ಉಡುಪಿ ಕೋರ್ಟ್ ಆವರಣದಲ್ಲಿ ಮೊಳಗಿದ ನಕ್ಸಲ್ ಘೋಷಣೆ
ಉಡುಪಿ. ಆಗಸ್ಟ್ 21: ಕರಾವಳಿಯಲ್ಲಿ ಮತ್ತೆ ನಕ್ಸಲ್ ಘೋಷಣೆ ಮೊಳಗಿದೆ. ಉಡುಪಿ ಜಿಲ್ಲಾ ಕೋರ್ಟ್ ಆವರಣದಲ್ಲಿ ನಕ್ಸಲ್ ಪರ ಘೋಷಣೆ ಕೇಳಿ ಬಂದಿದೆ.
2008ರಲ್ಲಿ ಕಾರ್ಕಳದ ಹೆಬ್ರಿಯಲ್ಲಿ ನಡೆದಿದ್ದ ಭೋಜ ಶೆಟ್ಟಿ ಎಂಬವರ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ನಕ್ಸಲ್ ವೀರಮಣಿ, ಸೋಮವಾರ ಕೋರ್ಟ್ ಆವರಣದಲ್ಲಿ ನಕ್ಸಲ್ ಪರ ಘೋಷಣೆ ಕೂಗಿದ್ದಾರೆ.

"ಮಾವೋವಾದಕ್ಕೆ ಜಯವಾಗಲಿ. ನಕ್ಸಲೀಯರು ದೇಶ ಭಕ್ತರು. ದಮನ ನೀತಿಗೆ ನಾವು ಹೆದರೋದಿಲ್ಲ. ಮಲೆನಾಡಿಂದ ಜನರ ಎತ್ತಂಗಡಿ ಕಾರ್ಯ ನಡೆಯೋದಿಲ್ಲ.
ರಾಜ್ಯದಲ್ಲಿ ಹಿಂದಿ ಹೇರಿಕೆಯನ್ನು ವಿರೋಧಿಸೊಣ. ನಕ್ಸಲ್ ಶರಣಾಗತಿ ಎಂದಿಗೂ ಇಲ್ಲವೇ ಇಲ್ಲ. ಅಮರ ವೀರರ ಆಶಯಗಳನ್ನು ಈಡೇರಿಸೋಣ ಮಾವೋಯಿಸಂ ಜಿಂದಾಬಾದ್" ಎಂದು ಘೋಷಣೆ ಕೂಗಿದ್ದಾನೆ.
ಈ ಹಿಂದೆಯೂ ಈತ ಭೋಜ ಶೆಟ್ಟಿ ಎನ್ನುವರ ಕೊಲೆ ಪ್ರಕರಣದಲ್ಲಿ ಕುಂದಾಪುರ ನ್ಯಾಯಾಲಯಕ್ಕೆ ಹಾಗೂ ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನಕ್ಸಲ್ ಪರ ಘೋಷಣೆಗಳನ್ನು ಕೂಗಿದ್ದ.












Click it and Unblock the Notifications