ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಳಿಯಾರು ಶಾಲೆ ವಿದ್ಯಾರ್ಥಿಗಳಿಗೆ ವಿಷ ಹಾಕಿದ್ದು ಮಾಜಿ ಪ್ರಿನ್ಸಿಪಾಲ್?

ಶಾಲೆಯಲ್ಲಿ ಈ ಹಿಂದೆ ಪ್ರಾಂಶುಪಾಲರಾಗಿ ಕೆಲಸ ಮಾಡುತ್ತಿದ್ದ, ರವಿಕುಮಾರ್ ಎಂಬಾತನ ಮೇಲೆ ಗುಮಾನಿ.

|
Google Oneindia Kannada News

ತುಮಕೂರು, ಮಾರ್ಚ್ 8: ಜಿಲ್ಲೆಯ ಚಿಕ್ಕನಾಯಕನ ಹಳ್ಳಿಯ ವಿದ್ಯಾವಾರಿಧಿ ಶಾಲೆಯಲ್ಲಿ ಕಲುಷಿತ ಆಹಾರ ಸೇವನೆ ಮಾಡಿ ಸಾವಿಗೀಡಾದ ಮಕ್ಕಳ ಪ್ರಕರಣಕ್ಕೆ ಈಗ ಹೊಸ ಟ್ವಿಸ್ಟ್ ಬಂದಿದೆ.

ಶಾಲೆಯಲ್ಲಿ ಈ ಹಿಂದೆ ಪ್ರಾಂಶುಪಾಲರಾಗಿ ಕೆಲಸ ಮಾಡುತ್ತಿದ್ದ, ಆನಂತರ ಕಾರಣಾಂತರಗಳಿಂದ ಶಾಲೆಯ ಆಡಳಿತ ಮಂಡಳಿಯಿಂದ ಸೇವೆಯಿಂದ ವಜಾಗೊಂಡಿದ್ದ ಪ್ರಾಂಶುಪಾಲ ರವಿಕುಮಾರ್ ಎಂಬಾತನೇ ಮಕ್ಕಳ ಊಟದಲ್ಲಿ ವಿಷ ಬೆರೆಸಿರಬಹುದಾದ ಸಾಧ್ಯತೆಗಳಿವೆ ಎಂಬ ಅನುಮಾನ ವ್ಯಕ್ತವಾಗಿದೆಯೆಂದು ವಾಹನಿಯೊಂದು ವರದಿ ಮಾಡಿದೆ.[ವಿದ್ಯಾರ್ಥಿಗಳ ಸಾವು: ಮಾಜಿ ಶಾಸಕ ಕಿರಣ್ ಕುಮಾರ್ ಅರೆಸ್ಟ್]

Is the Ex-Principal who contaminated the student's food? Twist in Huliyur school tragedy

ರವಿಕುಮಾರ್ ಅವರನ್ನು ಕೆಲಸದಿಂದ ತೆಗೆದುಕಾಕಲಾಗಿದ್ದರೂ, ಆತ ಆಗಾಗ ಶಾಲೆಗೆ ಬಂದು ಸಿಬ್ಬಂದಿ, ಮಕ್ಕಳನ್ನು ಮಾತಾಡಿಸಿಕೊಂಡು ಹೋಗುತ್ತಿದ್ದ ಎನ್ನಲಾಗಿದೆ. ಹಾಗಾಗಿ, ಕಾಲೇಜಿನ ಆಡಳಿತ ಮಂಡಳಿ ಮೇಲಿದ್ದ ದ್ವೇಷವನ್ನು ಆತ ಈ ರೀತಿಯಾಗಿ ತೀರಿಸಿಕೊಂಡಿರಬಹುದೇ ಎಂದೂ ಶಂಕಿಸಲಾಗಿದೆ ಎಂದು ಹೇಳಲಾಗಿದೆ.[ಬ್ರೇಕಿಂಗ್ ನ್ಯೂಸ್: ಹುಳಿಯಾರ್ ಶಾಲೆಯಲ್ಲಿ 3 ವಿದ್ಯಾರ್ಥಿಗಳ ಅನುಮಾನಾಸ್ಪದ ಸಾವು]

ಏತನ್ಮಧ್ಯೆ, ಮೃತಪಟ್ಟ ಮೂವರು ವಿದ್ಯಾರ್ಥಿಗಳಲ್ಲಿ ಇಬ್ಬರು ಸಚಿವ ಟಿ.ಬಿ. ಜಯಚಂದ್ರ ಅವರ ಸಂಬಂಧಿಗಳೆಂದು ತಿಳಿದುಬಂದಿದೆ.

English summary
In a twist to students death in Huliyur of Tumkur district case, it is suspected that the ex-Principal of Vidhyavaridhi School is sole responsible for the contamination of food who took lives of tree students on Wednesday night, sources said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X