ಮಠದಲ್ಲಿ ಸಿಕ್ಕಿದ್ದೇನು? ಮಾಹಿತಿ ಹಾಗೂ ವದಂತಿ ಮಧ್ಯೆಯೇ ಪೈಪೋಟಿ
Recommended Video

ಉಡುಪಿ, ಜುಲೈ 24: ಶೀರೂರು ಮಠದ ಲಕ್ಷ್ಮೀವರ ತೀರ್ಥರ ಸಾವಿನ ತನಿಖೆಯು ಹೊಸ ತಿರುವು ಪಡೆಯುತ್ತಿದೆ. ಪ್ರಕರಣದ ತನಿಖೆಗಾಗಿ ಜಿಲ್ಲಾ ಪೊಲೀಸರ ಐದು ತಂಡಗಳನ್ನು ರಚಿಸಿದ್ದು, ಪ್ರತಿ ತಂಡಕ್ಕೆ ನಾನಾ ಜವಾಬ್ದಾರಿಗಳನ್ನು ನೀಡಲಾಗಿದೆ.
ಶೀರೂರು ಶ್ರೀಗಳಿಗೆ ಒಡನಾಡಿಗಳಾಗಿ ಇದ್ದವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ತನಿಖೆಯು ವೇಗ ಪಡೆದುಕೊಂಡು, ವಿವಿಧ ಆಯಾಮಗಳಲ್ಲಿ ಸಾಗುತ್ತಿದೆ. ತನಿಖಾಧಿಕಾರಿ ಬೆಳ್ಳಿಯಪ್ಪ ಅವರ ಜತೆ ಮಾತುಕತೆ ನಡೆಸಿದ ಐಜಿ, ಶೀರೂರು ಶ್ರೀಗಳ ಸಾವಿನ ವಿಚಾರದ ತನಿಖೆ ಹಾದಿಯಲ್ಲಿ ಸಿಕ್ಕ ಪ್ರಮುಖ ಮಾಹಿತಿಗಳನ್ನು ಹೊರಹಾಕಿದ್ದಾರೆ.

ತನಿಖಾ ತಂಡವು ಶೀರೂರು ಮೂಲ ಮಠಕ್ಕೆ ತೆರಳಿ, ಅಲ್ಲಿ ಕೆಲಸ ಮಾಡುವವರ ಜತೆಗೂಡಿ ಶೋಧ ಕಾರ್ಯಾಚರಣೆ ನಡೆಸಿದೆ. ಆಗ ಮಠದಲ್ಲಿ ಮದ್ಯ ತುಂಬಿದ ರಾಶಿರಾಶಿ ಬಾಟಲುಗಳು ಸಿಕ್ಕಿವೆ ಎನ್ನಲಾಗುತ್ತಿದ್ದು, ಇನ್ನಷ್ಟು ಕುತೂಹಲಕಾರಿ ವಿಚಾರಗಳು ಹೊರಬರುತ್ತಿವೆ.

ಅಂದ ಹಾಗೆ ಇವೆಲ್ಲ ದೊರೆತಿರುವುದು ಶೀರೂರು ಮಠದ ಕೋಣೆಯಲ್ಲಿ. ಅಲ್ಲಿಗೆ ಲಕ್ಷ್ಮೀವರ ತೀರ್ಥರನ್ನು ಬಿಟ್ಟು ಬೇರೆ ಯಾರೂ ಹೋಗುತ್ತಿರಲಿಲ್ಲ ಎಂಬ ಮಾತು ಕೂಡ ಕೇಳಿಬರುತ್ತಿದೆ. ಹಾಗಾಗಿ ನಾನಾ ಬಗೆಯ ಚರ್ಚೆಗೆ ಈ ಅಂಶವು ಕಾರಣವಾಗಿದೆ.












Click it and Unblock the Notifications