ಕೃಷ್ಣಮಠದ ಭಕ್ತರಿಗೆ ಸುದರ್ಶನ ಚಕ್ರ ವೀಕ್ಷಣೆ ಭಾಗ್ಯ
ಉಡುಪಿ, ಜನವರಿ 03: ಇನ್ನೇನು ಪಲಿಮಾರು ಮಠಾಧೀಶರ ಪರ್ಯಾಯ ಮುಗಿಯಲಿದೆ. ಎರಡು ವರ್ಷದ ಪರ್ಯಾಯದ ಅವಧಿಯಲ್ಲಿ ಕೃಷ್ಣಮಠಕ್ಕೆ ಸ್ವರ್ಣ ಗೋಪುರದಂತಹ ಮಹತ್ವದ ಕೊಡುಗೆ ಸಹಿತ ಭಕ್ತರಿಗೆ ಹಲವು ಕಲ್ಯಾಣ ಕಾರ್ಯಕ್ರಮ ಹಮ್ಮಿಕೊಂಡಿದ್ದ ಪಲಿಮಾರು ಶ್ರೀಗಳು ಇದೇ ಹದಿನೇಳಕ್ಕೆ ಪೀಠವನ್ನು ಅದಮಾರು ಮಠಕ್ಕೆ ಹಸ್ತಾಂತರ ಮಾಡಲಿದ್ದಾರೆ.
ಪರ್ಯಾಯದ ಕೊನೆಯ ಹೊತ್ತಿಗೆ ಪಲಿಮಾರು ಶ್ರೀಗಳು ಕೃಷ್ಣ ಮಠಕ್ಕೆ ಆಗಮಿಸುವ ಭಕ್ತರಿಗೆ ಬೃಹತ್ ಸುದರ್ಶನ ಚಕ್ರವನ್ನು ನೋಡುವ ಭಾಗ್ಯ ಕಲ್ಪಿಸಿದ್ದಾರೆ.

ಕೃಷ್ಣ ಮಠದ ರಾಜಾಂಗಣದ ಮುಖ್ಯ ದ್ವಾರದ ಬಳಿ ಸುಮಾರು ಐದು ಲಕ್ಷ ರೂಪಾಯಿ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ. ಅಂಬಲಪಾಡಿ ಕ್ಷೇತ್ರದ ಡಾ. ವಿಜಯ್ ಬಲ್ಲಾಳ್ ಸೇವಾ ರೂಪದಲ್ಲಿ ಪಲಿಮಾರು ಪರ್ಯಾಯದ ಕೊನೆ ಘಟ್ಟದಲ್ಲಿ ಕೃಷ್ಣನಿಗೆ ಸುದರ್ಶನ ಚಕ್ರವನ್ನು ಸಮರ್ಪಿಸಿದ್ದಾರೆ. ಪೀಠ 4 ಅಡಿ ಚಕ್ರ 8 ಅಡಿ ಇದೆ. ಕೃಷ್ಣ ಮಠಕ್ಕೆ ಆಗಮಿಸುವ ಭಕ್ತರಿಗೆ ಈ ಕಲಾಕೃತಿ ವಿಶೇಷ ಆಕರ್ಷಣೆಯಾಗಲಿದೆ.












Click it and Unblock the Notifications