ಉಡುಪಿ; ಫಾಸ್ಟ್‌ ಟ್ಯಾಗ್ ವಿನಾಯಿತಿ ರದ್ದು ಭೀತಿ, ಹೋರಾಟದ ಕಾವು!

ಉಡುಪಿ, ಫೆಬ್ರವರಿ 18; ದೇಶಾದ್ಯಂತ ಫಾಸ್ಟ್ ಟ್ಯಾಗ್ ಕಡ್ಡಾಯಗೊಳ್ಳುತ್ತಿಂತೆಯೇ ಟೋಲ್ ಗೇಟ್‌ಗಳಿರುವ ಊರುಗಳಲ್ಲಿ ಸ್ಥಳೀಯರಿಗೆ ನೀಡಲಾಗುತ್ತಿದ್ದ ವಿನಾಯಿತಿಯನ್ನು ರದ್ದು ಮಾಡುವ ಹುನ್ನಾರ ನಡೆಯುತ್ತಿದೆ. ಈ ಸಂಬಂಧ ಉಡುಪಿ ಜಿಲ್ಲೆಯಲ್ಲಿಯೂ ಸ್ಥಳೀಯರು ಹೋರಾಟದ ಹಾದಿ ಹಿಡಿದಿದ್ದು, ದಿನೇ ದಿನೇ ಪ್ರತಿಭಟನೆ ಕಾವು ಹೆಚ್ಚುತ್ತಿದೆ.

ಉಡುಪಿ ಜಿಲ್ಲೆಯಲ್ಲಿ ಸದ್ಯ 2 ಟೋಲ್ ಗೇಟ್ ಗಳಿವೆ. ಒಂದು ಹೆಜಮಾಡಿ, ಇನ್ನೊಂದು ಸಾಸ್ತಾನ. ಸಾಸ್ತಾನದ ಟೋಲ್ ಪೇಟೆಯ ಆಸುಪಾಸಿನಲ್ಲೇ ಇದ್ದು ಟೋಲ್ ವಿನಾಯಿತಿ ರದ್ದು ಮಾಡಿದರೆ ಸಾಕಷ್ಟು ಜನ ತೊಂದರೆಗೊಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇದೇ ತಿಂಗಳ ಫೆ. 22 ರಂದು ಸಾಸ್ತಾನದಲ್ಲಿ ಸ್ಥಳೀಯರು ಬಂದ್‌ಗೆ ಕರೆ ನೀಡಿದ್ದು, ಹೋರಾಟವನ್ನು ತೀವ್ರಗೊಳಿಸಿದ್ದಾರೆ.

ಕರಾವಳಿಯಲ್ಲಿ ನವಯುಗ ಕಂಪನಿಯು ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಗುತ್ತಿಗೆ ಪಡೆದಿತ್ತು. ಅದರಂತೆ ಸಂಸ್ಥೆಯು ಟೋಲ್ ಸಂಗ್ರಹ ಮಾಡುತ್ತಿದೆ. ಈ ತನಕ ಹಲವು ಹೋರಾಟಗಳ ಬಳಿಕ ಹೆಜಮಾಡಿ ಮತ್ತು ಸಾಸ್ತಾನಗಳಲ್ಲಿ ಸ್ಥಳೀಯರಿಗೆ ವಿನಾತಿಯಿ ಅಥವಾ ರಿಯಾಯಿತಿ ದರ ನೀಡಲಾಗುತ್ತಿತ್ತು. ಆದರೆ ಇದೀಗ ಫಾಸ್ಟ್ ಟ್ಯಾಗ್ ಕಡ್ಡಾಯ ನೆಪದಲ್ಲಿ ವಿನಾಯಿತಿ ರದ್ದು ಮಾಡುವ ಹುನ್ನಾರ ನಡೆದಿದೆ.

Protest In Udupi Sasthana And Hejamady Tollgates

ಸ್ಥಳೀಯರು ಮತ್ತು ಹೋರಾಟಗಾರರು ಹೇಳುವ ಪ್ರಕಾರ ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯೇ ಇನ್ನೂ ಪೂರ್ಣಗೊಂಡಿಲ್ಲ. ದಾರಿದೀಪ ಅಳವಡಿಕೆ, ಸರ್ವಿಸ್ ರಸ್ತೆ ನಿರ್ಮಾಣ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಗುತ್ತಿಗೆದಾರರು ಇನ್ನೂ ಪೂರ್ಣಗೊಳಿಸಿಲ್ಲ.

ಈ ಹಿಂದೆ ಜಿಲ್ಲಾಡಳಿತ, ಜನಪ್ರತಿನಿಧಿಗಳು ಮತ್ತು ಸ್ಥಳೀಯರ ನಡುವೆ ನಡೆದ ಹಲವು ಸಭೆಗಳಲ್ಲಿ ಸಾಕಷ್ಡು ಭರವಸೆಗಳನ್ನು ಸ್ಥಳೀಯರಿಗೆ ನೀಡಲಾಗಿತ್ತು. ಆ ಭರವಸೆಗಳು ಇನ್ನೂ ಈಡೇರಿಲ್ಲ. ಹೀಗಿದ್ದರೂ ದಿನಕ್ಕೆ ಹತ್ತಾರು ಬಾರಿ ಟೋಲ್ ಗಳಲ್ಲಿ ಓಡಾಡುವ ಜನರಿಂದ ಹಣ ಪೀಕಿಸುವ ಹುನ್ನಾರ ನಡೆದಿದೆ. ಹೀಗಾಗಿ ಜಿಲ್ಲೆಯ ಹೆಜಮಾಡಿ ಮತ್ತು ಸಾಸ್ತಾನದ ನಾಗರಿಕರನ್ನು ಹೋರಾಟಕ್ಕಿಳಿಯುವಂತೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+