ಕುಂದಾಪುರ: ಭಾರೀ ಅಕ್ರಮ ಗೋ ಸಾಗಾಟ ತಡೆದ ಪೇದೆ ಕೊಲೆಗೆ ಯತ್ನ
ಉಡುಪಿ, ಅಕ್ಟೋಬರ್ 17: ಕುಂದಾಪುರದ ಕಂಡ್ಲೂರಿನಲ್ಲಿ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ವಾಹನವನ್ನು ಪೊಲೀಸರು ತಡೆದಿದ್ದಾರೆ.
ಇಂದು ಮುಂಜಾನೆ 6 ಗಂಟೆಗೆ ಈ ಘಟನೆ ನಡೆದಿದ್ದು, 25 ಜಾನುವಾರುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು 10 ಹಸುಗಳು ಸಾವನ್ನಪ್ಪಿವೆ.

ಇನ್ನು ವಾಹನ ತಡೆಯಲು ಮುಂದಾದ ಪೊಲೀಸ್ ಪೇದೆ ಪ್ರಶಾಂತ ನಾಗಣ್ಣ ಎಂಬವರ ಹತ್ಯೆಗೂ ಕಳ್ಳ ಸಾಗಣೆ ಮಾಡುತ್ತಿದ್ದ ಆರೋಪಿಗಳು ಯತ್ನಿಸಿದ್ದು, ವಾಹನ ತಾಗಿ ಗಾಯವಾಗಿದೆ. ಅವರಿಗೆ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಆರಂಭದಲ್ಲಿ ಗೋ ಸಾಗಟ ಮಾಡುತ್ತಿದ್ದ ಪಿಕ್ ಅಪ್ ವಾಹನ ಪೊಲೀಸರ ಕಣ್ಣಿಗೆ ಬಿದ್ದಿತ್ತು. ಈ ವಾಹನವನ್ನು ಪೊಲೀಸರು ಬೆನ್ನತ್ತಿದಾಗ ಪೇದೆ ಮೇಲೆ ಹತ್ಯೆಗೆ ಯತ್ನಿಸಿದ ಆರೋಪಿಗಳು ಗುಲ್ವಾಡಿ ಸೇತುವೆ ಬಳಿ ಪಿಕ್ ಅಪ್ ವಾಹನ ಬಿಟ್ಟು ಪರಾರಿಯಾಗಿದ್ದರು. ಇಲ್ಲಿಂದ ಪಿಕ್ ಅಪ್ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಗೋ ಸಾಗಾಟ ಮಾಡುತ್ತಿದ್ದ ಕದೀಮರು ಪರಾರಿಯಾಗಿದ್ದಾರೆ.
ಕುಂದಾಪುರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.












Click it and Unblock the Notifications