ಸೌದಿ ಅರೇಬಿಯಾದಲ್ಲಿ ಡಿಎಲ್ ಪಡೆದ ಮೊದಲ ಕನ್ನಡತಿ ಡಾ. ವಾಣಿಶ್ರೀ

ಉಡುಪಿ, ಡಿಸೆಂಬರ್ 21: ಕನ್ನಡತಿಯೊಬ್ಬರು ಕೊಲ್ಲಿ ರಾಷ್ಟ್ರ ಸೌದಿ ಅರೇಬಿಯಾದಲ್ಲಿ ಪ್ರಥಮ ಬಾರಿಗೆ ವಾಹನ ಚಾಲನಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪರವಾನಗಿ ಪಡೆದುಕೊಂಡಿದ್ದಾರೆ.

ಸೌದಿ ಅರೇಬಿಯಾದಲ್ಲಿ ಮಹಿಳೆಯರಿಗಿದ್ದ ವಾಹನ ಚಾಲನಾ ನಿಷೇಧ ತೆರವುಗೊಂಡ ಬಳಿಕ ಇದೇ ಮೊದಲಬಾರಿಗೆ ಅಲ್ಲಿನ ಚಾಲನಾ ಪರೀಕ್ಷೆಯಲ್ಲಿ ಕನ್ನಡತಿಯೊಬ್ಬರು ಉತ್ತೀರ್ಣರಾಗಿ ಪ್ರಥಮ ಬಾರಿಗೆ ಪರವಾನಗಿ ಪಡೆದುಕೊಂಡಿದ್ದಾರೆ.

ಮೂಲತಃ ಕುಂದಾಪುರ ಆಲ್ಬಾಡಿ ನಿವಾಸಿ ಡಾ. ವಾಣಿಶ್ರೀ ಸೌದಿ ಅರೇಬಿಯಾದಲ್ಲಿ ಚಾಲನಾ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಡಾ ವಾಣಿಶ್ರೀ ಪ್ರಸ್ತುತ ಪತಿ ಹಾಗೂ ಇಬ್ಬರು ಪುತ್ರರೊಂದಿಗೆ ಸೌದಿ ಅರೇಬಿಯಾ ರಾಜಧಾನಿ ರಿಯಾದ್‌ನಲ್ಲಿ ಕಳೆದ 15ವರ್ಷಗಳಿಂದ ನೆಲೆಸಿದ್ದಾರೆ.

ದಂತವೈದ್ಯೆ ಯಾಗಿರುವ ಡಾ.ವಾಣಿಶ್ರೀ ಸಂತೋಷ್ ಶೆಟ್ಟಿ ನವೆಂಬರ್ 21ರಂದು ವಾಹನ ಚಾಲನಾ ಪರವಾನಗಿ ಪಡೆದುಕೊಂಡಿದ್ದಾರೆ. ಈ ಮೂಲಕ ಸೌದಿ ಅರೇಬಿಯಾದಲ್ಲಿ ಡಿ ಎಲ್ ಪಡೆದ ರಾಜ್ಯದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Karnatakas first woman to get driving licence in Saudi Arabia

ಸೌದಿ ಅರೇಬಿಯಾದಲ್ಲಿ ಚಾಲನಾ ಪರೀಕ್ಷೆ ಪಾಸ ಮಾಡುವುದು ಅಷ್ಟು ಸಲಭವಲ್ಲ. ಸೌದಿಯ ಚಾಲನಾ ಪರೀಕ್ಷೆ ಭಾರೀ ಕಠಿಣವಾಗಿದ್ದು, ಭಾರತೀಯ ಚಾಲಕರಿಗೆ ಸವಾಲಾಗಿದೆ. ಚಾಲನಾ ಕೌಶಲವನ್ನು ಸಂಪೂರ್ಣವಾಗಿ ಡಿಜಿಟಲ್ ಪ್ರಕ್ರಿಯೆಯಲ್ಲಿ ದಾಖಲಿಸುವ ವ್ಯವಸ್ಥೆ ಅಲ್ಲಿದೆ. ಆ ಬಳಿಕವಷ್ಟೆ ವಿವಿಧ ಮಾನದಂಡಗಳನ್ನು ಅನುಸರಿಸಿ ಪರವಾನಗಿಗೆ ಶಿಫಾರಸು ಮಾಡಲಾಗುತ್ತದೆ.

ಸಂಪ್ರದಾಯದ ಹೆಸರಿನಲ್ಲಿ ಮಹಿಳೆಯರು ವಾಹನ ಚಲಾಯಿಸುವುದನ್ನು ನಿಷೇಧಿಸಿದ್ದ ಸೌದಿ ಅರೇಬಿಯಾದಲ್ಲಿ ನಿಷೇಧ ತೆರವಿಗೆ ನಿರಂತರ ಹೋರಾಟ ನಡೆಯುತ್ತಿತ್ತು. ಸೌದಿ ದೊರೆ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಆಲ್-ಸೌದ್ ರೂಪಿಸಿದ 'ಮಿಷನ್ 2030' ಎಂಬ ಯೋಜನೆ ಅಂಗವಾಗಿ ಮಹಿಳಾ ಸಬಲೀಕರಣದ ಪ್ರಮುಖ ಹೆಜ್ಜೆಯಾಗಿ ದೇಶದ ಮಹಿಳೆಯರಿಗೆ ವಾಹನ ಚಾಲನೆಗೆ ಅವಕಾಶ ನೀಡುವ ಐತಿಹಾಸಿಕ ನಿರ್ಧಾರವನ್ನು 2017 ಸೆಪ್ಟೆಂಬರ್‌ನಲ್ಲಿ ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಈಗ ಸೌದಿಯಲ್ಲಿ ಮಹಿಳೆಯರು ಕಾರ್ ಗಳನ್ನು ರಸ್ತೆಗೆ ಇಳಿಸಿದ್ದಾರೆ.

ಒಂದು ವೇಳೆ ಮಹಿಳಾ ಚಾಲಕರನ್ನೊಳಗೊಂಡ ವಾಹನಗಳು ಅಪಘಾತಕ್ಕೆ ಗುರಿಯಾದ ಸಂದರ್ಭ ತನಿಖೆ ನಡೆಸುವುದಕ್ಕಾಗಿ ಮಹಿಳಾ ಇನ್‌ಸ್ಟೆಕ್ಟರ್ ಗಳನ್ನು ನೇಮಿಸಲಾಗಿದೆ. ಖಾಸಗಿ ವಿಮಾ ಕಂಪನಿ ಮೂಲಕ ನೇಮಕಗೊಳಿಸಿ ಅವರಿಗೆ ತರಬೇತಿ ನೀಡಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ವಾಹನ ವಾಲನೆಯ ಪರವಾನಗಿ ಪಡೆದಿದರುವ ವಾಣಿಶ್ರೀ ಶೆಟ್ಟಿ ಪತಿ ಸಂತೋಷ್ ಶೆಟ್ಟಿ ಸೌದಿಯಲ್ಲಿನ ಕರಾವಳಿ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷರಾಗಿದ್ದು,ಸೌದಿಯಲ್ಲಿರುವ ಕನ್ನಡಿಗರನ್ನು ಒಟ್ಟು ಸೇರಿಸಿ ಕನ್ನಡ ರಾಜ್ಯೋತ್ಸವ, ರಕ್ತದಾನ,ಯೋಗ ಶಿಬಿರ, ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘದ ಮೂಲಕ ಆಯೋಜಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+