ಸೌದಿ ಜೈಲಲ್ಲಿ ಹರೀಶ್ ಬಂಗೇರ: ಶೋಭಾ ಕರಂದ್ಲಾಜೆ ಹೇಳಿದ್ದೇನು?
ಉಡುಪಿ, ಫೆಬ್ರವರಿ 21: ಒಂದೂವರೆ ತಿಂಗಳಿನಿಂದ ಸೌದಿ ಜೈಲಿನಲ್ಲಿ ಬಂಧಿಯಾಗಿರುವ ಕುಂದಾಪುರದ ಹರೀಶ್ ಬಂಗೇರ ಬಿಡುಗಡೆಯ ಕುರಿತು ಸಂಸದೆ ಶೋಭಾ ಕರಂದ್ಲಾಜೆ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
"ಹರೀಶ್ ಬಂಗೇರ ಬಿಡುಗಡೆ ಕುರಿತು ಕೇಂದ್ರ ಸರ್ಕಾರದ ಜೊತೆ ಮಾತನಾಡಿದ್ದೇನೆ. ಸೌದಿ ದೊರೆ ವಿರುದ್ಧ ಹರೀಶ್ ಪೋಸ್ಟ್ ಹಾಕಿದ್ದಾರೆ ಎನ್ನುವ ಕೇಸ್ ಬಲವಾಗಿದೆ. ಫೇಸ್‌ಬುಕ್ ಪೋಸ್ಟ್ ಮಾಡಿದ್ದು ಯಾರು ಎನ್ನುವ ಐಟಿ ಫಾರೆನ್ಸಿಕ್ ರಿಪೋರ್ಟ್ ಕಳುಹಿಸಬೇಕಾಗಿದೆ. ನಕಲಿ ಖಾತೆಯಿಂದ ಪೋಸ್ಟ್ ಮಾಡಿದವರ ಪತ್ತೆ ಮಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸಕ್ರಿಯವಾಗಿದ್ದು, ಈ ಬಗ್ಗೆ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಜೊತೆ ಸಂಪರ್ಕದಲ್ಲಿದ್ದೇನೆ" ಎಂದು ತಿಳಿಸಿದ್ದಾರೆ.

"ಪ್ರಾಥಮಿಕ ತನಿಖೆಯಲ್ಲಿ ಮೊದಲು ಪೋಸ್ಟ್ ಮಾಡಿದವರು ಬೇರೆಯವರು ಎನ್ನುವ ಮಾಹಿತಿ ಸಿಕ್ಕಿದೆ. ಅಂತಿಮವಾದ ನಂತರ ವರದಿಯನ್ನು ಕೇಂದ್ರ ಸರ್ಕಾರ, ರಾಯಭಾರಿ ಕಚೇರಿಗೆ ಕಳುಹಿಸಲಾಗುವುದು' ಎಂದು ಹೇಳಿದರು.












Click it and Unblock the Notifications