ಕರಿಮಣಿ..ಕಾಲುಂಗುರ..ಬಾರ್ಕೂರು ಕೂಡ್ಲಿಯಲ್ಲಿ ಪ್ರೇತಗಳ ಮದುವೆ: ಇದು ಅಂತಿಂಥಾ ಆಚರಣೆಯಲ್ಲ!
ಉಡುಪಿ, ಜೂನ್ 18: ಕರಾವಳಿಯ ಉಡುಪಿ ಜಿಲ್ಲೆ ಆಚಾರ ವಿಚಾರ ಮತ್ತು ವಿಶಿಷ್ಟ ಪದ್ದತಿಗಳ ಮೂಲಕ ರಾಜ್ಯದಲ್ಲಿಯೇ ಒಂದು ವಿಶಿಷ್ಟವಾಗಿ ಗುರುತಿಸಿಕೊಂಡಿರುವ ಜಿಲ್ಲೆ. ಇಲಿ ದೈವ ಮತ್ತು ದೇವರುಗಳ ವಿಚಾರದಲ್ಲಿ ವಿಶೇಷವಾದ ಭಕ್ತಿ ಮತ್ತು ಅದಕ್ಕೆ ಸಂಬಂಧಿಸಿದ ವಿಶೇಷ ಆಚರಣೆಗಳನ್ನು ಕೂಡ ನೋಡಬಹುದು.
ಇತ್ತೀಚಿಗೆ ಅಷ್ಟೇ ಕರಾವಳಿಯ ಜಿಲ್ಲೆಯಲ್ಲಿ ಪ್ರೇತ ಮದುವೆಯ ಜಾಹೀರಾತು ಸಾಕಷ್ಟು ಸುದ್ದಿ ಮಾಡಿತ್ತು. ಇನ್ನು ಪ್ರೇತಗಳ ಮದುವೆ ಮಾಡಿಸುವ ವಿಡಿಯೋ ಒಂದು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿತ್ತು. ಇದು ನಿಜ ಎನ್ನಲು ಬಾರ್ಕೂರು ಕೂಡ್ಲಿ ಶ್ರೀಜನಾರ್ದನ ದೇವಸ್ಥಾನದಲ್ಲಿ ನೂರಾರು ವರ್ಷದಿಂದ ಪ್ರತೀ ಅಮಾವಾಸ್ಯೆಯ ದಿನ ಪ್ರೇತಗಳ ಮದುವೆ ನಡೆಯುತ್ತದೆ.

ಬಾರ್ಕೂರು ಕೂಡ್ಲಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಪ್ರೇತ ವಿವಾಹ ಇಲ್ಲಿನ ಅರ್ಚಕ ಗಣಪತಿ ಉಡುಪ ಮತ್ತು ಬಳಗದವರಿಂದ ನಡೆಯುತ್ತದೆ. ಆಕಸ್ಮಿಕ, ಅಕಾಲ ಮರಣ ಹೊಂದಿದ ಗಂಡು ಅಥವಾ ಹೆಣ್ಣುಗಳು ಅನೇಕ ಆಸೆ, ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳದೆ ಅಗೋಚರವಾಗಿ ಪ್ರೇತಗಳಾಗಿ ಇರುತ್ತದೆ. ಮತ್ತು ಪ್ರಾಯ ಕಳೆದಂತೆ ಆಸೆಯನ್ನು ನೆರವೇರಿಸುವಂತೆ ಕುಟುಂಬವನ್ನು ಕಾಡುತ್ತಾ ಇದ್ದು ಪೀಡನೆ ನೀಡುತ್ತಿರುವುದಕ್ಕೆ ಪ್ರೇತಗಳಿಗೆ ವಿವಾಹ ಶಾಸ್ತ್ರ ಮಾಡಿ ಬಳಿಕ ಸದ್ಗತಿ ಮಾಡಲಾಗುತ್ತದೆ.
ದೇವಸ್ಥಾನದ ಎದುರು ಭಾಗದಲ್ಲಿರಿರುವ ಶಂಖ ತೀರ್ಥ ಸರೋವರದಲ್ಲಿ ಪ್ರೇತವನ್ನು ಆಕರ್ಷಿಸಿ ಇರಿಸಲಾದ ತೆಂಗಿನ ಕಾಯಿ ಮೂಲಕ ನಾನಾ ಕಾರ್ಯಗಳನ್ನು ಮಾಡಲಾಗುತ್ತದೆ. ಬಳಿಕ ದೇವಸ್ಥಾನದ ಎದುರು ಭಾಗದಲ್ಲಿ 2 ತೆಂಗಿನ ಗಿಡಕ್ಕೆ ಗಂಡು ಹೆಣ್ಣಿಗೆ ಮಧುವಣಗಿತ್ತಿಗೆ ಅಲಂಕಾರ ಮಾಡಿದಂತೆ ಸೀರೆ ಪಂಚೆ ಶಾಲು ಕಾಲುಂಗುರ ಕರಿಮಣೆ ನೀಡಿ ಬೇರೆ ಗೋತ್ರ ಅಥವಾ ಬಳಿಯವರೊಂದಿಗೆ ತಾಂಬೂಲ ಬದಲಾವಣೆ ಮಾಡಿ ಬಳಿಕ ಮದುವೆ ಶಾಸ್ತ್ರ ಮಾಡಲಾಗುತ್ತದೆ.

ಬಳಿಕ ತೆಂಗಿನಕಾಯಿಯಲ್ಲಿ ಆವಾಹನೆ ಮಾಡಲಾದ ಪ್ರೇತವನ್ನು ಮತ್ತೊಂದು ತೆಂಗಿನ ಕಾಯಿ ಜೊತೆ ಅವರಿಗೆ ಸಂಭಂದಿಸಿದ ದೈವಸ್ಥಾನದಲ್ಲಿ ಒಡೆಯಲಾಗುತ್ತದೆ. ಇದು ನೂರಾರು ವರ್ಷದಿಂದ ನಡೆದುಕೊಂಡು ಬಂದ ಧಾರ್ಮಿಕ ವಿಧಿಯಾಗಿದ್ದು ವಿಜ್ಞಾನಯುಗದಲ್ಲೂ ಮುಂದುವರಿಯುತ್ತಿದೆ.












Click it and Unblock the Notifications