ರೈಲ್ವೆ ಚಿಲ್ಡ್ರನ್, ರಿಸರ್ವೇಶನ್ ಚಿತ್ರಗಳಿಗೆ ಉಡುಪಿಯ ನಂಟು

By: ಐಸಾಕ್ ರಿಚರ್ಡ್
Subscribe to Oneindia Kannada

ಮಂಗಳೂರು, ಏಪ್ರಿಲ್ 17 : ಇತ್ತೀಚೆಗೆ ಘೋಷಿಸಲ್ಪಟ್ಟ 64ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಎರಡು ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಕನ್ನಡದ ರೈಲ್ವೆ ಚಿಲ್ಡ್ರನ್ ಮತ್ತು ರಿಸರ್ವೇಶನ್ ಚಿತ್ರಗಳು ಉಡುಪಿಯ ನಂಟು ಹೊಂದಿವೆ.

ಹೌದು, ರೈಲ್ವೆ ಚಿಲ್ಡ್ರನ್ ಚಿತ್ರದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ಬಾಲ ನಟ ಪ್ರಶಸ್ತಿ ಸ್ವೀಕರಿಸಿರುವ ಮನೋಹರ ಕೆ ಅವರು ಉಡುಪಿಯ ಟಿನ್ ಡ್ರಮ್ ಬೀಟ್ಸ್ ಸಂಸ್ಥೆಯಲ್ಲಿ ತರಬೇತಿ ಪಡೆದುಕೊಂಡಿದ್ದಾರೆ ಎನ್ನುವುರು ವಿಶೇಷ.

64th national film awards bagged "Railway Children" and "Reservation" have great connection with Udupi

ಬಾಲ ನಟ ಮನೋಹರನನ್ನು ತರಬೇತುಗೊಳಿಸಿದ ಟಿನ್ ಡ್ರಮ್ ಬೀಟ್ಸ್ ಸಂಸ್ಥೆ 2016ರಲ್ಲಿ ಸ್ಥಾಪಿತವಾಗಿದೆ. ಬೆಂಗಳೂರು ಮೂಲದ ಮನೋಹರ ರೈಲ್ವೆ ಚಿಲ್ಡ್ರನ್ ಚಿತ್ರದ ಆಡಿಷನ್ನಿಗಾಗಿ ಬಂದಾಗ ಚಿತ್ರಗಳಲ್ಲಿ ಅಭಿನಯಿಸಿದ ಯಾವುದೇ ಅನುಭವ ಆತನಿಗಿರಲಿಲ್ಲ. ಮನೋಹರನನ್ನು ಆತನನ್ನು ಉಡುಪಿಗೆ ಕರೆತಂದು ಟಿನ್ ಡ್ರಮ್ ಮೂಲಕ ತರಬೇತು ನೀಡಲಾಗಿತ್ತು.

ಲಲಿತಾ ಅಯ್ಯರ್ ಹಾಗೂ ಮಾಲ್ಕಂ ಹಾರ್ಪರ್ ಅವರ ಕೃತಿ ರೆಸ್ಕ್ಯೂವಿಂಗ್ ರೈಲ್ವೇ ಚಿಲ್ಡ್ರನ್ ಆಧಾರಿತ ಚಿತ್ರ ಇದಾಗಿದ್ದು, ರೈಲ್ವೆ ಪ್ಲಾಟ್ ಫಾರಂಗಳಲ್ಲಿ ವಾಸಿಸುವ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಹಾಗೂ ಅವರು ಅಮಲು ಪದಾರ್ಥಗಳ ದಾಸರಾಗುವ ಕರಾಳ ಜಗತ್ತಿನ ಚಿತ್ರಣವನ್ನು ನಮ್ಮ ಮುಂದಿಡುತ್ತದೆ.

ರಿಸರ್ವೇಶನ್ ಚಿತ್ರಕ್ಕೂ ಜಿಲ್ಲೆಯ ನಂಟು: ಅತ್ಯುತ್ತಮ ಪ್ರಾದೇಶಿಕ ಭಾಷಾ ಚಲನಚಿತ್ರ ಪ್ರಶಸ್ತಿ ಪಡೆದ ರಿಸರ್ವೇಶನ್ ಚಿತ್ರದಕ್ಕೆ ಬಂಡವಾಳ ಹೂಡಿದವರಲ್ಲಿ (ನಿರ್ಮಾಪಕ) ಉಡುಪಿಯ ಯಾಖೂಬ್ ಗುಲ್ವಾಡಿ ಒಬ್ಬರಾಗಿದ್ದಾರೆ.
.
ರಿಸರ್ವೇಶನ್ ಚಿತ್ರದ ನಿರ್ಮಾಪಕ ಯಾಖೂಬ್ ಗುಲ್ವಾಡಿ, ಗಿರೀಶ್ ಕಾಸರವಳ್ಳಿಯವರ ಗುಲಾಬಿ ಟಾಕೀಸ್ ಪ್ರಶಸ್ತಿ ವಿಜೇತ ಚಿತ್ರಕ್ಕೂ ಕೆಲಸ ಮಾಡಿದ್ದು ಅದರಲ್ಲಿ ನಟಿಸಿದ್ದ ಉಮಾಶ್ರೀ ಅವರ ವಸ್ತ್ರ ವಿನ್ಯಾಸಕರಾಗಿದ್ದರು.

ಹಜ್ ಚಿತ್ರದಲ್ಲೂ ಗುಲ್ವಾಡಿಯವರು ರಿಸರ್ವೇಶನ್ ಚಿತ್ರ ನಿರ್ದೇಶಕ ನಿಖಿಲ್ ಮಂಜೂ ಜತೆ ಕೆಲಸ ಮಾಡಿದ್ದರು. ಬಡತನದಿಂದ ಕಂಗೆಟ್ಟಿರುವ ಬ್ರಾಹ್ಮಣ ಕುಟುಂಬವೊಂದು ತನ್ನ ಮಕ್ಕಳಿಗೆ ದೊಡ್ಡ ಶಾಲೆಯೊಂದರಲ್ಲಿ ಪ್ರವೇಶಾತಿ ಪಡೆಯಲು ಮೀಸಲಾತಿಗಾಗಿ ಹೆಣಗಾಡುವ ಕಥಾವಸ್ತುವನ್ನು ರಿಸರ್ವೇಶನ್ ಚಿತ್ರ ಹೊಂದಿದೆ.

ಮೀಸಲಾತಿ ಸೌಲಭ್ಯಗಳನ್ನು ಹೇಗೆ ದುರುಪಯೋಗಪಡಿಸಲಾಗುತ್ತದೆಯೆಂಬುದನ್ನು ಚಿತ್ರ ಪ್ರೇಕ್ಷಕರ ಮುಂದಿಡುತ್ತದೆ. ಉಡುಪಿಯಲ್ಲಿ ಚಿಂದಿ ಸಂಗ್ರಾಹಕರಾಗಿದ್ದ ಗುಲ್ವಾಡಿಯವರು ಆರನೇ ತರಗತಿಗಿಂತ ಹೆಚ್ಚು ಓದಿಲ್ಲ ಎಂಬುದು ಗಮನಾರ್ಹ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Recently 2 films which bagged awards in 64th national film award "Railway Children" and "Reservation" have great connection with Udupi. The Reservation film produced under the banner of Gulvadi talkies under the leadership of amateur film actor and young author Yakub Khader Gulvadi from Udupi.
Please Wait while comments are loading...