Get Updates
Get notified of breaking news, exclusive insights, and must-see stories!

ಕೊರಟಗೆರೆಯಲ್ಲಿ ಜಿ ಪರಮೇಶ್ವರ್‌ ಮೇಲೆ ಕಲ್ಲು ತೂರಾಟ, ತಲೆಗೆ ಗಾಯ

ಕೊರಟಗೆರೆ, ಏಪ್ರಿಲ್‌ 28: ಮಾಜಿ ಡಿಸಿಎಂ ಜಿ ಪರಮೇಶ್ವರ್‌ ಮೇಲೆ ಕೊರಟಗೆರೆಯ ಬೈರನಹಳ್ಳಿಯಲ್ಲಿ ಕಲ್ಲು ತೂರಾಟ ನಡೆದಿದ್ದು ಅವರ ತಲೆಗೆ ಗಾಯವಾಗಿದೆ. ಪ್ರಚಾರ ಮಾಡುತ್ತಿದ್ದ ಗುಂಪಿನಲ್ಲಿದ್ದ ಕಿಡಿಗೇಡಿಗಳು ಕಲ್ಲು ತೂರಿದ್ದು, ಅವರ ತಲೆಗೆ ಕಲ್ಲು ತಾಗಿ ರಕ್ರಸ್ರಾವವಾಗಿದೆ ಎನ್ನಲಾಗಿದೆ.

ಶುಕ್ರವಾರ ಕೊರಟಗೆರೆ ತಾಲೂಕಿನ ಬೈರನಹಳ್ಳಿಯಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ ಅವರ ಬೆಂಬಲಿಗರು ಅವರನ್ನು ಎತ್ತಿಕೊಂಡು ಕುಣಿಯುತ್ತಿದ್ದರು. ಆಗ ಗುಂಪಿನಿಂದ ಕಿಡಿಗೇಡಿಗಳು ಹೂವಿನ ಮಧ್ಯೆ ಕಲ್ಲೂ ತೂರಿದ್ದಾರೆ ಎನ್ನಲಾಗಿದೆ.

Stone pelted on G Parameshwar in Koratagere, injured his head

ಸದ್ಯ ಪರಮೇಶ್ವರ್‌ ಅವರಿಗೆ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಪರಮೇಶ್ವರ್‌ ಅವರಿಗೆ ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ರಕ್ತಸ್ರಾವವಾಗುತ್ತಿತ್ತು. ಕಲ್ಲು ಬಿದ್ದ ಕೂಡಲೇ ತಲೆಯನ್ನು ಹಿಡಿದುಕೊಂಡ ಜಿ. ಪರಮೇಶ್ವರ್​​ ಅವರಿಗೆ​ ಅಕ್ಕಿರಾಂಪುರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ನಂತರ ತುಮಕೂರಿನ ಸಿದ್ದಾರ್ಥ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಶಿಫ್ಟ್​ ಮಾಡಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್‌ ನಾಯಕ ರಮೇಶ್‌ ಬಾಬು ಅವರು ಡಾ. ಜಿ ಪರಮೇಶ್ವರ್‌ ಅವರು ಕಾಂಗ್ರೆಸ್‌ನ ಹಿರಿಯ ನಾಯಕ ಅವರು ಯಾರೊಂದಿಗೂ ದ್ವೇಷ ಕಟ್ಟಿಕೊಂಡವರಲ್ಲ, ಪರಮೇಶ್ವರ್‌ ಅವರು ನಾಮಪತ್ರ ಸಲ್ಲಿಸುವ ವೇಳೆಯಲ್ಲೂ ತಾಲೂಕು ಕಚೇರಿ ಬಳಿ ಅವರ ಮೇಲೆ ದಾಳಿ ನಡೆಸುವ ಪ್ರಯತ್ನವಾಗಿತ್ತು. ಆಗ ಪೊಲೀಸ್‌ ಪೇದೆಯೊಬ್ಬರು ಗಾಯಗೊಂಡಿದ್ದರು.

ಈಗ ಡಾ. ಪರಮೇಶ್ವರ್‌ ಅವರ ಮೇಲೆ ನೇರ ದಾಳಿಯಾಗಿದೆ. ಈ ರಾಜ್ಯದಲ್ಲಿ ಏನಾಗುತ್ತಿದೆ. ಈ ಹಿಂದೆ ಇರುವವರನ್ನು ಬಂಧಿಸುವ ಕೆಲಸ ಮೊದಲು ಆಗಬೇಕು. ಇದು ವ್ಯವಸ್ಥಿತ ಷಡ್ಯಂತ್ರವಾಗಿದೆ. ಒಬ್ಬ ಮಾಜಿ ಡಿಸಿಎಂ ಅವರಿಗೇ ಈ ಗತಿ ಬಂದರೆ ಹೇಗೆ? ರಾಜ್ಯ ಚುನಾವಣಾ ಆಯೋಗ ಅವರಿಗೆ ರಕ್ಷಣೆ ಒದಗಿಸಬೇಕು ಎಂದು ಹೇಳಿದ್ದಾರೆ.

Stone pelted on G Parameshwar in Koratagere, injured his head

ಏಪ್ರಿಲ್‌ 19ರಂದು ಕೊರಟಗೆರೆ ವಿಧಾನಸಭಾ ಕ್ಷೇತ್ರದಿಂದ ಮಾಜಿ ಡಿಸಿಎಂ ಜಿ ಪರಮೇಶ್ವರ್‌ ಅವರು ನಾಮಪತ್ರ ಸಲ್ಲಿಸುವ ವೇಳೆ ಪೊಲೀಸರ ಮೇಲೆ ಕಲ್ಲೂ ತೂರಾಟ ನಡೆದಿತ್ತು. ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೊರಟಗೆರೆ ವಿಧಾನಸಭಾ ಕ್ಷೇತ್ರದಿಂದ ಬುಧವಾರ ತಾಲೂಕು ಕಚೇರಿಯಲ್ಲಿ ಪರಮೇಶ್ವರ್‌ ಅವರು ನಾಮಪತ್ರ ಸಲ್ಲಿಸಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು. ಈ ವೇಳೆ ಕಿಡಿಗೇಡಿಯೊಬ್ಬ ಕಲ್ಲು ತೂರಾಟ ನಡೆಸಿದ್ದರು. ಬಳಿಕ ಈ ಸಂಬಂಧ ವ್ಯಕ್ತಿಯೊಬ್ಬನ ಬಂಧನವಾಗಿತ್ತು.

ಅಂದು ಬುಧವಾರ ಜಿ ಪರಮೇಶ್ವರ್ ಅವರು ನಾಮಪತ್ರ ಸಲ್ಲಿಸುವ ಹಿನ್ನೆಲೆಯಲ್ಲಿ ಸಿದ್ದಗಂಗಾ ಶ್ರೀಗಳ ಗದ್ದುಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಬಳಿಕ ನೂತನ ಶ್ರೀಗಳನ್ನು ಭೇಟಿ ಮಾಡಿದ ಅವರು ತಮ್ಮನ್ನು ಆಶೀರ್ವದಿಸುವಂತೆ ಕೋರಿದ್ದರು. ಬಳಿಕ ಮಠದಿಂದ ಹೊರಟ ಅವರು ಬೃಹತ್‌ ರೋಡ್ ಶೋ ನಡೆಸಿದರು. ಈ ವೇಳೆ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+