ಉಡುಪಿ: ಕವರ್ ಸಹಿತ ಚಾಕಲೇಟ್ ತಿನ್ನುವಾಗ ಉಸಿರುಗಟ್ಟಿ 5 ವರ್ಷದ ಮಗು ಸಾವು

ಉಡುಪಿ, ಜುಲೈ 20: ಅಳುವ ಮಕ್ಕಳಿಗೆ ಚಾಕಲೇಟ್ ಕೊಟ್ಟು ಸಮಾಧಾನ ಮಾಡುವುದು ಸರ್ವ ಸಾಮಾನ್ಯ, ಆದರೆ ಇಲ್ಲೊಬ್ಬ ಬಾಲಕಿ ಸಾವಿಗೆ ಅದೇ ಚಾಕಲೇಟ್‌ ಕಾರಣವಾಗಿದೆ. ಶಾಲೆಗೆ ಕಳುಹಿಸುವ ವೇಳೆ ಮಗುವಿಗೆ ಚಾಕಲೇಟ್‌ ಕೊಟ್ಟಿ ಕಳುಹಿಸಿದ್ದಾರೆ. ಬಸ್‌ಗಾಗಿ ಕಾಯುತ್ತಿದ್ದ ಮಗು ಚಾಕಲೇಟ್‌ಅನ್ನು ತಿನ್ನುವ ವೇಳೆ ಕವರ್‌ ಸಮೇತ ನುಂಗಿದ್ದು, ಉಸಿರುಗಟ್ಟಿ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಬವಳಾಡಿ ಮೂಲದ ಸಮನ್ವಿ (6) ದುರಂತವಾಗಿ ಸಾವನ್ನಪ್ಪಿರುವ ಬಾಲಕಿ. ಸಮನ್ವಿ ಉಪ್ಪುಂದದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಒಂದನೇ ತರಗತಿ ವಿದ್ಯಾರ್ಥಿನಿ ಓದುತ್ತಿದ್ದಳು. ಮಾಮೂಲಿನಂತರ ಶಾಲೆಗೆ ಹೋಗುವುದಿಲ್ಲ ಎಂದು ಹಠ ಮಾಡಿದ್ದಕ್ಕಾಗಿ ಮನೆಯವರು ಮಗುವಿನ ಕೈಗೆ ಚಾಕಲೇಟ್‌ ನೀಡಿ ಕಳುಹಿಸಿದ್ದಾರೆ.

5 Year Child died choking on chocolate in Udupi

ಬಸ್‌ಗಾಗಿ ಕಾಯುತ್ತಿದ್ದ ಮಗುವ ಬಸ್‌ ಬರುತ್ತಿರುವುದನ್ನ ನೋಡಿ ಬಾಯಿಗೆ ಚಾಕಲೇಟ್ ಹಾಕಿಕೊಂಡಿದೆ. ಆತುರದಲ್ಲಿ ಚಾಕಲೇಟ್ ತಿನ್ನುವ ವೇಳೆ ಕವರ್ ಸಮೇತ ಬಾಯಿಗೆ ಹಾಕಿಕೊಂಡಿದ್ದು, ಉಸಿರುಗಟ್ಟಿ ಶಾಲಾ ವಾಹನದ ಬಳಿಯೇ ಸಾವನ್ನಪ್ಪಿದ್ದಾಳೆ. ಕೂಡಲೇ ಬಸ್‌ನ ಚಾಲಕ ಹಾಗೂ ಸ್ಥಳೀಯರು ಕೃತಕ ಉಸಿರಾಟ ವ್ಯವಸ್ಥೆ ಮಾಡಲು ಪ್ರಯತ್ನಿಸಿದ್ದಾರೆ. ಅಲ್ಲದೆ ತಕ್ಷಣ ಬೈಂದೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲಾಗಲೇ ಸಮನ್ವಿ ಪ್ರಾಣಪಕ್ಷಿ ಹಾರಿ ಹೋಗಿದೆ.

ಮಣಿಪಾಲ್ ಕೆ.ಎಂ.ಸಿ ಆಸ್ಪತ್ರೆಗೆ ಬಾಲಕಿ ದೇಹ ರವಾನೆ ಮಾಲಾಗಿದ್ದು, ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+