• search
 • Live TV
ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲಾಭ ಕಂಡಿದ್ದಕ್ಕೆ 10 ಕೋಟಿ ರು. ವೆಚ್ಚದಲ್ಲಿ ಯಾಗ ಮಾಡಿಸಿದ ಉದ್ಯಮಿ!

|
   ಲಾಭ ಕಂಡಿದ್ದಕ್ಕೆ 10 ಕೋಟಿ ವೆಚ್ಚದಲ್ಲಿ ಯಾಗ ಮಾಡಿಸಿದ್ರು ಈ ಉದ್ಯಮಿ | Oneindia Kannada

   ಉಡುಪಿ, ಡಿಸೆಂಬರ್ 28 : ಲೋಕ ಕಲ್ಯಾಣಕ್ಕಾಗಿ ಯಾಗಗಳನ್ನು ಮಾಡುವುದನ್ನು ನಾವೆಲ್ಲ ಕೇಳಿರ್ತೇವೆ. ಕೆಲವರು ನೋಡಿರುತ್ತಾರೆ. ಇನ್ನು ಉದ್ಯೋಗದಲ್ಲಿ ಅಭಿವೃದ್ಧಿ ಹೊಂದಿದರೆ ದೇವರಿಗೆ ಪೂಜೆ-ಪುನಸ್ಕಾರಗಳನ್ನು ಮಾಡಿರುವುದು ಉಂಟು.

   ಆದರೆ, ಇಲ್ಲಿ ಉದ್ಯಮಿ ಓರ್ವ ಬ್ಯುಸಿನೆಸ್ ನಲ್ಲಿ ಅಭಿವೃದ್ಧಿ ಕಂಡಿದಕ್ಕೆ ದೇಶದಲ್ಲಿ ನಾಲ್ಕನೇ ಅತೀ ದೊಡ್ಡ ಯಾಗವನ್ನು ಮಾಡಿಸಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.

   ಕೊಲ್ಲೂರು ಮೂಕಾಂಬಿಕಾ ಕ್ಷೇತ್ರ ಶಕ್ತಿ ದೇವತೆ ನೆಲೆಸಿರುವ ಕ್ಷೇತ್ರ. ಈ ಕ್ಷೇತ್ರದಲ್ಲಿ ಪ್ರಾರ್ಥನೆ ಮಾಡಿದಲ್ಲಿ ಫಲ ಸಿಗೋದು ಖಂಡಿತಾ ಅಂತ ನಂಬಿಕೆ. ಇದರ ಅನುಭವ ಕೊಯಮುತ್ತೂರಿನ ಓರ್ವ ಉದ್ಯಮಿಗಾಗಿದೆ.

   ಹೌದು..ಕೊಯಮುತ್ತೂರಿನ ಎಸ್ ಪೆರಿಯಸ್ವಾಮಿ ಎಂಬ ಉದ್ಯಮಿ ಮಸ್ಕತ್ ನಲ್ಲಿರುವ ತನ್ನ ಜವಾಬಿ ಪವರ್ ಟೆಕ್ ಇಂಜಿನಯರಿಂಗ್ ಎಲ್ ಎಲ್ ಸಿ ಎಂಬ ಕಂಪನಿ ಲಾಭಗಳಿಸುವ ಸಂಕಲ್ಪ ಮಾಡಿದ್ದರು. ಇವರ ಸಂಕಲ್ಪದಂತೆ ಒಂದೇ ವರ್ಷದಲ್ಲಿ ಎಲ್ ಎಲ್ ಸಿ ಕಂಪನಿ ಭಾರಿ ಲಾಭ ಗಳಿಸಿದೆ.

   ಈ ಹಿನ್ನಲೆಯಲ್ಲಿ ಸುಮಾರು 10 ಕೋಟಿ ರು. ವೆಚ್ಚದಲ್ಲಿ ಐದು ದಿನಗಳ ಕಾಲ ಆಯುತ ಚಂಡಿ ಮಹಾಯಾಗ ಮಾಡಿಸಿದ್ದಾರೆ. ಈ ಯಾಗ ಕೊಲ್ಲೂರಿನಲ್ಲಿ ಮೊದಲು ಹಾಗು ದೇಶದಲ್ಲಿ ನಾಲ್ಕನೇ ಅತೀ ದೊಡ್ಡ ಯಾಗವಾಗಿದೆ.

   1,350 ಪುರೋಹಿತರಿಂದ ಯಾಗ

   1,350 ಪುರೋಹಿತರಿಂದ ಯಾಗ

   10 ಸಾವಿರ ಪಾರಾಯಣ 1 ಸಾವಿರ ಯಾಗವನ್ನು 10 ಕುಂಡದಲ್ಲಿ ಐದು ದಿನಗಳ ಕಾಲ ನಡೆಯುತ್ತಿದೆ. ಸಕಲ ಕಾರ್ಯ ಸಿದ್ದಿಗಾಗಿ ಈ ಯಾಗ ನಡೆಸಲಾಗುತ್ತೆ. ಈ ಯಾಗವನ್ನು 1,350 ಪುರೋಹಿತರು 2 ಸಾವಿರ ವೈಧಿಕರು ತಮಿಳುನಾಡಿನಿಂದಲೇ ಬಂದು ಯಾಗವನ್ನು ಮಾಡಿರುವುದು ವಿಶೇಷ.

   ಆಯುತ ಚಂಡಿ ಮಹಾಯಾಗಕ್ಕೆ 10 ಕೋಟಿ ರು. ಖರ್ಚು

   ಆಯುತ ಚಂಡಿ ಮಹಾಯಾಗಕ್ಕೆ 10 ಕೋಟಿ ರು. ಖರ್ಚು

   ಹಲವು ವಿವಿಧ ಬಗೆಯ ಪೂಜೆ-ಪುನಸ್ಕಾರಗಳಿಗೆ ಐದು ದಿನಗಳ ಕಾಲ ಆಯುತ ಚಂಡಿ ಮಹಾಯಾಗಕ್ಕೆ ಬರೋಬ್ಬರಿ ಸರಿ ಸುಮಾರು 10 ಕೋಟಿ ರು. ಖರ್ಚು ತಗುಲಿದೆ ಅಂತೆ. ಆಶ್ಚರ್ಯವಾದರೂ ಇದನ್ನ ನಂಬಲೇ ಬೇಕು. 10 ಕೋಟಿ ರು. ಯಾಗಕ್ಕೆ ಖರ್ಚು ಮಾಡುತ್ತಿದ್ದಾರೆ ಎಂದರೇ ಇನ್ನು ಉದ್ಯಮಿಗೆ ಇನ್ನೆಷ್ಟು ಲಾಭವಾಗರಬಹುದು?.

   ಹಲವು ದೇವಾಲಯಗಳಲ್ಲಿ ನಾನಾ ಯಾಗಗಳು

   ಹಲವು ದೇವಾಲಯಗಳಲ್ಲಿ ನಾನಾ ಯಾಗಗಳು

   ಶತ ಚಂಡಿಕಾ, ಸಹಸ್ರ ಚಂಡಿಕಾ ಯಾಗ, ಆಯತ ಯಾಗ ಸೇರಿದಂತೆ ಹಲವು ಯಾಗಗಳು ಕೊಲ್ಲೂರು ಸೇರಿದಂತೆ ಹಲವು ದೇವಾಲಯಗಳಲ್ಲಿ ಈಗಾಗಲೇ ನಡೆದಿದೆ. ಆದರೆ, ಆಯುತ ಚಂಡಿ ಯಾಗ 10 ಕೋಟಿ ವೆಚ್ಚದಲ್ಲಿ ಮೊದಲ ಬಾರಿ ಕರಾವಳಿ ಜಿಲ್ಲೆ ಉಡುಪಿಯಲ್ಲಿ ನಡೆಯುತ್ತಿದೆ. ಈ ಮೂಲಕ ದೇಶದಲ್ಲೇ ನಾಲ್ಕನೇ ಅತೀ ವೇಚ್ಚದ ಮಹತ್ವದ ಯಾಗಕ್ಕೆ ಕೊಲ್ಲೂರು ಸಾಕ್ಷಿಯಾಗಿದೆ.

   ಹೊಗೆ ಹೊರಗೋಗಲು ಎಕ್ಸಿಸ್ಟ್ ವ್ಯವಸ್ಥೆ

   ಹೊಗೆ ಹೊರಗೋಗಲು ಎಕ್ಸಿಸ್ಟ್ ವ್ಯವಸ್ಥೆ

   ಈ ಯಾಗದಲ್ಲಿ ಹೊರ ಬರುವ ಹೊಗೆ ಹೊರಗೋಗಲು ಎಕ್ಸಿಸ್ಟ್ ವ್ಯವಸ್ಥೆ ಕೂಡ ಮಾಡಲಾಗಿದೆ. ಈ ಯಾಗ ಕೊಲ್ಲೂರಿನಲ್ಲಿ ಮೊದಲು ಹಾಗು ದೇಶದಲ್ಲಿ ನಾಲ್ಕನೇ ಅತೀ ದೊಡ್ಡ ಯಾಗವಾಗಿದೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   A businessesmen of Tamilnadu offers very expensive Ayuth Chandi Maha yagam. it cost Rs 10 crores. Yagam is offers at Kolluru Mukambika temple by calling 1350 Poorohits from Tamilnadu for his huge business success. This yaga is said to be India's biggest Yaga so far.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more