ಕರಾವಳಿಯ ನಾಗಾರಾಧನೆ ಮೇಲೆ ಕೊರೊನಾ ಕರಿಛಾಯೆ
ಉಡುಪಿ, ಜುಲೈ 25: ನಾಗಾರಾಧನೆಗೆ ನಮ್ಮ ನಾಡಿನಲ್ಲೇ ಪ್ರಸಿದ್ಧವಾಗಿರುವ ಸ್ಥಳ ಕರಾವಳಿ ಜಿಲ್ಲೆಗಳು. ಆದರೆ ಈ ವರ್ಷ ಮಾತ್ರ ಕೊರೊನಾ ಕರಿಛಾಯೆ ನಾಗರಪಂಚಮಿಯ ಸಂಭ್ರಮಕ್ಕೆ ತಣ್ಣೀರೆರಚಿದೆ.
Recommended Video
America ಜೊತೆ ಸೇಡು ತೀರಿಸಿಕೊಂಡ China | Oneindia Kannada
ನಾಗರ ಪಂಚಮಿಯ ದಿನದಂದು ಕರಾವಳಿಯ ಎಲ್ಲಾ ಜನರು ತಮ್ಮ ಕುಟುಂಬದ ನಾಗನ ಮೂಲ ಬನಕ್ಕೆ ತೆರಳಿ ತನು ಸೇವೆ ಅರ್ಪಿಸುತ್ತಾರೆ. ಆದರೆ ಈ ವರ್ಷ ಕೊರೊನಾ ಸಾರ್ವಜನಿಕ ನಾಗರ ಪಂಚಮಿ ಆಚರಣೆಗೆ ಅವಕಾಶವನ್ನು ನೀಡಿಲ್ಲ.
ಕೇವಲ ಉಡುಪಿ ಜಿಲ್ಲೆಯಲ್ಲೇ 13 ಸಾವಿರಕ್ಕೂ ಅಧಿಕ ನಾಗಬನಗಳಿವೆ. ನಾಗನಿಗೆ ಸಂಬಂಧಿಸಿದ ಹಲವಾರು ಕ್ಷೇತ್ರಗಳಿವೆ. ಇಲ್ಲಿನ ಅರ್ಚಕರಿಗೆ ನಾಗರಪಂಚಮಿಯಂದು ಕೈತುಂಬ ಆದಾಯ ಬರುತ್ತಿತ್ತು. ಆದರೆ ಈ ವರ್ಷ ಈ ತಟ್ಟೆ ಕಾಸಿಗೂ ಕಲ್ಲು ಬಿದ್ದಿದೆ. ಜನರು ತಮ್ಮ ನಾಗಬನಗಳಲ್ಲಿ ಹೂವು ಹಿಂಗಾರ ಸೀಯಾಳ ಮೊದಲಾದ ದ್ರವ್ಯಗಳನ್ನು ಬಿಟ್ಟು ಹೋಗುವ ಮೂಲಕ ತಮ್ಮ ಹರಕೆಯನ್ನು ಸಮರ್ಪಿಸುತ್ತಿದ್ದಾರೆ.

ಉಳಿದವರು ಮನೆಗಳಲ್ಲೇ ನಾಗರಪಂಚಮಿಯನ್ನು ಆಚರಿಸುತ್ತಿದ್ದಾರೆ. ಇದೇ ಹೊತ್ತಿಗೆ ಈ ದಿವಸ ಹೂವು ಹಣ್ಣು ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿತ್ತು. ಇಂದು ಹೂವು ಹಣ್ಣಿನ ಮಾರುಕಟ್ಟೆಯೂ ಬಿಕೋ ಎನ್ನುತ್ತಿದೆ.












Click it and Unblock the Notifications