ಉಡುಪಿ : 33 ನಾಡ ಬಾಂಬ್ ವಶ
ಉಡುಪಿ, ನವೆಂಬರ್ 22 : ಕರಾವಳಿ ಜಿಲ್ಲೆ ಉಡುಪಿಯಲ್ಲಿ 33 ಸಜೀವ ನಾಡ ಬಾಂಬುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ನಾಡಬಾಂಬ್ ಸಾಗಿಸುತ್ತಿದ್ದ ನಾಗೇಶ್ ನಾಯಕ್, ಗುಣಕರ್ ಶೆಟ್ಟಿ, ಲಕ್ಷ್ಮಣ ಶೆಟ್ಟಿ ಅವರುಗಳನ್ನು ಹೆಬ್ರಿ ಪೊಲೀಸರು ಬಂಧಿಸಿದ್ದು ಕಾಡು ಪ್ರಾಣಿಗಳ ಬೇಟೆಗಾಗಿ ಈ ನಾಡ ಬಾಂಬ್ ಉಪಯೋಗಿಸುತ್ತಿದ್ದರು ಎಂದು ಪೊಲೀಸರು ಅನುಮಾನ ಪಟ್ಟಿದ್ದಾರೆ.

ಹೆಬ್ರಿ ಬಳಿ ದ್ವಿಚಕ್ರ ವಾಹನದಲ್ಲಿ ಸಾಗಿಸುತ್ತಿದ್ದ ಆರೋಪಿಗಳನ್ನು ಖಚಿತ ಮಾಹಿತಿಯ ಮೇರೆಗೆ ಹಿಂಬಾಲಿಸಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ 33 ನಾಡ ಬಾಂಬ್, ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ ಎಂದು ಉಡುಪಿ ಎಸ್ಪಿ ಡಾ. ಸಂಜೀವ್ ಪಾಟೀಲ್ ಮಾಹಿತಿ ನೀಡಿದ್ದಾರೆ.

'ನಾಡ ಬಾಂಬ್ ತಯಾರಿಸಿ ಕಾಡು ಪ್ರಾಣಿಗಳು ಓಡಾಡುವ ಜಾಗದಲ್ಲಿ ಇರಿಸುತ್ತಾರೆ, ಕಾಡು ಪ್ರಾಣಿಗಳು ಇವಕ್ಕೆ ಬಾಯಿ ಹಾಕಿ ಜಗಿದಾಗ ಇವು ಸ್ಪೋಟಗೊಂಡು ಪ್ರಾಣಿಗಳು ಸಾವನ್ನಪ್ಪುತ್ತವೆ.
ಸತ್ತ ಪ್ರಾಣಿಗಳ ಮಾಂಸ, ಚರ್ಮ, ಉಗುರು ಮುಂತಾದವುಗಳನ್ನು ಮಾರಿ ಹಣ ಮಾಡುತ್ತಾರೆ' ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications