ತುಮಕೂರಿನ ಈ ಹೋಟೆಲ್‌ನಲ್ಲಿ ಚಿನ್ನದ ದೋಸೆ ಲಭ್ಯ: ತಿನ್ನುವ ಮುನ್ನ ಬೆಲೆ ತಿಳಿಯಿರಿ

ತುಮಕೂರು, ನವೆಂಬರ್ 2: ಮಸಾಲೆ ದೋಸೆ, ಖಾಲಿ ದೋಸೆ, ರವೆ ದೋಸೆ ಹೀಗೆ ಹಲವಾರು ದೋಸೆಗಳನ್ನು ಕೇಳಿದ್ದೇವೆ, ತಿಂದಿದ್ದೇವೆ. ಇವುಗಳ ಬೆಲೆ ಸರಾಸರಿ 60ರಿಂದ 150ರವರೆಗೆ ಇರಬಹುದು. ಆದರೆ ತುಮಕೂರಿನ ಹೋಟೆಲ್ ಒಂದರಲ್ಲಿ ಬರೋಬ್ಬರಿ 1000 ರೂ.ಗಳಿಗೆ ದೋಸೆ ಮಾರಾಟ ಮಾಡಲಾಗುತ್ತಿದೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರ ಗಮನ ಸೆಳೆಯುತ್ತಿದೆ.

ಹೌದು, ತುಮಕೂರಿನ ಉಡುಪಿ ಶ್ರೀಕೃಷ್ಣ ಭೋಜನಲಾಯದಲ್ಲಿ ಬರೋಬ್ಬರಿ 1000 ರೂಪಾಯಿಗೆ ದೋಸೆಯನ್ನು ಮಾರಾಟ ಮಾಡುತ್ತಿದ್ದಾರೆ. ಈ ದೋಸೆಗೆ ಚಿನ್ನದ ಲೇಪನ ಮಾಡಲಾಗಿರುವುದರಿಂದ ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.

ಗೋಲ್ಡ್ ಪ್ಲೇಟೆಡ್ ದೋಸೆ

ಗೋಲ್ಡ್‌ ಪ್ಲೇಟೆಡ್‌ ಆಭರಣಗಳನ್ನು ಬಗ್ಗೆ ನಾವು ಕೇಳಿದ್ದೇವೆ. ಆದರೆ ಗೋಲ್ಡ್‌ ಪ್ಲೇಟೆಡ್‌ ದೋಸೆ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿರುವುದಿಲ್ಲ. ಸದ್ಯಕ್ಕೆ ಈ ದೋಸೆ ತುಮಕೂರಿನಲ್ಲಿ ಉಡುಪಿ ಭೋಜನಾಲಯದಲ್ಲಿ ಲಭ್ಯವಾಗುತ್ತಿದೆ.

Golden Coated Masala Dosa at Rs 1000 available in Tumkur Hotel, Video Goes Viral

ಹಿಂದೆ ಬೆಂಗಳೂರಿನಲ್ಲೂ ಪ್ರಯತ್ನ

ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಚಂದನ್‌ ಲೋಕೇಶ್‌ ಎಂಬುವವರು ತಮ್ಮ ರೆಸ್ಟೋರೆಂಟ್‌ನಲ್ಲಿ ಈ ಹಿಂದೆಯೇ ಗೋಲ್ಡ್‌ ಪ್ಲೇಟೆಡ್‌ ದೋಸೆಯನ್ನು ಮಾರಾಟ ಮಾಡಲಾಗಿತ್ತು. ಈ ದೋಸೆಗೆ 1011ರೂ ನಿಗದಿ ಪಡಿಸಲಾಗಿತ್ತು. ಇದೇ ರೆಸ್ಟೋರೆಂಟ್‌ನಲ್ಲಿ ಸಿಲ್ವರ್‌ ಪ್ಲೇಟೆಡ್‌ ದೋಸೆಯನ್ನು ತಯಾರಿಸಿ 151ರೂಗಳಿಗೆ ಮಾರಾಟ ಮಾಡಲಾಗಿತ್ತು.

ಆಹಾರ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯಲು ಮಾಲೀಕರು ಇಂತಹ ಮಾರುಕಟ್ಟೆ ತಂತ್ರಗಾರಿಕೆಯನ್ನು ಉಪಯೋಗಿಸುತ್ತಾರೆ. ದೋಸೆಯಲ್ಲದೆ, ಐಸ್‌ಕ್ರೀಮ್‌ಗಳನ್ನು ಕೂಡ ಚಿನ್ನಲೇಪಿತ ಮಾಡಿ ಮಾರಾಟ ಮಾಡಿದ ಉದಾಹರಣಗಳಿವೆ. ಇದೀಗ ತುಮಕೂರಿನ ಉಡುಪಿ ಭೋಜನಾಲಯ ಆ ಗುಂಪಿಗೆ ಸೇರಿಕೊಂಡಿದೆ.

ಎಡಿಬಲ್ ಗೋಲ್ಡ್‌ ಸೇವನೆ ಆರೋಗ್ಯಕ್ಕೆ ಒಳ್ಳೆಯದೇ?; ತಿನ್ನಬಹುದಾದ ಎಡಿಬಲ್ ಗೋಲ್ಡ್‌ ಲೀಫ್‌ ಶೀಟ್‌ಗಳನ್ನು 24 ಕ್ಯಾರೇಟ್‌ ಗೋಲ್ಡ್‌ ಚಿನ್ನದಿಂದ ತಯಾರಿಸಲಾಗುತ್ತದೆ. ಯುರೋಪಿಯನ್ ಯೂನಿಯನ್ ಮತ್ತು ಯುನೈಟೆಡ್ ಸ್ಟೇಟ್ಸ್‌ನಿಂದ ಅಧಿಕೃತವಾದ ಒಂದು ನಿರ್ದಿಷ್ಟ ರೀತಿಯ ಚಿನ್ನವು ತಿನ್ನಬಹುದು ಎಂದು ಧೃಡೀಕರಿಸಲಾಗಿದೆ. ಇದರಿಂದ ಅದನ್ನು ತಿನ್ನುವುದರಿಂದ ಯಾವುದೇ ಋಣಾತ್ಮಕ ಪರಿಣಾಮಗಳಾಗಲೀ ಅಥವಾ ಪ್ರಯೋಜನವಾಗಲಿ ಇಲ್ಲ. ಅದರೆ ಎಡಿಬಲ್ ಚಿನ್ನ ಇತರೆ ಲೋಹಗಳಿಗಿಂತ ಭಿನ್ನವಾಗಿದ್ದು ತೇವಾಂಶವುಳ್ಳ ಗಾಳಿಯಲ್ಲಿ ತುಕ್ಕು ಹಿಡಿಯುವುದಿಲ್ಲ. ಆದ್ದರಿಂದ ಇದು ಆಹಾರದಲ್ಲಿ ಬಳಸಲಾಗುತ್ತದೆ. ಹಾಗಾಗಿ ಕೇಕ್ , ಸ್ವೀಟ್‌ಗಳ ಮೇಲೆ ಇದನ್ನು ಲೇಪಿಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+