ದತ್ತ ಜಯಂತಿಗೆ ರಾಹುಲ್ ಗಾಂಧಿಯನ್ನು ಆಹ್ವಾನಿಸಿದ ಕಾರ್ಕಳ ಶಾಸಕ
ಉಡುಪಿ, ನವೆಂಬರ್. 29: ಚಿಕ್ಕಮಗಳೂರಿನ ದತ್ತಪೀಠದಲ್ಲಿ ನಡೆಯಲಿರುವ ದತ್ತ ಜಯಂತಿ ಉತ್ಸವಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಕಾರ್ಕಳ ಶಾಸಕ ಸುನಿಲ್ ಕುಮಾರ್ ಆಹ್ವಾನಿಸಿದ್ದಾರೆ.
"ಡಿಸೆಂಬರ್ 22 ರಂದು ದತ್ತ ಜಯಂತಿ ಉತ್ಸವ ನಡೆಯಲಿದೆ. ಚಿಕ್ಕಮಗಳೂರಿನ ದತ್ತಪೀಠಕ್ಕೆ ನೀವು ಬನ್ನಿ. ನಲವತ್ತು ವರ್ಷಗಳ ಬಳಿಕ ನಿಮ್ಮ ಗೋತ್ರದ ಘೋಷಣೆಯಾಗಿದೆ. ದತ್ತಾತ್ರೇಯ ಗೋತ್ರದ ನೀವು ದತ್ತಪೀಠಕ್ಕೆ ಬರಬೇಕು" ಎಂದು ಸುನಿಲ್ ಕುಮಾರ್ ರಾಹುಲ್ ಅವರನ್ನು ಆಹ್ವಾನಿಸಿದ್ದಾರೆ.
ದತ್ತ ಜಯಂತಿಯಲ್ಲಿ ನೀವು ನಮ್ಮ ಜೊತೆ ಪಾಲ್ಗೊಳ್ಳಬೇಕು. ದತ್ತಪೀಠದ ಸಮಸ್ಯೆಯ ಪರಿಹಾರಕ್ಕೆ ಪ್ರಯತ್ನ ಮಾಡಿ ಎಂದು ಕರೆ ನೀಡಿರುವ ಸುನೀಲ್ ಕುಮಾರ್, ತಮ್ಮದು ದತ್ತಾತ್ರೇಯ ಗೋತ್ರ ಎಂದು ಘೋಷಿಸಿದ ರಾಹುಲ್ ಗಾಂಧಿಗೆ ಟ್ವಿಟ್ಟರ್ ಮೂಲಕ ಟಾಂಗ್ ನೀಡಿದ್ದಾರೆ.

ಇತ್ತೀಚೆಗೆ ರಾಜಸ್ಥಾನದ ಪುಷ್ಕರ ನಗರದಲ್ಲಿ ಬ್ರಹ್ಮ ದೇವಾಲಯಕ್ಕೆ ರಾಹುಲ್ ಭೇಟಿ ನೀಡಿದ್ದ ವೇಳೆ ಅಲ್ಲಿನ ಅರ್ಚಕರಿಗೆ ತಮ್ಮ ಕುಲ ಗೋತ್ರಗಳ ಬಗ್ಗೆ ಮಾಹಿತಿ ನೀಡಿದ್ದರು. ತನ್ನದು ದತ್ತಾತ್ರೇಯ ಗೋತ್ರ ಎಂದೂ, ತಾನು ಕೌಲ ಬ್ರಾಹ್ಮಣಕ್ಕೆ ಸೇರಿದವನೆಂದೂ ರಾಹುಲ್ ಹೇಳಿಕೊಂಡಿದ್ದರು.












Click it and Unblock the Notifications