ಉಡುಪಿ ಜಿಲ್ಲೆಯ ಎಲ್ಲ ಗಡಿಗಳು ಸೀಲ್ ಡೌನ್!
ಉಡುಪಿ, ಏಪ್ರಿಲ್ 11: ಉಡುಪಿ ಜಿಲ್ಲೆಯ ಎಲ್ಲ ಗಡಿಗಳನ್ನೂ ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ಜಿಲ್ಲೆಯ ನಾಲ್ಕು ಗಡಿ ಕಂಪ್ಲೀಟ್ ಸೀಲ್ ಆಗಿದ್ದು, ಉ.ಕ, ದ.ಕ, ಶಿವಮೊಗ್ಗ, ಚಿಕ್ಕಮಗಳೂರು ಗಡಿಗಳು ಇದರಲ್ಲಿ ಸೇರಿವೆ.
ಜಿಲ್ಲೆಯೊಳಗೆ ಯಾರಿಗೂ ಪ್ರವೇಶವಿಲ್ಲ ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿರುವ ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಲ್ಲೆಯಿಂದ ಯಾರೂ ಹೊರಹೋಗುವಂತಿಲ್ಲ ಎಂದು ಆದೇಶ ನೀಡಿದ್ದಾರೆ. ಲಾಕ್ ಡೌನ್ ಮುಗಿಯುವ ದಿನ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಹೊರ ಜಿಲ್ಲೆಗಳಲ್ಲಿರುವ ಜಿಲ್ಲೆಯ ಜನರು ಉಡುಪಿಗೆ ಬರಲು ತಯಾರಿ ನಡೆಸಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದೆ. ಹಾಗೆಯೇ ಉಡುಪಿಯಲ್ಲಿ ಸಿಲುಕಿರುವ ಹೊರ ಜಿಲ್ಲೆಯ ಜನರು ಹೊರಡಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಗಡಿಗಳನ್ನು ಸೀಲ್ ಮಾಡಿ ಕಠಿಣ ಕ್ರಮಕ್ಕೆ ಜಿಲ್ಲಾಧಿಕಾರಿ ಮುಂದಾಗಿದ್ದಾರೆ.

ಸದ್ಯ ಉಡುಪಿ ಸುರಕ್ಷಿತವಾಗಿದೆ. ಹೊರ ಜಿಲ್ಲೆಯಿಂದ ಸೋಂಕು ಬರುವ ಅಪಾಯ ಬೇಡ. ಹಾಗಾಗಿ ಗಡಿ ಸೀಲ್ ಡೌನ್ ಮಾಡಿ ಯಾರಿಗೂ ಬಾರದಂತೆ ಮತ್ತು ಹೊರ ಹೋಗದಂತೆ ಕಠಿಣ ಕ್ರಮ ಕೈಗೊಂಡಿದ್ದೇವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.












Click it and Unblock the Notifications