ಉಡುಪಿಯಲ್ಲಿ ಸಮಾಜ ಸೇವಕನಿಂದ ಬಡವರಿಗೆ ಉಪಾಹಾರ ವಿತರಣೆ
ಉಡುಪಿ, ಮಾರ್ಚ್ 30: ಉಡುಪಿಯ ಸಮಾಜ ಸೇವಕ ವಿಶು ಶೆಟ್ಟಿ ಅವರು ಇಂದು ಬೆಳಿಗ್ಗೆ 150 ಕ್ಕೂ ಅಧಿಕ ಬಡವರಿಗೆ, ಅಶಕ್ತರಿಗೆ ಚಹಾ-ತಿಂಡಿ ವಿತರಿಸಿದರು.
Recommended Video
ಕೊರೊನಾ ಬಂದಮೇಲೆ ಕುಟುಂಬದಲ್ಲಿ ಆಗಿರೋ ಬದಲಾವಣೆಗಳೇನು? | Changes in Family | Wife | Oneindia kannada
ಮನೆ ಇಲ್ಲದೆ ಬೀದಿ ಬದಿಯಲ್ಲಿ ಜೀವಿಸುತ್ತಿರುವ ವಲಸೆ ಕಾರ್ಮಿಕರು ಮತ್ತು ಕೆಲವು ನಿರ್ಗತಿಕರಿಗೆ ಕಳೆದ ಐದಾರು ದಿನಗಳಿಂದ ಎರಡು ಹೊತ್ತು ಊಟ ಮತ್ತು ಚಹಾ ವಿತರಿಸುವ ಕೆಲಸವನ್ನು ವಿಶು ಶೆಟ್ಟಿ ಅವರು ಮಾಡುತ್ತಿದ್ದಾರೆ.
ಉಪಾಹಾರವನ್ನು ವಿತರಿಸುವ ಸಂದರ್ಭದಲ್ಲಿ ಮೂರು ಮೀಟರ್ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ವೈರಸ್ ಹರಡದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ. ವೆಲ್ಡಿಂಗ್ ಶಾಪ್ ನಡೆಸುತ್ತಿರುವ ವಿಶು ಶೆಟ್ಟಿ ಅವರು ತಮ್ಮ ದುಡಿಮೆಯ ಬಹುಪಾಲನ್ನು ಸಮಾಜ ಸೇವೆಗೆ ವ್ಯಯಿಸುತ್ತಿದ್ದಾರೆ.

ಕೊರೊನಾ ಎಮರ್ಜೆನ್ಸಿ ಘೋಷಣೆಯಾದ ಮರುದಿನದಿಂದಲೇ ವಿಶು ಶೆಟ್ಟಿ ಅವರು ಬಡವರ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಇವರು ಆಹಾರ ವಿತರಿಸಲು ಆರಂಭಿಸಿದ ಬಳಿಕ ಉಡುಪಿಯ ಇತರ ಸಮಾಜಪರ ಸಂಘಟನೆಗಳು ಆಹಾರ ವಿತರಿಸುವ ಯೋಜನೆ ಕೈಗೆತ್ತಿಕೊಂಡಿವೆ.












Click it and Unblock the Notifications