ಕುಮಾರಸ್ವಾಮಿ, ದೇವೇಗೌಡರನ್ನು ಮನೆಯಿಂದ ಹೊರ ಹಾಕಿದ್ದರು: ಮಾಧುಸ್ವಾಮಿ
Recommended Video

ತುಮಕೂರು, ಏಪ್ರಿಲ್ 15: ಕುಮಾರಸ್ವಾಮಿ ಅವರು ತಮ್ಮ ತಂದೆ ದೇವೇಗೌಡರನ್ನು ಹಿಂದೊಮ್ಮೆ ಮನೆಯಿಂದ ಹೊರಹಾಕಿದ್ದರು ಎಂದು ಬಿಜೆಪಿ ಶಾಸಕ ಮಾಧುಸ್ವಾಮಿ ಅವರು ಭಾರಿ ಬಾಂಬ್ ಸಿಡಿಸಿದ್ದಾರೆ.
ನೇರ ಮಾತುಗಳಿಗೆ ಹೆಸರಾಗಿರುವ ಚಿಕ್ಕನಾಯಕನಳ್ಳಿ ಶಾಸಕ ಮಾಧುಸ್ವಾಮಿ ಅವರು ಬಿಜೆಪಿ ಪ್ರಚಾರ ಸಭೆಯಲ್ಲಿ ಈ ಮಾತು ಹೇಳಿದ್ದಾರೆ.
ದೇವೇಗೌಡರನ್ನು ಕುಮಾರಸ್ವಾಮಿ ಮನೆಯಿಂದ ಹೊರಗೆ ಹಾಕಿದ್ದಾಗ, ಅವರು ಒಂದು ಸಣ್ಣ ಮನೆಯಲ್ಲಿ ವಾಸ ಮಾಡುತ್ತಿದ್ದರು, ನಾವು ಆಗ ಟಿಫಿನ್ ಬಾಕ್ಸ್‌ನಲ್ಲಿ ಊಟ ತೆಗೆದುಕೊಂಡು ಹೋಗಿ ಕೊಡುತ್ತಿದ್ದೆವು ಎಂದು ಮಾಧುಸ್ವಾಮಿ ಹೇಳಿದ್ದಾರೆ.

ಹಳೆ ವಿದ್ಯಾರ್ಥಿ ಭವನ್ ಎದುರು ಒಮ್ಮೆ ದೇವೇಗೌಡ ಅವರು ಭಾಷಣ ಮಾಡುತ್ತಿದ್ದಾಗ ಅವರ ಮೇಲೆ ಕಲ್ಲೆಸೆದರು, ಆಗ ನಾನು ಅವರ ಎದುರಿಗೆ ನಿಂತು ಕಲ್ಲು ಬೀಳದಂತೆ ತಡೆದಿದ್ದೆ, ಆ ನಂತರ ನನ್ನನ್ನು ತಬ್ಬಿಕೊಂಡು ಅತ್ತಿದ್ದ ದೇವೇಗೌಡರು, ನನ್ನ ಮಕ್ಕಳು ಇದ್ದಿದ್ದರೆ ನನಗಾಗಿ ಕಲ್ಲೇಟು ತಿನ್ನುತ್ತಿರಲಿಲ್ಲ ಎಂದಿದ್ದರು ಎಂದು ಮಾಧುಸ್ವಾಮಿ ಹಳೆಯ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ.
ವಿಎಸ್.ಉಗ್ರಪ್ಪ ದೇವೇಗೌಡರ ಬೆನ್ನು ತಿಕ್ಕುತ್ತಿದ್ದರು, ಬಿ.ಎಲ್.ಶಂಕರ್ ದೇವೇಗೌಡ ಅವರ ಮಾನಸ ಪುತ್ರರಂತಿದ್ದರು, ಆದರೆ ಅವರೇಕೆ ಪಕ್ಷ ಬಿಟ್ಟರು ಎಂದು ಮಾಧುಸ್ವಾಮಿ ಇದೇ ಸಮಯದಲ್ಲಿ ಪ್ರಶ್ನಿಸಿದ್ದಾರೆ.

ವಿ.ಎಸ್.ಉಗ್ರಪ್ಪ, ಬಿ.ಎಲ್.ಶಂಕರ್ ಬಗ್ಗೆ ಮಾತು
ವಿಎಸ್.ಉಗ್ರಪ್ಪ ದೇವೇಗೌಡರ ಬೆನ್ನು ತಿಕ್ಕುತ್ತಿದ್ದರು, ಬಿ.ಎಲ್.ಶಂಕರ್ ದೇವೇಗೌಡ ಅವರ ಮಾನಸ ಪುತ್ರರಂತಿದ್ದರು, ಆದರೆ ಅವರೇಕೆ ಪಕ್ಷ ಬಿಟ್ಟರು ಎಂದು ಮಾಧುಸ್ವಾಮಿ ಇದೇ ಸಮಯದಲ್ಲಿ ಪ್ರಶ್ನಿಸಿದ್ದಾರೆ.

ಅಲ್ಲೋಲಕಲ್ಲೋಲ ಸೃಷ್ಠಿಸಿರುವ ಮಾಧುಸ್ವಾಮಿ ಹೇಳಿಕೆ
ಮಾಧುಸ್ವಾಮಿ ಅವರ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಅಲ್ಲೋಲಕಲ್ಲೋಲ ಸೃಷ್ಠಿಸಿದೆ, ಸುದ್ದಿ ಮಾಧ್ಯಮಗಳಲ್ಲಿ ಮಾಧುಸ್ವಾಮಿ ಅವರ ಹೇಳಿಕೆ ಸತತವಾಗಿ ಪ್ರಸಾರವಾಗುತ್ತಿದೆ. ಮಾಧುಸ್ವಾಮಿ ಅವರು ಕೆಲವು ದಿನಗಳ ಹಿಂದೆ ಕುಮಾರಸ್ವಾಮಿ ಅವರ ಖಾಸಗಿ ವಿಚಾರದ ಬಗ್ಗೆಯೂ ಸಭೆಯೊಂದರಲ್ಲಿ ಮಾತನಾಡಿದ್ದರು ಇದು ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಮಾಧುಸ್ವಾಮಿ ಸಹ ಜನತಾದಳದಲ್ಲಿದ್ದವರು
ಮಾಧುಸ್ವಾಮಿ ಅವರು ಜನತಾ ದಳ ಪಕ್ಷದಲ್ಲಿದ್ದವರು, ಆ ನಂತರ ಬಿಜೆಪಿ ಸೇರ್ಪಡೆಗೊಂಡು ಶಾಸಕರಾಗಿದ್ದಾರೆ. ಈ ಹಿಂದೆ ಅವರು ಸಚಿವರೂ ಆಗಿದ್ದರು, ಮಾಧುಸ್ವಾಮಿ ಅವರು ಸದನದಲ್ಲಿಯೂ ತಮ್ಮ ನೇರ ಮತ್ತು ಹರಿತವಾದ ಮಾತುಗಳಿಂದಾಗಿ ಬಹು ಖ್ಯಾತರು.

ತುಮಕೂರಿನಲ್ಲಿ ದೇವೇಗೌಡ ಮಣಿಸಲು ತಂತ್ರ
ತುಮಕೂರಿನಿಂದ ದೇವೇಗೌಡ ಅವರು ಚುನಾವಣೆಗೆ ಸ್ಪರ್ಧಿಸಿದ್ದು, ಮಾಧುಸ್ವಾಮಿ ಅವರು ದೇವೇಗೌಡ ಅವರ ವಿರುದ್ಧವಾಗಿ ಪ್ರಚಾರ ಮಾಡುತ್ತಿದ್ದಾರೆ. ತುಮಕೂರಿನಲ್ಲಿ ಜಿ.ಎಸ್.ಬಸವರಾಜು ಅವರು ಬಿಜೆಪಿ ಪಕ್ಷದಿಂದ ಕಣಕ್ಕೆ ಇಳಿದಿದ್ದಾರೆ.












Click it and Unblock the Notifications