ಕುಂದಾಪುರದ ರಸ್ತೆಯಲ್ಲಿ ಕತ್ತಿ ಹಿಡಿದು ಓಡಾಡಿ ಆತಂಕ ಸೃಷ್ಟಿಸಿದ ವ್ಯಕ್ತಿ
ಉಡುಪಿ, ಮಾರ್ಚ್ 11: ಕೈಯ್ಯಲ್ಲಿ ಕತ್ತಿ ಹಿಡಿದು ರಸ್ತೆಯಲ್ಲಿ ನಡೆದಾಡುತ್ತಿದ್ದ ವ್ಯಕ್ತಿಯೊಬ್ಬ ತನ್ನನ್ನು ತಾನೇ ಕಡಿದುಕೊಂಡು ಆತಂಕ ಸೃಷ್ಟಿಸಿದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ನಡೆದಿದೆ.
ಕುಂದಾಪುರ ರಾಮಮಂದಿರ ರಸ್ತೆಯಲ್ಲಿ ಭಾನುವಾರ ಸಂಜೆ ಈ ಘಟನೆ ನಡೆದಿದೆ. ಅಪರಿಚಿತ ಯುವಕನ ಈ ವರ್ತನೆಯಿಂದ ಒಂದೊಮ್ಮೆ ಸ್ಥಳೀಯರು ಭಯಭೀತರಾಗಿದ್ದಾರೆ. ಈ ಕುರಿತ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
40 ವರ್ಷ ಪ್ರಾಯದ ಈತ ಕೊಪ್ಪಳ ಮೂಲದವ ಎಂದು ಗುರುತಿಸಲಾಗಿದ್ದು ಮಾನಸಿಕ ಅಸ್ವಸ್ಥ ಎಂದು ಹೇಳಲಾಗಿದೆ. ಈತ ರಸ್ತೆಯಲ್ಲಿ ಕತ್ತಿ ಹಿಡಿದು ನಡೆದಾಡುತ್ತಾ ಕತ್ತಿಯಿಂದ ತನ್ನ ಕುತ್ತಿಗೆ ಭಾಗ ಮತ್ತು ಮರ್ಮಾಂಗವನ್ನು ಕಡಿದು ಕೊಂಡಿದ್ದ.

ಇದನ್ನು ನೋಡಿದ ಸ್ಥಳೀಯರು ಆತಂಕಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸ್ ಸಿಬ್ಬಂದಿಗಳು ಮಾನಸಿಕ ಅಸ್ವಸ್ಥನನ್ನು ವಶಕ್ಕೆ ಪಡೆದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.












Click it and Unblock the Notifications