ವಿಡಿಯೋ; ತುಮಕೂರಿನಲ್ಲಿ ಏಕಾಏಕಿ ದಾಳಿ ಮಾಡಿದ ಒಂಟಿ ಸಲಗ
ತುಮಕೂರು, ಮಾರ್ಚ್ 9: ಊರಿಗೆ ನುಗ್ಗಿದ ಒಂಟಿ ಸಲಗವೊಂದು ಏಕಾಏಕಿ ದಾಳಿ ನಡೆಸಿ ವೃದ್ಧರೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ಇಂದು ಬೆಳಿಗ್ಗೆ ತುಮಕೂರಿನ ಹಿರೇಹಳ್ಳಿಯಲ್ಲಿ ಊರಿನೊಳಗೆ ನುಗ್ಗಿದ ಒಂಟಿ ಸಲಗ ಮನೆಯೊಂದರ ಬಳಿ ಬಂದಿದೆ. ಆನೆ ಬರುತ್ತಿರುವುದನ್ನು ಗಮನಿಸದ ವ್ಯಕ್ತಿಯನ್ನು ಅಟ್ಟಾಡಿಸಿಕೊಂಡು ಹೋಗಿ ಕ್ಷಣಮಾತ್ರದಲ್ಲಿ ದಾಳಿ ಮಾಡಿ ಒದ್ದು, ಬಿಸಾಡಿದೆ.

ಘಟನೆಯಲ್ಲಿ ದಾಸಯ್ಯ (65) ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರ ಎರಡೂ ಕಾಲುಗಳು ಜಜ್ಜಿವೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.












Click it and Unblock the Notifications