7 ಮಂದಿ ಮೀನುಗಾರರ ನಾಪತ್ತೆಗೆ ನೌಕಾಸೇನೆಯೇ ಕಾರಣ:ಪ್ರಮೋದ್ ಮಧ್ವರಾಜ್ ಗಂಭೀರ ಆರೋಪ

ಉಡುಪಿ, ಮಾರ್ಚ್ 24: ಏಳು ಮಂದಿ ಮೀನುಗಾರರ ನಾಪತ್ತೆಗೆ ನೌಕಾಸೇನೆಯೇ ಕಾರಣ. ನಾಪತ್ತೆ ಹಿಂದೆ ನೌಕಾಸೇನೆಯವರ ಕೈವಾಡ ಇದೆ ಅನ್ನೋ ಸಂಶಯ ಬರ್ತಾ ಇದೆ. ನೌಕಾಸೇನೆಯ ಶಿಪ್ ಮೀನುಗಾರರ ಬೋಟ್ ಗೆ ಹಿಟ್ ಎಂಡ್ ರನ್ ಮಾಡಿರುವ ಸಂಶಯ ಇದೆ ಅಂತ ಉಡುಪಿ-ಚಿಕ್ಕಮಗಳೂರು ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಗಂಭೀರ ಆರೋಪ ಮಾಡಿದ್ದಾರೆ.

ಉಡುಪಿಯ ಡಿಸಿಸಿ ಕಚೇರಿಯಲ್ಲಿ ಬಿಜೆಪಿ ಮತ್ತು ಸಂಸದೆ ಶೋಭಾ ವಿರುದ್ಧ ಹರಿಹಾಯ್ದ ಅವರು, ಮಲ್ಪೆಯ ಮೀನುಗಾರರು ನಾಪತ್ತೆಯಾಗಿ ನಾಲ್ಕು ತಿಂಗಳೆ ಕಳೆದಿವೆ.ಆದರೂ ನೌಕಾಸೇನೆ ಹುಡುಕುವ ನಾಟಕ ಮಾಡಿದೆ ಎಂದು ದೂರಿದರು.

ಚುನಾವಣೆವರೆಗೆ ಸತ್ಯ ಮರೆಮಾಚುವ ಪ್ರಯತ್ನ‌ ಇದಾಗಿದೆ. ಈ ಪ್ರಶ್ನೆಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಉತ್ತರಿಸಬೇಕು.ಶೋಭಾ ನಾಮಪತ್ರ ಸಲ್ಲಿಸುವಾಗ ನಿರ್ಮಲಾ ಸೀತಾರಾಮ ನ್ ಬರ್ತಾರಂತೆ.ಮೀನುಗಾರರು ಕಾಣೆಯಾದ ಪ್ರಕರಣ ಏನಾಯ್ತು ಎಂದು ರಕ್ಷಣಾ ಸಚಿವರೇ ಉತ್ತರಿಸಬೇಕು.

Pramod Madhwaraj charged ship was missing because of the Navy

ನೊಂದ ಮನೆಯವರ ನೋವಿಗೆ ಯಾರು ಉತ್ತರಿಸ್ತಾರೆ? ಎಂದ ಪ್ರಮೋದ್, ಮೀನುಗಾರರು ಬದುಕಿದ್ದಾರೋ, ಸತ್ತಿದ್ದಾರೋ ಗೊತ್ತಿಲ್ಲ. ಮೀನುಗಾರ ಸಮುದಾಯಕ್ಕೆ ಕೇಂದ್ರ ಸರ್ಕಾರ ಏನೂ ಮಾಡಿಲ್ಲ. ಮೀನುಗಾರ ಅವಘಡದಲ್ಲಿ ಬಲಿಯಾದ್ರೆ ಕೇವಲ ಎರಡು ಲಕ್ಷ ಪರಿಹಾರ ಕೊಡ್ತಾರೆ.ನಾವದನ್ನು ಹೆಚ್ಚಿಸಿದ್ದೇವೆ ಎಂದು ತಿಳಿಸಿದರು.

ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಓರ್ವ ಬ್ಲಾಕ್ ಮೇಲರ್ ಎಂದ ಪ್ರಮೋದ್, ನಾವು ತಂದೆಯ ಕಾಲದಿಂದ ವ್ಯವಹಾರ ಮಾಡ್ತಾ ಇದ್ದೇವೆ. ಸಿಂಡಿಕೇಟ್ ಬ್ಯಾಂಕ್ ನಲ್ಲೇ ನಿರಂತರ ವ್ಯವಹಾರ ಮಾಡ್ತಿದ್ದೇವೆ.ಸರಿಯಾದ ಆಸ್ತಿ ಅಡಮಾನ ಇಲ್ದೇ ಯಾವ ಬ್ಯಾಂಕೂ ಸಾಲ ಕೊಡಲ್ಲ. ಸ್ಥಳೀಯ ಬಿಜೆಪಿಯವರು ಅವರನ್ನು ಛೂ ಬಿಟ್ಟಿದ್ದಾರೆ.ಅದಕ್ಕೆ ಅವರು ಚುನಾವಣೆ ವೇಳೆ ಬರ್ತಾರೆ ಎಂದು ಹರಿಹಾಯ್ದರು.

ಶೋಭಾ ಸಂಸದೆಯಾಗಿ ಕ್ಷೇತ್ರದಲ್ಲಿ ಇದ್ದರೋ ಇಲ್ವೋ ಗೊತ್ತಾಗಲ್ಲ. ಬಿಜೆಪಿ ನಾಯಕರೇ ಗೋ ಬ್ಯಾಕ್ ಶೋಭಾ ಅಂತಾರೆ.ಈಗ ಮತದಾರರು ಗೋ ಬ್ಯಾಕ್ ಶೋಭಾ ಹೇಳಲು ತಯಾರಾಗಿದ್ದಾರೆ ಎಂದು ಪ್ರಮೋದ್ ಟೀಕಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+