ಕೃಷ್ಣನಗರಿಯಲ್ಲಿ ಹಲವು ದಿನಗಳ ನಂತರ ಕೊರೊನಾ ಪ್ರಕರಣ ಹೆಚ್ಚಳ

ಉಡುಪಿ, ಜುಲೈ 11: ಹಲವು ದಿನಗಳ ಬಳಿಕ ಕೃಷ್ಣನಗರಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಸ್ಪೋಟಗೊಂಡಿದೆ. ಇಂದು ಒಂದೇ ದಿನದಲ್ಲಿ 90 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.

ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 1567ಕ್ಕೆ ಏರಿಕೆ ಆದಂತಾಗಿದೆ. ಇದೇ ಹೊತ್ತಿಗೆ ಜಿಲ್ಲೆಯಲ್ಲಿ ಇಂದು 21 ಜನ ಡಿಸ್ಚಾರ್ಜ್ ಆಗಿದ್ದಾರೆ.

ಜಿಲ್ಲೆಯಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 319 ಇದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸುಧೀರ್ ಚಂದ್ರ ಸೂಡಾ ಮಾಹಿತಿ ನೀಡಿದ್ದಾರೆ.

After Several Days Coronavirus Positive Cases Reported More In Udupi District

ಕಾಪು ಎಎಸ್ ಐ ಗೆ ಸೋಂಕು: ಠಾಣೆ ಸೀಲ್ ಡೌನ್

ಉಡುಪಿ ಜಿಲ್ಲೆಯ ಕಾಪು ಪೊಲೀಸ್ ಠಾಣೆಯ ಎಎಸ್ ಐಗೆ ಕೊರೊನಾ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ ಕಾಪು ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ. ಸದ್ಯ ಕಾಪು ಠಾಣೆಯನ್ನು ವೀರಭದ್ರ ದೇವಸ್ಥಾನಕ್ಕೆ ಸ್ಥಳಾಂತರ ಮಾಡಲಾಗಿದೆ.

ಮುಂದಿನ 48 ಗಂಟೆಗಳ ಸ್ಯಾನಿಟೈಸ್ ಪ್ರಕ್ರಿಯೆ ನಡೆಯಬೇಕಿದೆ. ಅಲ್ಲಿಯತನಕ ಪೊಲೀಸ್ ಠಾಣೆ ದೇವಸ್ಥಾನದಲ್ಲಿ ಕಾರ್ಯನಿರ್ವಹಿಸಲಿದೆ. ಸೋಂಕು ಪೀಡಿತ ಎಎಸ್ ಐ ಕೋಟದಿಂದ ಬಸ್ ಮೂಲಕ ಪ್ರತಿದಿನ ಪ್ರಯಾಣಿಸುತ್ತಿದ್ದರು. ಹೀಗಾಗಿ ಪ್ರಯಾಣದ ಸಂದರ್ಭ ಅವರಿಗೆ ಸೋಂಕು ತಗುಲಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+