ತುಮಕೂರು: ಮನೆಗೆ ನುಗ್ಗಿದ ಚಿರತೆ: ಶೌಚಾಲಯದಲ್ಲಿ ರಕ್ಷಣೆ ಪಡೆದ ಮಹಿಳೆಯರು
ತುಮಕೂರು, ಜನವರಿ20 : ಏಕಾಏಕಿ ಮನೆಯೊಳಗೆ ಚಿರತೆ ನುಗ್ಗಿರುವ ಕಾರಣ ಮನೆಯ ಇಬ್ಬರು ಸದಸ್ಯರು ಮನೆಯ ಶೌಚಾಲಯದಲ್ಲಿ ಸಿಲುಕಿರುವ ಘಟನೆ ತುಮಕೂರು ಜಿಲ್ಲೆಯ ಜಯನಗರದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.
ಶನಿವಾರ ಬೆಳಗ್ಗೆ ನಗರದ ಜಯನಗರ ಪೂರ್ವ 1ನೇ ಕ್ರಾಸ್ ನಲ್ಲಿರುವ ರಂಗನಾಥ್ ಎಂಬುವರ ಮನೆಗೆ ಚಿರತೆ ನುಗ್ಗಿದೆ. ಚಿರತೆ ಮನೆಯೊಳಕ್ಕೆ ನುಗ್ಗುತ್ತಿದ್ದಂತೆ ಕುಟುಂಬದ ಸದಸ್ಯರು ಭಯಗೊಂಡು, ದಿಕ್ಕುಪಾಲಾಗಿ ಓಡಿ ಹೋಗಿ ಶೌಚಾಲಯದಲ್ಲಿ ರಕ್ಷಣೆ ಪಡೆದರು.

ಏಕಾಏಕಿ ಚಿರತೆಯೊಂದು ಜಯನಗರದ ಪೊಲೀಸ್ ಠಾಣೆ ಪಕ್ಕದಲ್ಲಿರುವ ಮನೆಯೊಳಗೆ ನುಗ್ಗಿದೆ. ವಿನುತಾ, ವನಜಾಕ್ಷಿ ಎಂಬುವರು ಚಿರತೆಯನ್ನು ನೋಡಿ ಗಾಬರಿಯಿಂದ ಶೌಚಾಲಯಕ್ಕೆ ತೆರಳಿ ಬಾಗಿಲು ಹಾಕಿಕೊಂಡಿದ್ದಾರೆ. ಚಿರತೆ ಹಿಡಿಯಲು ಅರಣ್ಯ ಸಿಬ್ಬಂದಿ ಹಾಗೂ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಸ್ಥಳದಲ್ಲಿ ನೂರಾರು ಮಂದಿ ಜಮಾಯಿಸಿದ್ದಾರೆ.












Click it and Unblock the Notifications