Get Updates
Get notified of breaking news, exclusive insights, and must-see stories!

ಫೆ. 25 ರಂದು ಉಡುಪಿಯಲ್ಲಿ ಮಾತಾ ಅಮೃತಾನಂದಮಯಿ 'ಅಮೃತ ವೈಭವ'

'ಅಮ್ಮ' ಎಂದು ಖ್ಯಾತಿ ಪಡೆದಿರುವ ಮಾತಾ ಅಮೃತಾನಂದಮಯಿ ಇದೇ ಮೊದಲ ಬಾರಿಗೆ ಫೆಬ್ರವರಿ 25ರಂದು ಉಡುಪಿಗೆ ಆಗಮಿಸಲಿದ್ದಾರೆ. ಅಂದು ಸಂಜೆ 6 ಗಂಟೆಗೆ ಉಡುಪಿಯ ಎಂ. ಜಿ. ಎಂ ಮೈದಾನದಲ್ಲಿ 'ಅಮೃತ ವೈಭವ' ಕಾರ್ಯಕ್ರಮ ನಡೆಯಲಿದೆ.

ಉಡುಪಿ, ಫೆಬ್ರವರಿ 22: 'ಅಮ್ಮ' ಎಂದೇ ಖ್ಯಾತಿ ಪಡೆದಿರುವ ಮಾತಾ ಅಮೃತಾನಂದಮಯಿ ಇದೇ ಮೊದಲ ಬಾರಿಗೆ ಫೆಬ್ರವರಿ 25ರಂದು ಉಡುಪಿಗೆ ಆಗಮಿಸಲಿದ್ದಾರೆ.

ಫೆಬ್ರವರಿ 25ರಂದು ಸಂಜೆ 6 ಗಂಟೆಗೆ ಉಡುಪಿಯ ಎಂ. ಜಿ. ಎಂ ಮೈದಾನದಲ್ಲಿ ನಡೆಯುವ ಅಮ್ಮನವರ 'ಅಮೃತ ವೈಭವ' ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜೂಭಾಯಿ ರೂಢಬಾಯಿ ವಾಲಾ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಫೆಬ್ರವರಿ 23ರಂದು ಮಂಗಳೂರಿನಲ್ಲಿರುವ ಬೋಳೂರಿನ ಬ್ರಹ್ಮಸ್ಥಾನಕ್ಕೆ ಅಮೃತಾನಂದಮಯಿ ಆಗಮಿಸಿ ಸಾರ್ವಜನಿಕ ದರ್ಶನ ನೀಡುವರು. ಸುಮಾರು 20,000ಕ್ಕೂ ಅಧಿಕ ಜನರು ಅಮೃತಾನಂದಮಯಿ ದರ್ಶನ ಪಡೆಯಲು ಬರಲಿದ್ದಾರೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಅಂದಾಜಿಸಿದೆ.[ಮಧ್ವಾಚಾರ್ಯ 700: ವಿಡಿಯೋ ಕಾನ್ಫರೆನ್ಸ್ ಮೂಲಕ ಮೋದಿ ಹೇಳಿದ್ದು]

Feb 25: Karnataka Governor Vajubhai Vala to join Mata Amritanandamayi program in Udupi

ನಂತರ ಅಮೃತಾನಂದಮಯಿ ಫೆಬ್ರವರಿ 24ರಂದು ಉಡುಪಿಗೆ ತೆರಳಲಿದ್ದು ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದಾರೆ. ಮರುದಿನ ಅಂದರೆ ಫೆಬ್ರವರಿ 25 ರಂದು ಉಡುಪಿಯಲ್ಲಿ ಅಮೃತಾನಂದಮಯಿ ಅವರ 'ಅಮೃತ ವೈಭವ' ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ರಾಜ್ಯಪಾಲರಾ ವಹೂಭಾಯಿ ರೂಢಬಾಯಿ ವಾಲಾ, ರಾಜ್ಯ ಮುಜರಾಯಿ (ಧಾರ್ಮಿಕ ದತ್ತಿ) ಸಚಿವ ರುದ್ರಪ್ಪ ಮಾನಪ್ಪ ಲಮಾಣಿ, ಮೀನುಗಾರಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಖಾತೆ ಸಚಿವ ಪ್ರಮೋದ್ ಮಧ್ವರಾಜ್, ಸಂಸದೆ ಶೋಭಾ ಕರಂದ್ಲಾಜೆ , ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ , ಮಣಿಪಾಲ ವಿವಿ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಭಾಗವಹಿಸಲಿದ್ದಾರೆ.[ಉಡುಪಿ ಜಿಲ್ಲಾಧಿಕಾರಿಯಾಗಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅಧಿಕಾರ ಸ್ವೀಕಾರ]

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+