ಗೆಳತಿ ನೀನೇ ನನ್ನ ಹೆಂಡತಿ ಎನ್ನುತ್ತಿರುವ ತುಮಕೂರಿನ ಯುವತಿ

ತುಮಕೂರು, ಮೇ 12: ನಗರದ ತಿಲಕ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯುವತಿಯರಿಬ್ಬರು ತಾವು ಪರಸ್ಪರ ಪ್ರೀತಿಸುತ್ತಿದ್ದು ಮದುವೆಯಾಗುವುದಾಗಿ ನಿರ್ಧರಿಸಿದ್ದೇವೆ ಇದಕ್ಕೆ ಅವಕಾಶ ಮಾಡಿಕೊಡಿ ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ. ತುಮಕೂರು ಮೂಲದ ಯುವತಿಯರ ಸಲಿಂಗ ಮದುವೆ ಎಲ್ಲರ ಗಮನ ಸೆಳೆದಿದೆ. ಮದುವೆ ಮಾಡಿಕೊಳ್ಳಲು ಮನೆ ಬಿಟ್ಟು ಹೊರಬಂದವರು ಈಗ ಪೊಲೀಸರ ನೆರವು ಕೋರಿದ್ದಾರೆ.

ಈ ಇಬ್ಬರು ಯುವತಿಯರು ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು ಇಬ್ಬರೂ ತುಮಕೂರಿನಲ್ಲೇ ವಾಸಿಸುತ್ತಿದ್ದರು. ಕೆಲದಿನಗಳ ಮಟ್ಟಿಗೆ ಕಾಣೆಯಾಗಿದ್ದ ಯುವತಿಯರು ಬಳಿಕ ತುಮಕೂರಿಗೆ ಆಗಮಿಸಿ ಮದುವೆಯಾಗುವುದಾಗಿ ತೀರ್ಮಾನಿಸಿ ಪೊಲೀಸರಲ್ಲಿ ಮನವಿ ಮಾಡಿಕೊಂಡರು. ಆದರೆ ಇದಕ್ಕೆ ಪೊಲೀಸರು ನಿರಾಕರಿಸಿದರು. ಆದರೆ ಮದುವೆ ಮಾಡಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆ ಯುವತಿಯರು ಬೆದರಿಕೆ ಹಾಕಿದರು. ಆದರೆ ಒಬ್ಬಾಕೆಯ ಪೋಷಕರು ಸಮ್ಮತಿಸಿದರೆ ಮತ್ತೊಬ್ಬಾಕೆಯ ಪೋಷಕರು ವಿರೋಧಿಸಿ ಯುವತಿಯನ್ನು ಕರೆದೊಯ್ದರು.

ಮನೆ ಬಿಟ್ಟಿದ್ದ ಯುವತಿಯರು: ಕಾಲೇಜಿನಲ್ಲಿದ್ದಾಗ ಗೆಳತನವಾಗಿತು. ನಂತರ ಪ್ರೀತಿ ಅಂಕುರಿಸಿ ಮದುವೆ ಮಾಡಿಕೊಳ್ಳುವ ನಿರ್ಧಾರಕ್ಕೂ ಬಂದಿದ್ದರು.

 Parents opposed to Lesbian marriage in Tilak nagar

Recommended Video

      Virat Kohli ಅವರ ವಿಶೇಷ ಸಂದರ್ಶನ ಮಾಡಿದ Danish Sait | Oneindia Kannada

      ಆದರೆ, ಇವರಿಬ್ಬರ ವಿಚಿತ್ರ ಪ್ರೀತಿಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರಿಂದ ಇವರ ಬಯಕೆ ಈಡೇರಿಲಿಲ್ಲ, ಹೀಗಾಗಿ ಅವರು ತುಮಕೂರು ಬಿಟ್ಟು ಹೋಗಿದ್ದರು. ನಂತರ ವಾಪಸ್ ಬಂದು ಪೊಲೀಸ್ ಠಾಣೆಗೆ ಬಂದು ನಮ್ಮಬ್ಬಿರ ಮದುವೆ ಮಾಡಿಸಿಕೊಡಿ ಎಂದು ಮೊರೆ ಹೋಗಿದ್ದು, ನಂತರ ಇದಕ್ಕೆ ಪೊಲೀಸರು ಅವಕಾಶ ನೀಡದಿರುವುದು ಕಂಡು ಬಂದಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+