ಉಡುಪಿ: ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ
ಉಡುಪಿ, ಜುಲೈ.26: ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ, ಮದುವೆಯಾಗುವುದಾಗಿ ನಂಬಿಸಿ ಆಕೆಯೊಡನೆ ದೈಹಿಕ ಸಂಪರ್ಕಮಾಡಿ ಅತ್ಯಾಚಾರ ಎಸಗಿದ ಘಟನೆಯೊಂದು ಕಾರ್ಕಳದ ಕಸಬಾ ಗ್ರಾಮದಲ್ಲಿ ನಡೆದಿದೆ.
ಬೆಳ್ಮಣ್ಣು ಉಜಾಲಾ ಹೊಟೆಲ್ ನ ಕ್ಯಾಶಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಸೂಡಾ ನಿವಾಸಿ ಸುಕೇಶ್ ಶೆಟ್ಟಿಗಾರ್ ( 30) ಆರೋಪಿಯಾಗಿದ್ದು, ಮಂಗಳೂರು ತಾಲೂಕಿನ ಪುತ್ತಿಗೆ ಗ್ರಾಮದ ಕಂಚಿಬೈಲು ನಿವಾಸಿಯಾಗಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಬಾಲಕಿ ಪುತ್ತಿಗೆ ಗ್ರಾಮದ ಕಂಚಿಬೈಲುನಿಂದ ದಿನಂಪ್ರತಿ ಬೆಳ್ಮಣ್ಣು ಶಾಲೆಗೆ ಬರುತ್ತಿದ್ದಳು. ಬಾಲಕಿಯ ಹುಟ್ಟುಹಬ್ಬ ಆಚರಿಸಲು ಉಜಲಾ ಹೋಟೆಲ್ ಗೆ ತೆರಳಿದಾಗ ಅಂದು ಸುಕೇಶ್ ಶೆಟ್ಟಿಗಾರ್ ಎಂಬಾತನ ಪರಿಚಯವಾಗಿತ್ತು.

ನಂತರ ಪರಿಚಯ ಪ್ರೇಮಕ್ಕೆ ತಿರುಗಿ ಕಳೆದ ವರ್ಷ ಡಿಸೆಂಬರ್ ನಲ್ಲಿ ಆರೋಪಿ ಸುಕೇಶ್ ಎಂಬಾತ ಬಾಲಕಿಗೆ ಮದುವೆಯಾಗುವುದಾಗಿ ನಂಬಿಸಿ, ಬಾಲಕಿಯನ್ನು ಮೂಡಬಿದ್ರೆ ಸಮೀಪದ ಖಾಸಗಿ ಲಾಡ್ಜ್ ವೊಂದರಲ್ಲಿ ಅಕೆಯೊಂದಿಗೆ ಬಲಾತ್ಕಾರವಾಗಿ ಅತ್ಯಾಚಾರ ಎಸಗಿದ್ದಾನೆ.
ಇದೀಗ ಆಕೆ ಗರ್ಭವತಿಯಾಗಿದ್ದು, ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಹಿನ್ನಲೆಯಲ್ಲಿ ಅರೋಪಿ ಸುಕೇಶ್ ಶೆಟ್ಟಿಗಾರ್ ಎಂಬಾತನ ವಿರುದ್ಧ ನಗರ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ನಗರ ಠಾಣೆ ಪೊಲೀಸರು ಅತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿ ಇಡಲಾಗಿದೆ.












Click it and Unblock the Notifications