ತಿಲಕ್ ಪಾರ್ಕ್ ಸಿಪಿಐ ಪಾರ್ವತಮ್ಮ ಆವಾಜ್ ಓಕೆ, ವಿಡಿಯೋ ಯಾಕೆ?
ತುಮಕೂರು, ಸೆಪ್ಟೆಂಬರ್ 1: ತುಮಕೂರು ನಗರದ ತಿಲಕ್ ಪಾರ್ಕ್ ವೃತ್ತದ ಸಿಪಿಐ ಪಾರ್ವತಮ್ಮ ಅವರು ರೌಡಿಗಳ ಪರೇಡ್ ನಲ್ಲಿ ಏನೋ ಮಾತನಾಡಲು ಹೋಗಿ, ವ್ಯಾಪಕ ಟೀಕೆಗೆ ಒಳಗಾಗಿದ್ದಾರೆ. ಇನ್ನು ಪಾರ್ವತಮ್ಮ ಅವರ ಆವಾಜ್ ನ ವಿಡಿಯೋ ವೈರಲ್ ಆಗಿ, ಈಗ ಅವರೇ ಪೇಚಿಗೆ ಸಿಲುಕಿದ್ದಾರೆ.
ಪಾರ್ವತಮ್ಮರ ಅವರು ಆಡಿದ ಮಾತುಗಳ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. "ಸರ್ವಾಂಗಗಳನ್ನು ಮುಚ್ಚಿಕೊಂಡಿರಬೇಕು, ಅನ್ನ ತಿನ್ನಲು ಗತಿಯಿಲ್ಲ, ಬಟ್ಟೆ ಹಾಕೋಕೂ ಗತಿಯಿಲ್ಲ. ನನ್ ಮಕ್ಕಳಾ..." ಹೀಗೆ ರೌಡಿಗಳಿಗೆ ಆವಾಜ್ ಹಾಕಿದ್ದಾರೆ. "ಮಗನೇ, ಬೀದಿ ಹೆಣ ಆಗ್ತೀಯಾ..ಮದುವೆ ಆದರೆ ಹೆಂಡತಿ ಬೇರೆಯವರ ಜೊತೆ ಹೋಗ್ತಾಳೆ" ಹೀಗೆ ಎಚ್ಚರಿಕೆ ಮುಂದುವರಿಯುತ್ತದೆ.
ಅಷ್ಟೆ ಅಲ್ಲ, ತುಮಕೂರಿನ ಚನ್ನಪ್ಪನ ಪಾಳ್ಯದ ಹೆಣ್ಣುಮಕ್ಕಳು ಭಾರೀ ಆಟ ಆಡ್ತಿದ್ದಾರೆ. ಅವರಿಗೂ ಬುದ್ಧಿ ಹೇಳಿ ಎಂದು ಎಚ್ಚರಿಕೆ ಕೊಟ್ಟಿರುವ ಪಾರ್ವತಮ್ಮ, ರೌಡಿಗಳಿಂದ ಹೆಣ್ಣು ಮಕ್ಕಳಿಗೆ ಬುದ್ಧಿ ಹೇಳುವುದಕ್ಕೆ ಹೊರಟಿದ್ದಾರೆ.

"ನನ್ ಮಕ್ಕಳಾ ರೌಡಿ ಶೀಟರ್ ಗೆ ನಾನು ಏನ್ ಬೇಕಾದರೂ ಮಾಡಬಹುದು. ಯಾವ ಪರ್ಮಿಷನ್ ಬೇಕಾಗಿಲ್ಲ. ನೀವು ಸಾಯೋ ತನಕ ನಾವು ನಿಮ್ಮನ್ನ ಯಾವ ಕೇಸಲ್ಲಿ ಬೇಕಾದರೂ ಫಿಟ್ ಮಾಡಬಹುದು" ಎಂದು ಧಮಕಿ ಹಾಕಿದ್ದಾರೆ.
ಅಲ್ಲದೆ ಒಂದಿಷ್ಟು ಜನರನ್ನ ಎನ್ ಕೌಂಟರ್ ಮಾಡಬೇಕು. ಆಗ ಸುಮ್ಮನಿರ್ತೀರಾ ಎಂದಿದ್ದಾರೆ. ಇದು ಬರೀ ಎಚ್ಚರಿಕೆ ಹಂತಕ್ಕೆ ನಿಂತಿಲ್ಲ. ರೌಡಿಗಳಿಗೆ ಬಯ್ಯುವ ದೃಶ್ಯವನ್ನು ತಮ್ಮ ಸಿಬ್ಬಂದಿಯಿಂದಲೇ ಚಿತ್ರೀಕರಣ ಮಾಡಿಸಿದ್ದಾರೆ ಪಾವರ್ತಮ್ಮ. ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅವರ ಮಾತಿನ ವೈಖರಿಗೆ, ಇದು ಪ್ರಚಾರ ಪಡೆಯುವ ಹಪಹಪಿ ಎಂಬ ಆರೋಪ ಕೇಳಿಬರುತ್ತಿದೆ.












Click it and Unblock the Notifications