ದೇವಾನುದೇವತೆಗಳ ಕಾಲದಿಂದಲೂ ಮದ್ಯ ಇದೆ: ಬಿ.ಸಿ.ಪಾಟೀಲ್ ಸಮರ್ಥನೆ

ಉಡುಪಿ, ಮೇ 05: "ಕೊರೊನಾ ಬಂದು ಸತ್ತವರಿಗಿಂತ ಮದ್ಯ ಸಿಕ್ಕಿಲ್ಲ ಅಂತ ಸತ್ತವರೇ ಜಾಸ್ತಿ ಇದ್ದಾರೆ. ಹಾಗಂತ ನಾವು ಮದ್ಯಪಾನವನ್ನು ಪ್ರೋತ್ಸಾಹ ಮಾಡುತ್ತೇವೆ ಅಂತಲ್ಲ. ಮದ್ಯಪಾನ ಈ ಕಾಲದಲ್ಲಿ ಪರಿಚಿತವಾಗಿರುವ ಪಿಡುಗಲ್ಲ. ದೇವಾನುದೇವತೆಗಳ ಕಾಲದಿಂದಲೂ ಮದ್ಯಪಾನ ಇತ್ತು" ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ ಕೃಷಿ ಸಚಿವ ಬಿ.ಸಿ ಪಾಟೀಲ್.

Recommended Video

      ನನಗೆ ನಾನೇ ಹೈ ಕಮಾಂಡ್ ಎಷ್ಟೇ ನೋವಿದ್ರೂ ಸಿದ್ದರಾಮಯ್ಯ ಮುಖ ನೋಡ್ಕೊಂಡು ಸುಮ್ನಿದ್ವಿ | Shivanand | Siddaramaiah

      ರಾಜ್ಯಾದ್ಯಂತ ಮದ್ಯದಂಗಡಿಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡುತ್ತಿದ್ದಂತೆ ಹಲವರಿಂದ ಆಕ್ಷೇಪ, ವಿರೋಧ ವ್ಯಕ್ತವಾಗಿತ್ತು. ಈ ಕುರಿತು ಉಡುಪಿಯಲ್ಲಿ ಇಂದು ಮಾತನಾಡಿದ ಸಚಿವರು, "ಅಬಕಾರಿ ಇಲಾಖೆಯಿಂದ ಸರ್ಕಾರಕ್ಕೆ ಮೂಲ ಆದಾಯ ಇದೆ. ಹೀಗಾಗಿ ಮದ್ಯಪಾನಕ್ಕೆ ಅವಕಾಶ ನೀಡದೆ ಬೇರೆ ದಾರಿಯೇ ಇಲ್ಲ. ರಾಜ್ಯದಲ್ಲಿ ಕುಡುಕರು ಆರಡಿ ಅಲ್ಲ, 12 ಅಡಿ ದೂರ ನಿಂತಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಂಡೇ ಮದ್ಯ ಖರೀದಿಸಿದ್ದಾರೆ" ಎಂದು ಮದ್ಯಪ್ರಿಯರ ಪರ ಮಾತನಾಡಿದ್ದಾರೆ.

      Agriculture Minister BC Patil Defended Opening Liquor Shops Statewide

      ಮದ್ಯಪಾನ ಆರಂಭಿಸಿರುವುದಕ್ಕೆ ಅಷ್ಟೊಂದು ಪ್ರಾಮುಖ್ಯ ನೀಡಬೇಕಾಗಿಲ್ಲ ಎಂದ ಸಚಿವರು, ಕೊರೊನಾ ಬಂದ ನಂತರ ಯಾರೂ ಕೃಷಿ ಭೂಮಿ ಖಾಲಿ ಬಿಡಲು ತಯಾರಿಲ್ಲ. ಬೆಂಗಳೂರು ಮುಂಬೈಗೆ ವಲಸೆ ಹೋದವರು ಕೂಡ ಊರಿಗೆ ವಾಪಸ್ಸು ಬರುತ್ತಾರೆ. ಕೃಷಿ ಅಂದರೆ ಏನು ಅಂತ ಕೊರೊನಾ ಬಂದ ನಂತರ ಜನರಿಗೆ ಅರ್ಥವಾಗಿದೆ. ಲಾಭದಾಯಕ ಕೃಷಿ ಮಾಡಬೇಕು ಅನ್ನೋ ಮನೋಭಾವನೆ ಬಂದಿದೆ. ಯುವಕರು ಕೃಷಿಯತ್ತ ಆಸಕ್ತಿ ತೋರಿಸುತ್ತಿದ್ದಾರೆ ಎಂದು ಹೇಳಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+