ಬಿಜೆಪಿಗಿಂತ ಒಳ್ಳೆಯ ಹಿಂದುತ್ವ ಪಾಲಿಸುತ್ತೇವೆ: ಕುಮಾರಸ್ವಾಮಿ
ಉಡುಪಿ, ಅಕ್ಟೋಬರ್.30: ಕರಾವಳಿ ಜನ ಹಿಂದುತ್ವಕ್ಕೆ ಬಲಿಯಾಗುತ್ತಿದ್ದಾರೆ. ಆದರೆ ನಾವು ಬಿಜೆಪಿಗಿಂತ ಒಳ್ಳೆಯ ಹಿಂದುತ್ವ ಪಾಲಿಸುತ್ತೇವೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.
ಉಡುಪಿಯ ತ್ರಾಸಿಯಲ್ಲಿ ಶಿವಮೊಗ್ಗ ಲೋಕಸಭಾ ಉಪಚುನಾವಣೆಯ ಪ್ರಚಾರದ ಅಂಗವಾಗಿ ಮಾತನಾಡಿದ ಅವರು ಹಿಂದೂ-ಮುಸಲ್ಮಾನರು ಸಂಘರ್ಷಕ್ಕೆ ಒಳಗಾಗಬೇಡಿ. ಹಿಂದುತ್ವದಲ್ಲಿ ನಾವು ಬಿಜೆಪಿಗಿಂತ ಒಂದು ಹೆಜ್ಜೆ ಮುಂದೆ ಇದ್ದೇವೆ. ಬಿಜೆಪಿ ಭಾವನಾತ್ಮಕ ವಿಚಾರವನ್ನು ಜನರ ಮುಂದಿಡುತ್ತ ಚುನಾವಣೆ ನಡೆಸುತ್ತದೆ ಎಂದು ಟೀಕಿಸಿದರು.
ಬಿಜೆಪಿ ನಾಯಕರು ಸರಕಾರ ಬೀಳುವ ಕನಸಲ್ಲಿದ್ದಾರೆ. ನಮಗೆ ದೈವ ಪ್ರೇರೇಪಣೆ ಇದೆ. ನಾನು ಎಷ್ಟು ದಿನ ಅಧಿಕಾರದಲ್ಲಿ ಇರಬೇಕೆನ್ನುವುದು ದೇವರು ತೀರ್ಮಾನಿಸ್ತಾರೆ. ಉಪಚುನಾವಣೆ ನಂತರ ನಾನು ಮನೆಗೆ ಹೋಗಲ್ಲ.

ಯಡಿಯೂರಪ್ಪ ಹೇಳಿದಂತೆ ಯಾವುದೂ ಆಗಲ್ಲ. ಬಡವರ ಮನೆಗೆ ನಾನು ಬರುತ್ತೇನೆ. ಬಂದು ಚರ್ಚೆ ಮಾಡುತ್ತೇನೆ. ಸರ್ಕಾರದ ಖಜಾನೆಯಲ್ಲಿ ಸಾಕಷ್ಟು ದುಡ್ಡು ಇದೆ. ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿಲ್ಲ. ಉಪಚುನಾವಣೆಯಲ್ಲಿ ಅಪ್ಪ ಮಕ್ಕಳನ್ನು ಸೋಲಿಸಬೇಕೆಂದು ತಿಳಿಸಿದರು.












Click it and Unblock the Notifications