ಉಡುಪಿಯ ಐದು ತಾಲೂಕುಗಳಲ್ಲಿ ಬೆಳಗ್ಗೆಯಿಂದ ಸುರಿಯುತಲಿದೆ ಬಿರುಸಿನ ಮಳೆ
Recommended Video

ಉಡುಪಿ, ಜೂನ್ 07: ಹವಾಮಾನ ಇಲಾಖೆ ತಿಳಿಸಿದಂತೆ ಜಿಲ್ಲೆಗೆ ಮುಂಗಾರು ಪ್ರವೇಶ ಮಾಡಿದೆ. ಹವಾಮಾನ ಇಲಾಖೆ ಪ್ರಕಾರ ಕರಾವಳಿಯಲ್ಲಿ ಇನ್ನು 6 ದಿನಗಳ ಕಾಲ ಭಾರಿ ಮಳೆ ಸುರಿಯಲಿದ್ದು, ಮಿಂಚು ಸಿಡಿಲಿನ ಅಬ್ಬರ ಕೂಡ ಇರಲಿದೆ.
ಬೆಳಗ್ಗೆ ಆರಂಭಿಸಿದ ಧಾರಾಕಾರ ಮಳೆ ಇನ್ನೂ ಮುಂದುವರೆಯುತ್ತಿದೆ. ಉಡುಪಿ ಜಿಲ್ಲೆಯ 5 ತಾಲೂಕುಗಳಲ್ಲೂ ಬಿರುಸಿನ ಮಳೆ ಬಂದಿದ್ದು, ಮುಂಗಾರು ದಿನಪೂರ್ತಿ ಮುಂದುವರೆಯುವ ಸಾಧ್ಯತೆ ಕಾಣುತ್ತಿದೆ. ಈಗಾಗಲೇ ಸಂಪ್ರದಾಯದಂತೆ ನಾಡದೋಣಿಗಳು ಮೀನುಗಾರಿಕೆಗೆ ಹೊರಟಿದ್ದು, ಭದ್ರತಾ ದೃಷ್ಟಿಯಿಂದ ಜಿಲ್ಲಾಡಳಿತ ಮುನ್ನೆಚ್ಚರಿಕಾ ಸಂದೇಶ ರವಾನಿಸಿದೆ.
ಇತ್ತೀಚೆಗೆ ಚಂಡಮಾರುತದಿಂದ ಸುರಿದ ಮಳೆಗೆ ಕರಾವಳಿ ಅಲ್ಲೋಲ ಕಲ್ಲೋಲವಾಗಿತ್ತು. ಮಂಗಳೂರು ಅರ್ಧದಷ್ಟು ಭಾಗ ನೀರಿನಲ್ಲಿ ಮುಳುಗಿತ್ತು. ಅನೇಕ ಕಡೆ ನೆರೆ ಬಂದು ಸಾವು ನೋವು ಸಂಭವಿಸಿತ್ತು. ಇನ್ನು ಪಡುಬಿದ್ರೆಯ ಬಾಲಕಿ ನೆರೆಯಲ್ಲಿ ಕೊಚ್ಚಿ ಹೋದ ಘಟನೆ ಇನ್ನೂ ಜನರ ಮನಸ್ಸಿನಿಂದ ಮರೆಮಾಚಿಲ್ಲ.

ಅದರ ಬೆನ್ನಲ್ಲೆ ಇದೀಗ ಮುಂಗಾರು ಪ್ರವೇಶ ಮಾಡಿದ್ದು, ಜನರಲ್ಲಿ ಮತ್ತೆ ಆತಂಕ ಮೂಡಿದೆ. ಈ ಬಗ್ಗೆ ಜಿಲ್ಲಾಡಳಿತ ಕೂಡ ಎಚ್ಚರಿಕೆ ವಹಿಸಿದೆ.












Click it and Unblock the Notifications