• search
 • Live TV
ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೈಂದೂರಿನಲ್ಲಿ ಮಹಾಲಯ ಅಮವಾಸ್ಯೆಯಂದು ಶಾಸಕರ ಪಂಜೆ ಜಾರಿದ ಪ್ರಸಂಗ

|
   ಉಡುಪಿಯ ಬೈಂದೂರಿನ ಶಾಸಕರ ಪಂಚೆ ಜಾರಿದ ವಿಡಿಯೋ ವೈರಲ್ | Oneindia Kannada

   ಉಡುಪಿ, ಅಕ್ಟೋಬರ್. 10: ಮಹಾಲಯ ಅಮಾವಾಸ್ಯೆ ಹಿನ್ನೆಲೆಯಲ್ಲಿ ಸಮುದ್ರ ಸ್ನಾನಕ್ಕೆ ಇಳಿದ ಶಾಸಕರೊಬ್ಬರ ಪಂಚೆ ಜಾರಿ ಹೋದ ಘಟನೆ ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ನಡೆದಿದೆ. ಮಹಾಲಯ ಅಮಾವಾಸ್ಯೆಯಂದು ಬೈಂದೂರು ಶಾಸಕ ಸುಕುಮಾರ ಶೆಟ್ಟಿ ತ್ರಾಸಿ ಕಡಲ ಕಿನಾರೆಗೆ ತೆರಳಿದ್ದರು.

   ಅಲ್ಲಿ ಪುಣ್ಯಸ್ನಾನಕ್ಕೆಂದು ಶಾಸಕರು ಮಂಗಳವಾರ (ಅ.10) ಮಧ್ಯಾಹ್ನ ಕಡಲಿಗೆ ಇಳಿದಿದ್ದರು. ಸಮುದ್ರದಲ್ಲಿ ಅಲೆಗಳ ಆರ್ಭಟ ಹೆಚ್ಚಾಗಿದ್ದ ಕಾರಣ ಜೊತೆಗಿದ್ದವರು ಶಾಸಕರಿಗೆ ಕಿನಾರೆಯಲ್ಲೇ ಸಮುದ್ರ ಸ್ನಾನ ಮಾಡಲು ಸೂಚಿಸಿದ್ದರು. ಆದರೆ ಅದನ್ನು ನಿರ್ಲಕ್ಷಿಸಿದ ಸುಕುಮಾರ್ ಶೆಟ್ಟಿ ಕಡಲಿಗಿಳಿದು ಮುಳುಗು ಸ್ನಾನಕ್ಕೆ ಮುಂದಾಗಿದ್ದರು.

   ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೆಂದು ಪಾದಯಾತ್ರೆ ನಡೆಸಿದ ಶಾಸಕ

   ಈ ಸಂದರ್ಭದಲ್ಲಿ ಸಮುದ್ರದಲ್ಲಿ ಎದ್ದ ಭಾರೀ ಅಲೆಯ ಹೊಡೆತಕ್ಕೆ ಸಿಲುಕಿದ ಶಾಸಕರು ಜಾರಿ ಬಿದ್ದಿದ್ದಾರೆ. ಜಾರಿಬಿದ್ದ ರಭಸಕ್ಕೆ ಧರಿಸಿದ್ದ ಪಂಚೆ ಜಾರಿದೆ. ತಕ್ಷಣ ಎಚ್ಚೆತ್ತ ನೆರೆದವರು ಸಹಾಯಕ್ಕೆ ಧಾವಿಸಿ ಶಾಸಕರನ್ನು ಅಪಾಯದಿಂದ ರಕ್ಷಿಸಿದ್ದಾರೆ.

   ಹಾಲಾಡಿ ಸ್ಪರ್ಧೆಯಿಂದ ಬೈಂದೂರಲ್ಲಿ ಬಿಜೆಪಿಗೆ ಪ್ಲಸ್: ಸುಕುಮಾರ ಶೆಟ್ಟಿ

   ಆದರೆ ಶಾಸಕರ ಪಂಚೆ ಜಾರಿದ ವಿಡಿಯೋ ಮಾತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

   English summary
   Baindooru MLA Sukumar shettys waist falls during his dip inside the sea during Mahalaya Amavasey. The video of this has gone viral now on social media.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X