ಉಡುಪಿ: ಅಗ್ನಿ ಅವಘಡ, 15 ಗುಡಿಸಲು ಭಸ್ಮ
ಉಡುಪಿ, ಮೇ 23 : ಪಾಳು ಬಾವಿಯಲ್ಲಿನ ಕಸಕ್ಕೆ ಹಚ್ಚಲಾಗಿದ್ದ ಬೆಂಕಿಯ ಕಿಡಿ ಗುಡಿಸಲುಗಳಗೆ ತಗುಲಿ ಎರಡು ಸಿಲಿಂಡರ್ ಸ್ಪೋಟಗೊಂಡ ಪರಿಣಾಮ 15 ಗುಡಿಸಲುಗಳು ಸುಟ್ಟು ಭಸ್ಮವಾದ ದುರ್ಘಟನೆ ನಿಟ್ಟೂರು ಅಡ್ಡಕಾದ ಕಟ್ಟೆಯಲ್ಲಿ ನಿನ್ನೆ ಮಧ್ಯರಾತ್ರಿ ನೆಡೆದಿದೆ.
ಇಲ್ಲಿನ ಪಾಳು ಬಾವಿಯಲ್ಲಿನ ಕಸಕ್ಕೆ ಹಚ್ಚಲಾಗಿದ್ದ ಬೆಂಕಿಯ ಕಿಡಿ ಗುಡಿಸಲಿಗೆ ತಾಗಿ ಗುಡಿಸಲಲ್ಲಿದ್ದ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಪಕ್ಕದಲ್ಲಿದ್ದ ಮತ್ತೊಂದು ಗುಡಿಸಲಲ್ಲಿದ್ದ ಸಿಲಿಂಡರ್ ಕೂಡ ಸ್ಪೋಟಗೊಂಡಿದೆ.

ಈ ಎರಡು ಸಿಲಿಂಡರ್ ಸ್ಪೋಟದ ಪರಿಣಾಮ ಸುತ್ತಮುತ್ತಲಿದ್ದ 15 ಗುಡಿಸಲು, 10ಕ್ಕೂ ಅಧಿಕ ಮರಗಳು ಬೆಂಕಿಗಾಹುತಿಯಾಗಿವೆ.
ಅದೃಷ್ಟವಶಾತ್ ಗುಡಿಸಲಲ್ಲಿ ಯಾರು ಇಲ್ಲದ ಕಾರಣ ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ. ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಅಗ್ನಿ ಶಾಮಕ ದಳ ಆಗಮಿಸಿ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು












Click it and Unblock the Notifications