ಸಿದ್ದಗಂಗಾ ಶ್ರೀಗಳ ತಪಾಸಣೆಗೆ ಜಯದೇವ ವೈದ್ಯರ ತಂಡ ಆಗಮನ ಸಾಧ್ಯತೆ
ತುಮಕೂರು, ಜನವರಿ 11: ಸಿದ್ದಗಂಗಾ ಮಠದ ಶಿವಕುಮಾರಸ್ವಾಮೀಜಿ ತಪಾಸಣೆಗೆಂದು ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ ವೈದ್ಯರ ತಂಡ ಇಂದು ಭೇಟಿ ನೀಡುವ ಸಾಧ್ಯತೆ ಇದೆ.
ಸಿದ್ದಗಂಗಾ ಆಸ್ಪತ್ರೆಯಲ್ಲಿ ಶ್ರೀಗಳಿಗೆ ಚಿಕಿತ್ಸೆ ಮುಂದುವರೆದಿದೆ, ಚೇತರಿಸಿಕೊಳ್ಳುತ್ತಿದ್ದಾರೆ, ಆದರೆ ಅವರ ಹೆಚ್ಚಿನ ಚಿಕಿತ್ಸೆಗಾಗಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ವೈದ್ಯರ ತಂಡವೊಂದನ್ನು ರಚಿಸಿದ್ದಾರೆ. ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಅವರ ತಂಡ ಶುಕ್ರವಾರ ಸಿದ್ದಗಂಗಾ ಆಸ್ಪತ್ರೆಗೆ ಭೇಟಿ ನೀಡಲಿದ್ದು, ಶ್ರೀಗಳ ತಪಾಸಣೆ ನಡೆಸಲಿದ್ದಾರೆ.

ಬಳಿಕ ಹೆಚ್ಚಿನ ಚಿಕಿತ್ಸೆಯನ್ನು ಅದೇ ಆಸ್ಪತ್ರೆಯಲ್ಲೇ ನೀಡುವುದೋ ಅಥವಾ ಬೆಂಗಳೂರಿಗೆ ಕರೆ ತರಬೇಕೋ ಎನ್ನುವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. 111 ವರ್ಷದ ಶ್ರೀಗಳಿಗೆ 11 ಬಾರಿ ಹೃದಯ ಸ್ಟಂಟ್ ಅಳವಡಿಸಲಾಗಿದೆ.











Click it and Unblock the Notifications