ಲಿಂಗೈಕ್ಯ 'ನಡೆದಾಡುವ ದೇವರು' ಶ್ರೀಗಳನ್ನು ಸ್ಮರಿಸಿದ ಟ್ವಿಟ್ಟಿಗರು

Recommended Video

      Siddaganga Swamiji : ಸಿದ್ದಗಂಗಾ ಶ್ರೀಗಳನ್ನ ನೆನೆದು ದುಃಖತಪ್ತರಾದ ಟ್ವಿಟ್ಟಿಗರು | Oneindia Kannada

      ತುಮಕೂರು, ಜನವರಿ 21: ತ್ರಿವಿಧ ದಾಸೋಹಿ, ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳ ನಿಧನಕ್ಕೆ ಸಾಮಾಜಿಕ ಜಾಲ ತಾಣಗಳಲ್ಲಿ ಕಂಬನಿ ಸುರಿಸಲಾಗಿದೆ.

      111 ವರ್ಷ ವಯಸ್ಸಿನ ಶ್ರೀಗಳು ಡಿಸೆಂಬರ್ 2018ರಿಂದ ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚಿಗೆ ಅವರ ಆರೋಗ್ಯ ಸ್ಥಿತಿ ಕ್ಷೀಣಿಸುತ್ತಾ ಬಂದಿತ್ತು. ಜನವರಿ 03ರಿಂದ ಸಿದ್ದಗಂಗಾ ಮಠದಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು.ಸೋಮವಾರ ಜನವರಿ 21ರ ಬೆಳಗ್ಗೆ 11.44ಕ್ಕೆ ಲಿಂಗೈಕ್ಯರಾಗಿದ್ದಾರೆ. ಮಧ್ಯಾಹ್ನ 1.56ಕ್ಕೆ ಅಧಿಕೃತವಾಗಿ ಘೋಷಿಸಲಾಗಿದೆ.

      ಮಂಗಳವಾರ ಮಧ್ಯಾಹ್ನ 3 ಗಂಟೆ ತನಕ ಸಾರ್ವಜನಿಕ ದರ್ಶನಕ್ಕಾಗಿ ಸಿದ್ದಗಂಗಾ ಮಠದ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದೆ. ಮಂಗಳವಾರದಂದೇ ವಿರಕ್ತ ಮಠದ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ನೆರವೇರಲಿದೆ. ನಾಳೆ ದಿನ ಅಂತ್ಯ ಸಂಸ್ಕಾರ ನಡೆಯಲಿದ್ದು, ಕರ್ನಾಟಕದಾದ್ಯಂತ ಸರ್ಕಾರಿ ಕಚೇರಿ, ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

      ದೇವರ ಲೋಕಕ್ಕೆ ಮರಳಿದ ನಡೆದಾಡುವ ದೇವರು

      ದೇವರ ಲೋಕಕ್ಕೆ ಮರಳಿದ ನಡೆದಾಡುವ ದೇವರು

      ತ್ರಿವಿಧ ದಾಸೋಹಿ, ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು ಸೋಮವಾರ ಜನವರಿ 21ರ ಬೆಳಗ್ಗೆ 11.44ಕ್ಕೆ ಲಿಂಗೈಕ್ಯರಾಗಿದ್ದಾರೆ. ಮಧ್ಯಾಹ್ನ 1.56ಕ್ಕೆ ಅಧಿಕೃತವಾಗಿ ಘೋಷಿಸಲಾಗಿದೆ. ನಾಳೆ(ಜನವರಿ 22) ದಿನ ಅಂತ್ಯ ಸಂಸ್ಕಾರ ನಡೆಯಲಿದ್ದು, ಕರ್ನಾಟಕದಾದ್ಯಂತ ಸರ್ಕಾರಿ ಕಚೇರಿ, ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

      ಟ್ವಿಟ್ಟರಲ್ಲಿ ಸಿದ್ದಗಂಗಾಶ್ರೀಗಳ ನಿಧನಕ್ಕೆ ಕಂಬನಿ

      ಟ್ವಿಟ್ಟರಲ್ಲಿ ಸಿದ್ದಗಂಗಾಶ್ರೀಗಳ ನಿಧನಕ್ಕೆ ಕಂಬನಿ ಸುರಿಸಲಾಗಿದ್ದು, ವಿವಿಧ ರೀತಿಗಳಲ್ಲಿ ದೇವರನ್ನು ಸ್ಮರಿಸಲಾಗುತ್ತಿದೆ.

      ಸೇಂಟ್ ಏವರೆಸ್ಟ್ ಸಿದ್ದಗಂಗಾ ಶ್ರೀಗಳು

      111ವರ್ಷಗಳ ಸಮಾಜ ಸೇವೆ ಸರಿಸುಮಾರು 10ಸಾವಿರ ವಿಧ್ಯಾರ್ಥಿ ವೃಂದ. ಇನ್ನೆಂತ ಕೊಡುಗೆ ಕೊಡೋಕೆ ಸಾದ್ಯ ? ಅದಕ್ಕೆ ಗವಿ ಸಿದ್ದೆಶ್ವರರು ಅವರನ್ನ ಸೇಂಟ್ ಎವೆರೆಸ್ಟ್ ಅಂದದ್ದು..

      ವಿವಿಧ ಪತ್ರಿಕೆಗಳಿಂದ ಶ್ರೀಗಳ ಕುರಿತ ಸುದ್ದಿ

      ದೇಶದ ವಿವಿಧ ಪತ್ರಿಕೆಗಳು, ರಾಷ್ಟ್ರ ಮಟ್ಟದ ಮಾಧ್ಯಮಗಳಲ್ಲಿ ಶ್ರೀಗಳ ಕುರಿತ ಸುದ್ದಿ ಇಂದು ಪ್ರಕಟ, ಪ್ರಸಾರವಾಗುತ್ತಿದ್ದು, ಟ್ವಿಟ್ಟರಲ್ಲಿ ಟ್ರೆಂಡಿಂಗ್ ಆಗಿದೆ.

      ಸಿದ್ದಗಂಗಾ ವಿದ್ಯಾಸಂಸ್ಥೆಯಿಂದ ಅಧಿಕೃತ ಪ್ರಕಟಣೆ

      ಸಿದ್ದಗಂಗಾ ವಿದ್ಯಾಸಂಸ್ಥೆಯಿಂದ ಅಧಿಕೃತ ಪ್ರಕಟಣೆ ಹೊರಡಿಸಲಾಗಿದ್ದು, ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

      ಬಸವ ತತ್ವವನ್ನು ಪಾಲಿಸಿದ ನಡೆದಾಡುವ ದೇವರು

      ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,
      ಮುನಿಯಬೇಡ, ಅನ್ಯರಿಗೆ ಅಸಹ್ಯಬಡಬೇಡ,
      ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ.
      ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ
      ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ.

      ಬಸವ ತತ್ವವನ್ನು ಪಾಲಿಸಿದ ನಡೆದಾಡುವ ದೇವರು

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+