ಮುತಾಲಿಕ್ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡೋದಿಲ್ಲ ಎಂದ ಪೇಜಾವರ ಶ್ರೀ
ಉಡುಪಿ, ಜೂನ್ 29: ಹಿಂದೂಗಳಲ್ಲೂ ಕೆಲವರು ಗೋಮಾಂಸ ಭಕ್ಷಣೆ ಮಾಡ್ತಾರೆ. ಈ ಬಗ್ಗೆ ಅರಿವಿದ್ದೇ ಹೇಳಿದ್ದೇನೆ. ಯಾರು ಮಾಡ್ತಾರೆ ಅಂತ ಹೇಳಲಾರೆ. ಮುತಾಲಿಕ್ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡೋದಿಲ್ಲ ಎಂದು ಪೇಜಾವರ ಶ್ರೀಗಳಾದ ವಿಶ್ವೇಶ ತೀರ್ಥರು ಹೇಳಿಕೆ ನೀಡಿದ್ದಾರೆ.
ಆಯೋಧ್ಯೆ ರಾಮ ಮಂದಿರ ವಿಚಾರದಲ್ಲಿ ಸಂಧಾನದ ನನ್ನ ಪ್ರಯತ್ನಗಳು ವಿಫಲವಾಗಿವೆ. ವಿಶ್ವ ಹಿಂದೂ ಪರಿಷತ್ ಮತ್ತು ನನ್ನ ಸಂಬಂಧಕ್ಕೆ ಭಂಗವಿಲ್ಲ. ಸಂಘ ಪರಿವಾರದವರು ಸಹ ಸಂಪರ್ಕ ಮಾಡಿದ್ದಾರೆ. ಈ ವಿಚಾರದಲ್ಲಿ ಅವರಿಗೆ ಸಮಾಧಾನವೂ ಇಲ್ಲ ವಿರೋಧವೂ ಇಲ್ಲ ಎಂದು ಸ್ವಾಮೀಜಿ ತಿಳಿಸಿದ್ದಾರೆ.

ದಶಕಗಳ ಹಿಂದೆ ರಾಮಮಂದಿರ ವಿಚಾರದಲ್ಲಿ ಸಂಧಾನ ನಡೆದಿತ್ತು. ರಾಮಮಂದಿರ ನಿರ್ಮಾಣಕ್ಕೆ ಮುಸ್ಲಿಮರು ಒಪ್ಪಿದ್ದರು. ವಾರದಲ್ಲಿ ಒಂದು ದಿನ ರಾಮ ಮಂದಿರದಲ್ಲಿ ನಮಾಜಿಗೆ ಒಮ್ಮತ ಮೂಡಿತ್ತು. ಅದು ತಪ್ಪಲ್ಲ ಎಂದಾದರೆ ನಮಗೆ ಯಾಕೆ ವಿರೋಧ ಮಾಡುತ್ತಿದ್ದಾರೆ ಎಂದು ಸ್ವಾಮೀಜಿ ಪ್ರಶ್ನೆ ಮಾಡಿದರು.
ನಾವು ಕೃಷ್ಣಮಠದ ಹೊರ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಿದ್ದೆವು. ಮುಸ್ಲಿಮರು ಪ್ರಾರ್ಥನೆ ಮಾಡಿದರೆ ಅಂದು ಹಿಂದೂ ನಿಂಧನೆಯಾಗುತ್ತದೆಯೇ ಎಂದು ಪೇಜಾವರ ಶ್ರೀಗಳು ಕೇಳಿದ್ದಾರೆ.












Click it and Unblock the Notifications