ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆದ ನೂತನ ಮುಖ್ಯಮಂತ್ರಿ ಬಿಎಸ್‌ವೈ

ತುಮಕೂರು, ಮೇ 17: ನೂತನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತುಮಕೂರಿನ ಸಿದ್ದಗಂಗಾ ಮಠದ ಶ್ರೀಗಳನ್ನು ಭೇಟಿ ನೀಡಿ ಆಶೀರ್ವಾದ ಪಡೆದರು.

ಸಿದ್ದಗಂಗಾ ಮಠದ ಶೀವಕುಮಾರಸ್ವಾಮಿಗಳನ್ನು ಭೇಟಿ ಮಾಡಿದ ಯಡಿಯೂರಪ್ಪ ಅವರು ಶ್ರಿಗಳ ಕಾಲಿಗೆರಗಿ ಆಶೀರ್ವಾದ ಪಡೆದರು. ಯಡಿಯೂರಪ್ಪ ಅವರಿಗೆ ಹಾರ ಹಾಕಿದ ಶ್ರೀಗಳು ಆಶೀರ್ವಾದ ಮಾಡಿದರು.

ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಯಡಿಯೂರಪ್ಪ ಅವರು ಭೇಟಿ ನೀಡುತ್ತಿರುವ ಮೊದಲ ಮಠ ಸಿದ್ದಗಂಗಾ ಮಠವಾಗಿದೆ. ಚುನಾವಣಾ ಪ್ರಚಾರದ ವೇಳೆಯೂ ಅವರು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದರು.

ಚಿತ್ರಗಳು : ಸರ್ಕಾರ ರಚಿಸಿ, ಮುಖ್ಯಮಂತ್ರಿಯಾದ ಯಡಿಯೂರಪ್ಪ

New CM BS Yeddyurappa meet Siddaganga Shri

ಇಂದು ಯಡಿಯೂರಪ್ಪ ಅವರ ಭೇಟಿ ಸಂದರ್ಭ ಭಾರಿ ಸಂಖ್ಯೆಯಲ್ಲಿ ಜನರು ನೆರೆದಿದ್ದು, ಮುಖ್ಯಮಂತ್ರಿಗಳ ಪರ ಘೋಷಣೆಗಳನ್ನು ಕೂಗಿದರು.

ಶ್ರೀಗಳ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ ಅವರು, ಸಾಲಮನ್ನಾ ಬಗ್ಗೆ 12 ದಿನಗಳ ಒಳಗಾಗಿ ಅಧಿವೇಶನ ಕರೆದು ಚರ್ಚೆ ನಡೆಸಿ ಮನ್ನಾ ಮಾಡುತ್ತೇನೆ ಎಂದಿದ್ದಾರೆ.

ಈ ಸಮಯ ಯಡಿಯೂರಪ್ಪ ಅವರ ಜೊತೆಗೆ ಮಾಜಿ ಸಂಸದ ಜಿ.ಎಸ್.ಬಸವರಾಜು, ಶಾಸಕ ಬಿ.ಜಿ. ಜ್ಯೋತಿ ಗಣೇಶ್ ಸೇರಿ ಹಲವು ಮುಖಂಡರು ಇದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+