ಚಲಿಸುತ್ತಿರುವ ರೈಲಿನಲ್ಲಿ ಬೆಂಕಿ:ಮಹಿಳೆಯ ಸಮಯಪ್ರಜ್ಞೆಯಿಂದ ತಪ್ಪಿದ ಅಪಾಯ

ಉಡುಪಿ, ಏಪ್ರಿಲ್ 28:ಚಲಿಸುತ್ತಿರುವ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ.ಉಡುಪಿ ಜಿಲ್ಲೆ ಬೈಂದೂರು ರೈಲ್ವೆ ನಿಲ್ದಾಣದಿಂದ ಸ್ವಲ್ಪವೇ ದೂರದಲ್ಲಿರುವ ಕಂಬದಕೋಣೆಯಲ್ಲಿ ಹಾದು ಹೋಗುವಾಗ ಈ ಅವಘಡ ಸಂಭವಿಸಿದೆ.

ಕಳೆದ ರಾತ್ರಿ 1.30 ರ ಸುಮಾರಿಗೆ ರೈಲಿನ ಎಸಿ ಕೋಚ್ ನಲ್ಲಿ ಕಾಣಿಸಿಕೊಂಡ ಬೆಂಕಿ ಮೊದಲು ಯಾರ ಗಮನಕ್ಕೂ ಬಂದಿರಲಿಲ್ಲ. ಆದರೆ ಮಹಿಳೆಯೊಬ್ಬರ ಸಮಯಪ್ರಜ್ಞೆಯಿಂದ ಅಪಾಯ ತಪ್ಪಿದೆ. ಮುಂಬೈನಿಂದ ಎರ್ನಾಕುಲಂ ಗೆ ನಿಜಾಮುದ್ದೀನ್ ಎಕ್ಸ್ ಪ್ರೆಸ್ (ಕ್ರಮಸಂಖ್ಯೆ 12618) ರೈಲು ಹೋಗುತ್ತಿತ್ತು.

Fire found on a moving train near Kambadakone

ರಾತ್ರಿ ವೇಳೆ ಪ್ರಯಾಣಿಕರು ಮಲಗಿದ್ದರಿಂದ ಯಾರಿಗೂ ಆರಂಭದಲ್ಲಿ ಗೊತ್ತಾಗಲಿಲ್ಲ. ಕುಂದಾಪುರ ನಿಲ್ದಾಣದಲ್ಲಿ ಇಳಿಯಬೇಕಾಗಿರುವ ಮಹಿಳೆಯೊಬ್ಬಳು ಇದನ್ನು ಗಮನಿಸಿ ತಕ್ಷಣ ಆಲರ್ಟ್ ಆಗಿದ್ದಾರೆ. ಸಿಬ್ಬಂದಿಗಳ ಗಮನಕ್ಕೆ ತಂದ ಪರಿಣಾಮ ದೊಡ್ಡ ಅಪಾಯ ತಪ್ಪಿದೆ. ತಕ್ಷಣವೇ ರೈಲನ್ನು ನಿಲ್ಲಿಸಲಾಗಿದೆ.

Fire found on a moving train near Kambadakone

ಎಸಿ ಬೋಗಿಯಲ್ಲಿ ಶಾಟ್ ಸರ್ಕ್ಯೂಟ್ ನಿಂದ ಈ ಬೆಂಕಿ ಅವಘಢ ಸಂಭವಿಸಿದೆ ಎನ್ನಲಾಗಿದೆ.ಎಸಿ ಬೋಗಿಯ ಗ್ಲಾಸ್ ಒಡೆಯುವಾಗ ಸಂಭವಿಸಿದ ಸಣ್ಣಪುಟ್ಟ ಗಾಯ ಹೊರತುಪಡಿಸಿ ಯಾವುದೇ ಅಪಾಯ ಆಗಿಲ್ಲ. ಬೆಂಕಿ ಹತ್ತಿದ ಬೋಗಿಯನ್ನು ಪ್ರತ್ಯೇಕಿಸಿ, ಪ್ರಯಾಣಿಕರಿಗೆ ಬದಲಿ ವ್ಯವಸ್ಥೆ ಮಾಡಿ ಕೇರಳದ ಎರ್ನಾಕುಲಂಗೆ ರೈಲನ್ನು ಕಳುಹಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+