಾರ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಮೂರು ದಿನಗಳ ಕಾಲ ಅಥವಾ ಅದಕ್ಕೂ ಹೆಚ್ಚು ದಿನ ದೇವಾಲಯ ಮುಚ್ಚಲಿದೆ. 18 ಮೆಟ್ಟಿಲುಗಳ ಮೂಲಕ ಮಹಿಳೆಯರು ಹತ್ತಿಲ್ಲ. ಹಿಂದಿನಿಂದ ಪ್ರವೇಶ ಮಾಡಿದ್ದಾರೆ ಅನ್ನೋದು ಸಮಾಧಾನ. ಆದರೂ ದೇವಸ್ಥಾನದ ಗರ್ಭಗುಡಿಯ ಸುತ್ತ ಬಲಿಪೂಜೆ ಇನ್ನಿತರ ಧಾರ್ಮಿಕ ಶುದ್ಧಿ ಕಾರ್ಯ ನಡೆಯಬೇಕಿದೆ. ದೇವಸ್ಥಾನದ ಆಚರಣೆ ಉಲ್ಲಂಘನೆಯಾದ ಹಿನ್ನೆಲೆಯಲ್ಲಿ ಮೂರು ದಿನ ದೇವಸ್ಥಾನ ಮುಚ್ಚಿರುವುದು ಸ್ವಾಗತಾರ್ಹ ಎಂದು ಅವರು ಹೇಳಿದರು.












Click it and Unblock the Notifications