ಅಕ್ರಮವಾಗಿ ಹೊರ ರಾಜ್ಯಕ್ಕೆ ರಸಗೊಬ್ಬರ ಸಾಗಾಟ: ಓರ್ವ ಅರೆಸ್ಟ್‌, 16.75 ಲಕ್ಷ ಮೌಲ್ಯದ ಗೊಬ್ಬರ ವಶ

ತುಮಕೂರು, ಫೆಬ್ರವರಿ 09: ಅಕ್ರಮವಾಗಿ ಹೊರ ರಾಜ್ಯ ಕೇರಳಕ್ಕೆ ಬೇವು ಲೇಪಿತ ಯೂರಿಯಾ ರಸಗೊಬ್ಬರ ಸಾಗಿಸುತ್ತಿದ್ದ ಲಾರಿ ಮೇಲೆ ಪೊಲೀಸರು ದಾಳಿ ನಡೆಸಿ 16.75 ಲಕ್ಷ ರೂ ಮೌಲ್ಯ, 605 ಚೀಲ ರಸಗೊಬ್ಬರ ವಶಕ್ಕೆ ಪಡೆದು ಲಾರಿ ಚಾಲಕನನ್ನು ಬಂಧಿಸಿರುವ ಘಟನೆ ಹುಲಿಯೂರು ದುರ್ಗದಲ್ಲಿ ನಡೆದಿದೆ.

ಕೇರಳ ರಾಜ್ಯ, ಪಾಲಕ್ಕಾಡ್ ಜಿಲ್ಲೆ, ಚಿತ್ತೂರು ತಾಲೂಕು ಮುದಲಮಡ ಗ್ರಾಮದ ಲಾರಿ ಚಾಲಕ ಪೈಜಲ್ (40) ಬಂಧಿತ ಆರೋಪಿ. ಹುಲಿಯೂರು ದುರ್ಗ ಪಿಎಸ್‌ಐ ಜಯಕುಮಾರ್ ಅವರು ಹುಲಿಯೂರುದುರ್ಗ ಟೌನ್‌ನಲ್ಲಿ ಗಸ್ತು ತಿರುಗುತ್ತಿದ್ದ ವೇಳೆ, ಈ ಮಾರ್ಗದಲ್ಲಿ ಬಂದ ಲಾರಿ ಮೇಲೆ ಅನುಮಾನ ಬಂದು ಚಾಲಕನನ್ನು ವಿಚಾರಿಸಿದ್ದಾರೆ.

Illegal Shipment Of Fertilizer To Out Of State

ಹುಲಿಯೂರುದುರ್ಗ ಮಾರುತಿ ಎಂಟರ್ ಪ್ರೈಸಸ್ಸ್ ಅವರ ಮಳಿಗೆಯಿಂದ ಯೂರಿಯ ರಸಗೊಬ್ಬರ ತುಂಬಿಕೊಂಡು ಬೆಳಗಾವಿ ಜಿಲ್ಲೆಯ ಇನ್ ವಾಯ್ಸ್ ಮೂಲಕ ಕೇರಳ ರಾಜ್ಯಕ್ಕೆ ಸಾಗಿಸುತ್ತಿರುವುದ್ದಾಗಿ ಚಾಲಕ ತಿಳಿಸಿದ್ದಾನೆ. ಇದಕ್ಕೆ ಸಂಬಂಧಪಟ್ಟಂತೆ ದಾಖಲೆ ನೀಡುವಂತೆ ಪೊಲೀಸರು ಕೇಳಿದ್ದಾರೆ. ಬಳಿಕ ಮಾರುತಿ ಎಂಟರ್ ಪ್ರೈಸಸ್ಸ್ ಅವರು ಸಲ್ಲಿಸಿದ ಬಿಲ್‌ಗಳನ್ನು ಪರಿಶೀಲನೆಗಾಗಿ ಕೃಷಿ ಇಲಾಖೆಯ ಜಾರಿ ದಳದ ಸಹಾಯಕ ಕೃಷಿ ನಿರ್ದೇಶಕ ಪುಟ್ಟರಂಗಪ್ಪ ಅವರಿಗೆ ತಿಳಿಸಿದ್ದಾರೆ.

ಇದು ಅಕ್ರಮ ಸಾಗಾಣಿಕೆ ಮತ್ತು ಬೇರೆ ರಾಜ್ಯಕ್ಕೆ ಸಾಗಾಣಿಕೆ ನಿಷೇಧವಿರುವ ಬಗ್ಗೆ ಪೊಲೀಸರಿಗೆ ಕೃಷಿ ನಿರ್ದೇಶಕ ತಿಳಿಸಿದ್ದಾರೆ. ಲಾರಿ ಬಿಲ್ ಮತ್ತು ರಸಗೊಬ್ಬರ ಪರಿಶೀಲಿಸಲಾಗಿ ಕೃಷಿ ಬಳಕೆಗೆ ಮೀಸಲಾದ ಯೂರಿಯ ರಸ ಗೊಬ್ಬರವನ್ನು ಬೇರೆ ರಾಜ್ಯಕ್ಕೆ ಕೈಗಾರಿಕೆ ಉದ್ದೇಶಕ್ಕೆ ಬಳಸುವ ಉದ್ದೇಶ ಮತ್ತು ಸರ್ಕಾರಕ್ಕೆ 16.75 ರೂಪಾಯಿ ಲಕ್ಷ ಮೋಸ ಮಾಡಿರುವ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ ಮೇರೆಗೆ, ಹುಲಿಯೂರುದುರ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಕೈಗೊಂಡಿದ್ದಾರೆ.

Illegal Shipment Of Fertilizer To Out Of State

ಸದ್ಯ ರಸಗೊಬ್ಬರ ಮಾದರಿಯನ್ನು ವಿಶ್ಲೇಷಣೆಗೆ ಕಳುಹಿಸಿಕೊಡಲಾಗಿದೆ. ವರದಿ ಬಂದ ನಂತರ ಮುಂದಿನ ಕಾನೂನು ಕ್ರಮಕೈಗೊಳ್ಳಲಾಗಿವುದು ಎಂದು ಸಹಾಯಕ ಕೃಷಿ ನಿರ್ದೇಶಕರು ಪುಟ್ಟರಂಗಪ್ಪ ತಿಳಿಸಿದ್ದಾರೆ. ದಾಳಿಯಲ್ಲಿ ಹುಲಿಯೂರುದುರ್ಗ ಕೃಷಿ ಅಧಿಕಾರಿ ಬಸವರಾಜಕುಮಾರ್ ಕೂಡ ಭಾಗಿಯಾಗಿದ್ದರು.

ಆನೇಕಲ್‌ನಲ್ಲಿ ಮುಂದುವರಿದ ಸರಗಳ್ಳತನ

ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನಲ್ಲಿ ಸರಗಳ್ಳತನ ಮುಂದುವರೆದಿದ್ದು, ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಚನಾಯಕನಹಳ್ಳಿ ಬಳಿ ನಿನ್ನೆ ರಾತ್ರಿ ಸರಗಳ್ಳರು ಮತ್ತೊಂದು ಮಾಂಗಲ್ಯ ಸರವನ್ನು ಕಳ್ಳತನ ಮಾಡಿದ್ದಾರೆ. ಮಾನಸ ಎನ್ನುವವರಿಗೆ ಸೇರಿದ ಸುಮಾರು 3 ಲಕ್ಷ ಮೌಲ್ಯದ 50 ಗ್ರಾಂ ಚಿನ್ನದ ಸರ ಇದಾಗಿದ್ದು, ಬೈಕ್​ನಲ್ಲಿ ಬಂದಿದ್ದ ಇಬ್ಬರು ಅಸಾಮಿಗಳು ಈ ಕೃತ್ಯ ಎಸಗಿದ್ದಾರೆ.

ನಿನ್ನೆ ರಾತ್ರಿ 9:30ರ ಸುಮಾರಿಗೆ ಮಾನಸ ಅವರ ಅಂಗಡಿಯಲ್ಲಿ ಪೆನ್ ಖರೀದಿಸುವ ನೆಪದಲ್ಲಿ ಹೆಲ್ಮೆಟ್ ಮತ್ತು ಮಾಸ್ಕ್ ಧರಿಸಿ ಬಂದಿದ್ದ ಖದೀಮರು, ಕ್ಷಣಾರ್ಧದಲ್ಲಿ ಮಾಂಗಲ್ಯ ಸರ ಕದ್ದು ಪರಾರಿಯಾಗಿದ್ದಾರೆ. ಖದೀಮರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸೂರ್ಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+