Kundapura Assembly Constituency Analysis: ಮತ್ತೆ ಅರಳುತ್ತಾ ಕಮಲ? ಸಮೀಕ್ಷೆಗಳು ಹೇಳುವುದೇನು..?
ಉಡುಪಿ, ಮಾರ್ಚ್ 21: ಕುಂದಾಪುರ ತನ್ನ ವಿಶಿಷ್ಟ ಮಾತಿನ ಶೈಲಿ, ಪ್ರಾಕೃತಿಕ ಸೌಂದರ್ಯ ಹಾಗೂ ಕಲೆಯಿಂದ ಕರ್ನಾಟಕದಲ್ಲಿ ಜನಪ್ರಿಯತೆಗಳಿಸಿದ ಉಡುಪಿ ಜಿಲ್ಲೆಯ ತಾಲೂಕು ಕೇಂದ್ರ. ಕುಂದಾಪುರದ ಮೀನು ಎಂದರೆ ಎಲ್ಲೆಡೆ ಜನಪ್ರಿಯ, ಇಲ್ಲಿನ ಕುಂದಗನ್ನಡ ಭಾಷೆ, ಜೀವನ ಶೈಲಿ , ಆಚರಣೆ ಹೀಗೆ ಎಲ್ಲಾ ರೀತಿಯಲ್ಲೂ ವಿಶಿಷ್ಟ, ವಿಭಿನ್ನ ಈ ಕುಂದಾಪುರ ವಿಧಾನಸಭಾ ಕ್ಷೇತ್ರ.
ಕುಚಲಕ್ಕಿ ಅನ್ನ, ಮೀನು ಸಾರು, ಕಂಬಳ, ಯಕ್ಷಗಾನ, ಕೋಲ ಹೀಗೆ ಕುಂದಾಪುರ ವರ್ಣಿಸಲು ಹೋಗಾದ ಸಿಗುವ ರೂಪಕಗಳು ನೂರಾರು. ಭತ್ತ ಇಲ್ಲಿನ ಪ್ರಮುಖ ಬೆಳೆಯಾಗಿದ್ದು, ಅಡಿಕೆ, ಗೇರು ಬೀಜ ಸೇರಿದಂತೆ ಇತರ ತೋಟಗಾರಿಕಾ ಬೆಳೆಗಳನ್ನು ಸಹ ಬೆಳೆಯಲಾಗುತ್ತದೆ. ಉದ್ಯಮದಲ್ಲೂ ಇತ್ತೀಚಿಗೆ ಅಭಿವೃದ್ಧಿ ಹೊಂದುತ್ತಿದ್ದು, ರೈಸ್ ಮಿಲ್, ಗೇರು ಬೀಜ ಕಾರ್ಖಾನೆ, ಮೀನಿನ ಫ್ಯಾಕ್ಟರಿ ಹಾಗೂ ಹಂಚಿನ ಕಾರ್ಖಾನೆಗಳು ಸಾವಿರಾರು ಕೂಲಿ ಕಾರ್ಮಿಕರಿಗೆ ದಿನ ನಿತ್ಯ ಉದ್ಯೋಗ ನೀಡುತ್ತಿವೆ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೋಟ ಶಿವರಾಮ ಕಾರಂತರ ಹುಟ್ಟೂರು, ಇತ್ತೀಚಿಗೆ ಭಾರತೀಯ ಚಿತ್ರರಂಗದಲ್ಲೇ ಹೊಸ ಮೈಲಿಗಲ್ಲು ಸೃಷ್ಟಿಸಿದ ಕಾಂತಾರ ಚಿತ್ರದ ನಿರ್ದೇಶಕ, ನಟ ರಿಷಬ್ ಶೆಟ್ಟಿ ಅವರ ಊರು, ಅಲ್ಲದೇ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ, ಯೋಗರಾಜ್ ಭಟ್, ನಟ ಪ್ರಮೋದ್ ಶೆಟ್ಟಿ ಸೇರಿದಂತೆ ಅನೇಕ ಕಲಾವಿದರ ಊರು ಕುಂದಾಪುರ.
ಮರವಂತೆ, ವಾರಾಹಿ ಜಲವಿದ್ಯುತ್ ಉತ್ಪಾದನಾ ಕೇಂದ್ರ, ಆನೆಗುಡ್ಡೆ , ಕೊಲ್ಲೂರು, ಕಮಲಶಿಲೆ, ಮಾರಣಕಟ್ಟೆ, ಕೋಟ, ಪಡುಕೆರೆ, ಹೀಗೆ ಅನೇಕ ಪ್ರೇಕ್ಷಣಿಯ ಸ್ಥಳಗಳು ಜನರನ್ನು ಕುಂದಾಪುರದತ್ತ ಆಕರ್ಷಿಸುತ್ತದೆ. ಈ ಎಲ್ಲಾ ವಿಶೇಷತೆಗಳಿರುವ ಕುಂದಾಪುರದ ರಾಜಕೀಯ ವಿಶ್ಲೇಷಣೆ ಇಲ್ಲಿದೆ.

ಬಿಜೆಪಿಯ ಭದ್ರಕೋಟೆ ಅದರಲ್ಲೂ ಕುಂದಾಪುರದ ವಾಜಪೇಯಿ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರ ಭದ್ರಕೋಟೆ ಕುಂದಾಪುರ ವಿಧಾನಸಭಾ ಕ್ಷೇತ್ರ. ಕುಂದಾಪುರ ರಾಜಕೀಯ ಇತಿಹಾಸವನ್ನು ನೋಡಿದರೆ ಇಲ್ಲಿ 1983, 1985, 1989, 1994ರಲ್ಲಿ ಕಾಂಗ್ರೆಸಿನ ಕೆ. ಪ್ರತಾಪ್ ಚಂದ್ರ ಶೆಟ್ಟಿ ಗೆಲುವು ಸಾಧಿಸಿದ್ದರು. ಆ ಬಳಿಕ ದಿ ಎ ಜಿಕೊಡ್ಗಿ ಅವರೊಂದಿಗೆ ಪಕ್ಷ ಸಂಘಟನೆಯಲ್ಲಿ ತೊಡಗಿದ್ದ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಬಿಜೆಪಿ ಪಕ್ಷವನ್ನು ಪ್ರತಿನಿಧಿಸಿ ಚುನಾವಣಾ ಕ್ಷಣಕ್ಕೆ ಇಳಿದರು.
1999ರಿಂದ ಆರಂಭಗೊಂಡು ಇಲ್ಲಿಯವರೆಗೆ ಸೋಲಿಲ್ಲದ ಸರದಾರನಂತೆ ಗೆಲುವಿನ ಕುದುರೆ ಏರಿ ಸಾಗುತ್ತಿರುವ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ಸಂಘಟನೆ, ಜಾತಿಯನ್ನು ಮೀರಿದ ನಾಯಕನಾಗಿ ಹೊರಹೊಮ್ಮಿದ್ದಾರೆ. 2004, 2008, 2013, 2018ರಲ್ಲಿ ಸತತ ಗೆಲುವು ಕಂಡಿರುವ ಹಾಲಾಡಿ ಶ್ರೀನಿವಾಸ್ ಶೆಟ್ಟಿ 4 ಬಾರಿ ಬಿಜೆಪಿ ಪಕ್ಷದಿಂದ, ಒಮ್ಮೆ ಪಕ್ಷೇತರರಾಗಿಯೂ ಸ್ಪರ್ಧಿಸಿ ನಿರಂತರ ಜಯ ಕಾಯ್ದುಕೊಂಡಿದ್ದಾರೆ.
ಇನ್ನು ಈ ಬಾರಿಯೂ ಹಾಲಾಡಿ ಶ್ರೀನಿವಾಸ ಶೆಟ್ಟಿ ನಿರ್ಮಿಸಿರುವ ಕುಂದಾಪುರದ ಭದ್ರಕೋಟೆಯಲ್ಲಿ ಈ ಬಾರಿ ಕಮಲ ಅರಳಿದೆ ಎಂದು ಲೋಕಪಾಲ್ ಸಮೀಕ್ಷೆಯಲ್ಲಿ ತಿಳಿದು ಬಂದಿದೆ. ಲೋಕಪಾಲ್ ಸಮೀಕ್ಷೆಯ ಪ್ರಕಾರ, ಈ ಬಾರಿ ಕುಂದಾಪುರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 55%, ಕಾಂಗ್ರೆಸ್ 38%, ಜೆಡಿಎಸ್ 05% ಹಾಗೂ ಇತರೆ ಅಭ್ಯರ್ಥಿಗಳ ಪರ ಜನರಿಂದ 02%ರಷ್ಟು ಒಲವು ವ್ಯಕ್ತವಾಗಿದೆ.
2018 ಕುಂದಾಪುರ ವಿಧಾನಸಭಾ ಚುನಾವಣಾ ಫಲಿತಾಂಶ
2018 ಚುನಾವಣೆಯಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಾಡಿ ಶ್ರೀನಿವಾಸ ಶೆಟ್ಟಿ ಕಣಕ್ಕಳಿದಿದ್ದರೆ, ಕಾಂಗ್ರೆಸ್ನಿಂದ ರಾಜೇಶ್ ಮಲ್ಲಿ ಸ್ಪರ್ಧಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿಯನ್ನು ಹಾಲಾಡಿ ಶ್ರೀನಿವಾಸ ಶೆಟ್ಟಿ 56,405 ಮತಗಳ ಅಂತರದಿಂದ ಸೋಲಿಸಿದರು. ಹಾಲಾಡಿ ಶ್ರೀನಿವಾಸ ಶೆಟ್ಟಿ 1,03,434 ಮತಗಳನ್ನು ಪಡೆದಿದ್ದರೆ, ರಾಜೇಶ್ ಮಲ್ಲಿ 47,029ಮತಗಳನ್ನು ಪಡೆದಿದ್ದರು. ಇನ್ನು ಕ್ಷೇತ್ರದಲ್ಲಿ ಒಟ್ಟು 1,88,529 ಮತದಾರರಿದ್ದು, ಬಂಟ್ಸ್ ಹಾಗೂ ಬಿಲ್ಲವ ಮತಗಳು ನಿರ್ಣಾಯಕ ಮತಗಳಾಗಿವೆ ಎನ್ನಲಾಗಿದೆ.
-
'ಗ್ಯಾರಂಟಿ ಸಮಿತಿ' ಸಿಬ್ಬಂದಿ ಮಾಸಿಕ ವೇತನ ಸರ್ಕಾರದ ಮುಖ್ಯ ಕಾರ್ಯದರ್ಶಿಗಿಂತಲೂ ಹೆಚ್ಚು! ವರ್ಷಕ್ಕೆ ಕೋಟಿ ಕೋಟಿ.. -
ಸದನದಲ್ಲಿ ಬಜೆಟ್ ಚರ್ಚೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ












Click it and Unblock the Notifications