ಕೃಷ್ಣಮಠದಲ್ಲಿ ಭಕ್ತರಿಗೆ ವಿತರಿಸಲು ಈ ವರ್ಷ ಲಕ್ಷ ಚಕ್ಕುಲಿ, ಉಂಡೆ
ಉಡುಪಿ, ಸೆಪ್ಟೆಂಬರ್ 10: ಶ್ರೀಕೃಷ್ಣ ಮಠದಲ್ಲಿ, ಶ್ರೀಕೃಷ್ಣ ಜನ್ಮಾಷ್ಟಮಿ ಬಂತೆಂದರೆ ಭಕ್ತರಿಗೆ ಎಲ್ಲಿಲ್ಲದ ಖುಷಿ, ಸಂಭ್ರಮ. ಆದರೆ ಕೊರೊನಾದಿಂದಾಗಿ ಈ ಬಾರಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.
ಆದರೆ ಭಕ್ತರು ನಿರಾಶರಾಗಬೇಕಿಲ್ಲ. ಭಕ್ತರಿಗಾಗಿ ಅಷ್ಟಮಿಯ ಪ್ರಸಾದ ಉಂಡೆ ಚಕ್ಕುಲಿ ಸಿದ್ಧಗೊಂಡಿವೆ. ಈ ಬಾರಿ ತಲಾ ಒಂದು ಲಕ್ಷದಷ್ಟು ಉಂಡೆ ಚಕ್ಕುಲಿ ತಯಾರಿಸಲಾಗಿದೆ. ಆದರೆ ಭಕ್ತರು ಇದನ್ನು ನೇರವಾಗಿ ಬಂದು ಪಡೆಯುವಂತಿಲ್ಲ.

ಭಕ್ತಾದಿಗಳಿಗೆ ಉತ್ಸವದಲ್ಲಿ ಭಾಗವಹಿಸಲು ಸಾಧ್ಯವಾಗದಿರುವುದರಿಂದ, ಪರ್ಯಾಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಆಶಯದಂತೆ ಸಾಧ್ಯವಾದಷ್ಟು ಭಕ್ತಾದಿಗಳಿಗೆ ಕೃಷ್ಣ ಪ್ರಸಾದ ವಿತರಣೆ ನಡೆಯಲಿದೆ. ಮಠದ ಸಿಬ್ಬಂದಿ ಪ್ರಸಾದ ವಿತರಿಸಲು ಸಿದ್ಧತೆಯನ್ನು ನಡೆಸುತ್ತಿದ್ದಾರೆ.
Recommended Video
ಚಿತ್ರೋದ್ಯಮ ಬಂದ್ ? ಇವರಿಗೆಲ್ಲ ತುಂಬಾ loss! | Shivarajkumar | Filmibeat Kannada












Click it and Unblock the Notifications