ಪಕ್ಕದ ಮನೆ ನಾಯಿ ಬಂದಿದ್ದಕ್ಕೆ ಜಗಳ; ತಿಪಟೂರಿನ ಮೂವರಿಗೆ ಗಂಭೀರ ಗಾಯ

ತುಮಕೂರು, ಸೆಪ್ಟೆಂಬರ್ 16: ಪಕ್ಕದ ಮನೆ ನಾಯಿ ತಮ್ಮ ಮನೆಗೆ ಬಂದಿತೆಂದು ಎರಡು ಕುಟುಂಬಗಳ ನಡುವೆ ಜಗಳ ನಡೆದಿದ್ದು, ಇದರಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಮಣಕಿಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶಿವಕುಮಾರಸ್ವಾಮಿ ಎಂಬುವರ ಸಾಕುನಾಯಿ ಪಕ್ಕದ ಮನೆಗೆ ಹೋಗಿತ್ತು. ಈ ವಿಚಾರವಾಗಿ ಪಕ್ಕದ ಮನೆಯವರಾದ ವರುಣ್ ಹಾಗೂ ಕರ್ಣ ಎಂಬುವರು ಶಿವಕುಮಾರ ಅವರ ಮೇಲೆ ಜಗಳಕ್ಕೆ ಹೋದರು.

Three People Seriously Injured In The Quarrel Regarding Dog In Tiptur

ನಂತರ ಇದೇ ವಿಚಾರಕ್ಕೆ ವಾಗ್ವಾದ ಮುಂದುವರೆದು ಶಿವಕುಮಾರ್, ಅವರ ತಾಯಿ ಸತ್ಯ ಪ್ರೇಮ, ಪತ್ನಿ ರೇಖಾ ಮೇಲೆ ಕಬ್ಬಿಣದ ಪೈಪಿನಿಂದ ಹಲ್ಲೆ ಮಾಡಲಾಗಿದೆ. ಇದರಿಂದ ಈ ಮೂವರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಶಿವಕುಮಾರ್ ಸ್ವಾಮಿ ಕುಟುಂಬದವರನ್ನು ತಿಪಟೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+