ನನ್ನ ಗೆಲುವಿಗೆ ದೇವೇಗೌಡ್ರು ವರವಾದ್ರು: ಬಸವರಾಜ್
ತುಮಕೂರು, ಮೇ 25: ನನ್ನ ಗೆಲುವಿಗೆ ದೇವೇಗೌಡರು ವರವಾದ್ರು. ಮುದ್ದಹನುಮೇಗೌಡರು ಇದ್ದಿದ್ದರೆ ಗೆಲುವು ಕಷ್ಟ ಆಗುತ್ತಿತ್ತು. ದೇವೇಗೌಡರು ಬಂದದ್ದರಿಂದ ಗೆಲುವು ಇನ್ನೂ ಸುಲಭವಾಯ್ತು. ಜಯಕ್ಕೆ ದಾರಿ ಸಲೀಸಾಯಿತು. ಜನ ದೇವೇಗೌಡರನ್ನು ತಿರಸ್ಕರಿಸಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ ಬಿಜೆಪಿ ವಿಜೇತ ಅಭ್ಯರ್ಥಿ ಜಿ.ಎಸ್.ಬಸವರಾಜ್
ಶಾಸಕ ಕೆ.ಎನ್.ರಾಜಣ್ಣ ಅವರ ಬೆಂಬಲದ ಕುರಿತೂ ಮಾತನಾಡಿದ ಅವರು, ರಾಜಣ್ಣ ನನ್ನ ಸ್ನೇಹಿತರು. ಆದರೆ ರಾಜಣ್ಣ ಅವರು ಪಕ್ಷ ಬಿಟ್ಟು ನನಗೆ ಸಹಾಯ ಮಾಡಿದ್ದಾರೆ ಅನ್ನೋಕಾಗಲ್ಲ. ಎಲ್ಲಾ ಪಕ್ಷದವರು ಮತ ಹಾಕಿದಕ್ಕೆ ನಾನು ಗೆದ್ದಿದ್ದೇನೆ ಎಂದರು.

ಗೌಡರ ಕುಟುಂಬದಲ್ಲಿ ನಡೆಯುತ್ತಿರುವ ರಾಜೀನಾಮೆ ವಿಷಯವಾಗಿ ಪ್ರಸ್ತಾಪಿಸಿದ ಅವರು, ಗೌಡರ ಕುಟುಂಬ ಯಾವತ್ತಾದರೂ ಸತ್ಯ ಹೇಳಿದ್ದು ಇದ್ಯಾ? ದೇವೇಗೌಡರು ಮೋದಿ ಪ್ರಧಾನಿ ಆದರೆ ದೇಶ ಬಿಡ್ತೀನಿ ಅಂದಿದ್ರು, ಆದರೆ ಅವರು ದೇಶ ಬಿಟ್ರಾ? ಮುಸ್ಲಿಂ ಆಗಿ ಹುಟ್ತೀನಿ ಅಂದಿದ್ದಾರೆ, ಈ ಜನ್ಮದಲ್ಲೇ ಮುಸ್ಲಿಂ ಆಗಲಿ ಎಂದು ವ್ಯಂಗ್ಯವಾಡಿದರು. ಪ್ರಜ್ವಲ್ ರೇವಣ್ಣ ಕೂಡ ರಾಜೀನಾಮೆ ನಾಟಕ ಆಡುತಿದ್ದಾರೆ. ಜನರಿಂದ ಕರುಣೆ ಗಿಟ್ಟಿಸಿಕೊಳ್ಳಲು ಹೀಗೆ ಮಾಡುತಿದ್ದಾರೆ. ಮೊಮ್ಮಗ ರಾಜೀನಾಮೆ ಕೊಡೋದೂ ಇಲ್ಲ, ತಾತ ಕೊಡ್ಸೋದೂ ಇಲ್ಲ ಎಂದು ಟೀಕಿಸಿದರು ಬಸವರಾಜ್.












Click it and Unblock the Notifications