'ಸಚಿವ ರೈ 1 ತಿಂಗಳು ಮಂಗಳೂರಿಗೆ ಹೋಗದಿದ್ದರೆ ಶಾಂತಿ ನೆಲೆಸುತ್ತದೆ'
ಮಂಗಳೂರಿನಲ್ಲಿ ನಡೆದ ಕೊಲೆಗೆ ಸಚಿವ ರಮಾನಾಥ್ ರೈ ಮತ್ತು ಸಿಎಂ ಸಿದ್ದರಾಮಯ್ಯ ಜವಾಬ್ದಾರರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗಂಭೀರ ಆರೋಪ ಮಾಡಿದ್ದಾರೆ.
ಸೋಮವಾರ ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಎಸ್ ವೈ, " ಮಂಗಳೂರಿನಲ್ಲಿ ನಡೆದ ಗಲಭೆಯ ಹಿಂದೆ ಸಚಿವ ರಮಾನಾಥ್ ರೈ ಪಿತೂರಿಯಿದೆ. ಸಚಿವರಿಂದಲೇ ಗಲಭೆಗೆ ಕುಮ್ಮಕ್ಕು ನೀಡಲಾಗಿದೆ. ಸಚಿವ ರೈ ಒಂದು ತಿಂಗಳು ಮಂಗಳೂರಿಗೆ ಹೋಗದಿದ್ದರೆ ಶಾಂತಿ ನೆಲೆಸುತ್ತದೆ" ಎಂದು ವಾಗ್ದಾಳಿ ನಡೆಸಿದರು.

ಶೋಭಾ ಕರಂದ್ಲಾಜೆ ಅನ್ಯಾಯದ ವಿರುದ್ಧ ಹೋರಾಡಿದ್ದಾರೆ. ಅನ್ಯಾಯದ ವಿರುದ್ಧ ಹೋರಾಡಿದಕ್ಕೆ ಅವರ ಮೇಲೆ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಯೋಗ್ಯತೆಯಿಲ್ಲ. ಸಂಸದರ ಮೇಲೆ ಎಫ್ ಐಆರ್ ದಾಖಲಿಸುವ ಮೂಲಕ ಸಿಎಂ ಸಿದ್ದರಾಮಯ್ಯ ಕೀಳುಮಟ್ಟಕ್ಕೆ ಇಳಿದಿದ್ದಾರೆ ಎಂದು ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications