ಉಡುಪಿ: ಕೌನ್ ಬನೇಗಾ ಕರೋಡ್‌ಪತಿಯಲ್ಲಿ 50 ಲಕ್ಷ ಗೆದ್ದ ಅನಮಯ

ಉಡುಪಿ, ಡಿಸೆಂಬರ್ 17: ಉಡುಪಿಯ ವಿದ್ಯೋದಯ ಪಬ್ಲಿಕ್ ಸ್ಕೂಲ್‌ನ 7ನೇ ತರಗತಿ ವಿದ್ಯಾರ್ಥಿ ಅನಮಯ ಯೋಗೇಶ್ ದಿವಾಕರ್ ಅವರು ಜನಪ್ರಿಯ ಕೌನ್ ಬನೇಗಾ ಕರೋಡ್‌ಪತಿ ಕ್ವಿಝ್ ಸ್ಪರ್ಧೆಯಲ್ಲಿ ಐವತ್ತು ಲಕ್ಷ ರೂ. ಗೆದ್ದಿದ್ದಾನೆ.

ಖ್ಯಾತ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ನಡೆಸಿಕೊಡುವ ಜನಪ್ರಿಯ ಟಿ.ವಿ ಕಾರ್ಯಕ್ರಮ 'ಕೌನ್ ಬನೇಗಾ ಕರೋಡ್‌ಪತಿ'ಯ ವಿದ್ಯಾರ್ಥಿ ವಿಶೇಷ ಸಂಚಿಕೆಯಲ್ಲಿ ಉಡುಪಿಯ ವಿದ್ಯಾರ್ಥಿ ಅನಮಯ ಪಾಲ್ಗೊಂಡಿದ್ದನು.

ದೇಶದ ಎಂಟು ವಿದ್ಯಾರ್ಥಿಗಳು ಮಾತ್ರ ಈ ಕೌನ್ ಬನೇಗಾ ಕರೋಡ್‌ಪತಿ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಪಡೆದುಕೊಂಡಿದ್ದರು. ಹಾಟ್ ಸೀಟ್ ನಲ್ಲಿ ಅಮಿತಾಬ್ ಬಚ್ಚನ್ ಕೇಳುವ 15 ಪ್ರಶ್ನೆಗಳ ಪೈಕಿ ಅನಮಯ 14 ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡುವ ಮೂಲಕ ಈ ಸಾಧನೆ ಮಾಡಿದ್ದಾನೆ.

Udupi: Anamaya Has Won Rs.50 Lakh In The Kaun Banega Karodpati

ಇನ್ನೊಂದು ಪ್ರಶ್ನೆಗೆ ಉತ್ತರಿಸಿದ್ದರೆ ಒಂದು ಕೋಟಿ ಗೆಲ್ಲುವ ಅವಕಾಶ ಇದ್ದರೂ, ಖಚಿತ ಉತ್ತರ ಗೊತ್ತಿಲ್ಲದ ಕಾರಣ ಕ್ವಿಝ್ ನಿಂದ ಕ್ವಿಟ್ ಆಗುವ ನಿರ್ಧಾರ ಮಾಡಿದ್ದಾನೆ. ಆದರೂ ರಾಜ್ಯದ ಕರಾವಳಿಯ ಈ ವಿದ್ಯಾರ್ಥಿ ಪೋಷಕರ ಹಾಗೂ ಶಾಲೆಯ ಕೀರ್ತಿ ಪತಾಕೆಯನ್ನು ದೇಶ ಮಟ್ಟದಲ್ಲೂ ಪಸರಿಸಿದ್ದಾನೆ.

Recommended Video

      Air Indiaದಲ್ಲಿ ಹಿರಿಯ ನಾಗರಿಕರಿಗೆ 50% ಕಡಿಮೆ ದರದಲ್ಲಿ ಟಿಕೆಟ್ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+