ರಾಮೇಶ್ವರದಲ್ಲೇ ನನ್ನ ನಾಮಕರಣವಾಗಿದೆ: ರಮಾನಾಥ ರೈ ತಿರುಗೇಟು
ಕಾರ್ಕಳ, ಜನವರಿ 25: ನಾನು ಚಿಕ್ಕವನಿದ್ದಾಗ ನನ್ನ ತಂದೆ ನನ್ನನ್ನು ರಾಮೇಶ್ವರಕ್ಕೆ ಕರೆದುಕೊಂಡು ಹೋಗಿ ರಮಾನಾಥ ಎಂದು ನಾಕರಣ ಮಾಡಿದ್ದಾರೆ. ಆದ್ದರಿಂದ ರಾಮ ಎಂದರೆ ಯಾರು ಎಂದು ನಾನು ಕಾರ್ಕಳದ ಶಾಸಕ ಸುನಿಲ್ ಕುಮಾರ್ ಅವರಿಂದ ಕಲಿಯಬೇಕಿಲ್ಲ ಎಂದು ಅವರು ಹೇಳಿದ್ದಾರೆ.
ಸ್ವಲ್ಪ ದಿನಗಳ ಹಿಂದೆ ಶಾಸಕ ಸುನಿಲ್ ಕುಮಾರ್ ಅವರು ರಮಾನಾಥ ರೈ ಅವರಿಗೆ ಅವರ ಕ್ಷೇತ್ರ ಬಂಟ್ವಾಳದಲ್ಲಿ ಭಾಷಣ ಮಾಡುತ್ತಾ ಇಲ್ಲಿ ರಾಮ ಮತ್ತು ಅಲ್ಲಾಹು ನಡುವೆ ಚುನಾವಣೆ ನಡೆಯಲಿದೆ ಎಂದು ಹೇಳಿದ್ದರು. ಅದಕ್ಕೆ ರಮಾನಾಥ ರೈ ಅವರು ಸುನಿಲ್ ಕುಮಾರ್ ಅವರ ಕ್ಷೇತ್ರ ಕಾರ್ಕಳಕ್ಕೆ ಆಗಮಿಸಿ ಮಾತಿನ ತಿರುಗೇಟು ನೀಡಿದರು.

ಜನಸಾಮಾನ್ಯರು ರಾಮ, ಅಲ್ಲಾ, ಏಸು ಯಾರೇ ಆಗಲಿ ಎಲ್ಲರನ್ನೂ ತಮ್ಮ ದೇವರೆಂದು ನಂಬುತ್ತಾರೆ, ಆದರೇ ಸುನೀಲ್ ಕುಮಾರ್ ಇಂತಹ ಕನಿಷ್ಠ ಜ್ಞಾನ ಇಲ್ಲದ ವ್ಯಕ್ತಿ. ದೇವರನ್ನು ನಂಬುವವರು, ಗೌರವಿಸುವವರು ಇಂತಹ ಸಣ್ಣ ಮಾತುಗಳನ್ನು ಆಡುವುದಕ್ಕೆ ಸಾಧ್ಯವಿಲ್ಲ ಎಂದವರು ಟೀಕಿಸಿದರು.












Click it and Unblock the Notifications