• search
  • Live TV
ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರೈತರ ಪ್ರತಿಭಟನೆ ಕುರಿತು ಟ್ವೀಟ್: ಕಂಗನಾ ರಣಾವತ್ ವಿರುದ್ಧ FIR ದಾಖಲಿಸಲು ಕೋರ್ಟ್ ಆದೇಶ

|

ತುಮಕೂರು, ಅಕ್ಟೋಬರ್ 9: ಕೃಷಿ ಮಸೂದೆಯನ್ನು ವಿರೋಧಿಸಿ ರೈತರು ಪ್ರತಿಭಟನೆ ಮಾಡಿರುವ ಕುರಿತು ಟ್ವೀಟ್ ಮಾಡಿದ್ದರಿಂದ ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ತುಮಕೂರಿನ ಜೆ.ಎಂ.ಎಫ್.ಸಿ ನ್ಯಾಯಾಲಯವು ಕ್ಯಾಥಸಂದ್ರ ಪೊಲೀಸ್ ಠಾಣೆಗೆ ನಿರ್ದೇಶನ ನೀಡಿದೆ.

ಸೆಪ್ಟೆಂಬರ್ 21, 2020 ರಂದು ಕಂಗನಾ ರಣಾವತ್ ತನ್ನ ಟ್ವಿಟ್ಟರ್ ಖಾತೆ "ಕಂಗನಾಟೀಮ್' ನಿಂದ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಿ ಕ್ರಿಮಿನಲ್ ಪ್ರೊಸೀಜರ್ ಸೆಕ್ಷನ್ 156 (3) ರ ಅಡಿಯಲ್ಲಿ ವಕೀಲ ರಮೇಶ್ ನಾಯಕ್.ಎಲ್ ಅವರು ದೂರು ದಾಖಲಿಸಿದ್ದಾರೆ.

ಸಿಎಂ ಉದ್ಧವ್ ಠಾಕ್ರೆ ಮಾನಹಾನಿ: ನಟಿ ಕಂಗನಾ ರಣಾವತ್ ವಿರುದ್ಧ ದೂರು

"ಗಲಭೆಗೆ ಕಾರಣವಾದ ಸಿಎಎ ಬಗ್ಗೆ ತಪ್ಪು ಮಾಹಿತಿ ಮತ್ತು ವದಂತಿಗಳನ್ನು ಹರಡಿದ ಜನರು ಈಗ ರೈತರ ಮಸೂದೆಯ ಬಗ್ಗೆ ತಪ್ಪು ಮಾಹಿತಿ ಹರಡುತ್ತಿದ್ದಾರೆ ಮತ್ತು ರಾಷ್ಟ್ರದಲ್ಲಿ ಭಯೋತ್ಪಾದನೆಯನ್ನು ಉಂಟು ಮಾಡುತ್ತಿದ್ದಾರೆ, ಅವರು ಭಯೋತ್ಪಾದಕರು. ನಾನು ಹೇಳಿದ್ದು ನಿಮಗೆ ಚೆನ್ನಾಗಿ ತಿಳಿದಿದೆ, ಆದರೂ ತಪ್ಪು ಮಾಹಿತಿಯನ್ನು ಹರಡಲು ಇಷ್ಟಪಡುತ್ತೀರಿ' ಎಂದು "ಕಂಗನಾಟೀಮ್' ಟ್ವಿಟ್ಟರ್ ಖಾತೆಯಿಂದ ಪೋಸ್ಟ್ ಮಾಡಲಾಗಿತ್ತು.

"ಆರೋಪಿಗಳು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ ಈ ಮೇಲಿನ ವಿಷಯವು ರೈತರ ಮಸೂದೆಗಳನ್ನು ವಿರೋಧಿಸುವ ಜನರನ್ನು ಗಾಯಗೊಳಿಸುವ ಸ್ಪಷ್ಟ ಉದ್ದೇಶವನ್ನು ಹೊಂದಿದೆ. ಸಮಾಜದಲ್ಲಿ ಗಲಭೆಗಳನ್ನು ಉಂಟುಮಾಡುವ ಉದ್ದೇಶದಿಂದ ಪ್ರಚೋದನೆಯನ್ನು ನೀಡುತ್ತದೆ ಮತ್ತು ಯುವಜನರ ಮನಸ್ಸಿನಲ್ಲಿ ಅಹಿಂಸೆಯ ಸಂಸ್ಕೃತಿಯನ್ನು ಉತ್ತೇಜಿಸುತ್ತದೆ' ಎಂದು ವಕೀಲ ರಮೇಶ್ ನಾಯಕ್.ಎಲ್ ಅವರ ದೂರಿನಲ್ಲಿ ಆರೋಪಿಸಲಾಗಿದೆ.

ಇದಲ್ಲದೆ, ಟ್ವೀಟ್ ವಿವಿಧ ಗುಂಪುಗಳ ನಡುವೆ ಘರ್ಷಣೆಗೆ ಕಾರಣವಾಗಬಹುದು ಎಂದು ಆರೋಪಿಸಲಾಗಿದ್ದು, ಈ ಚಟುವಟಿಕೆಗಳನ್ನು ನಿಗ್ರಹಿಸಲು ಪೊಲೀಸ್ ಇಲಾಖೆ ಅಥವಾ ಸರ್ಕಾರ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಮತ್ತು ಟ್ವಿಟ್ಟರ್ ಖಾತೆದಾರರಾದ ಕಂಗನಾ ರಣಾವತ್ ವಿರುದ್ಧ ಯಾವುದೇ ಪ್ರಕರಣವನ್ನು ದಾಖಲಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ದೂರು ಸಲ್ಲಿಸಲಾಯಿತು.

ಆದ್ದರಿಂದ, ನಟಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಎ, 504, 108 ರ ಅಡಿಯ ಅಪರಾಧಗಳಿಗೆ ಎಫ್ಐಆರ್ ದಾಖಲಿಸುವಂತೆ ದೂರುದಾರ ವಕೀಲರು ನ್ಯಾಯಾಲಯಕ್ಕೆ ಕೋರಿದ್ದಾರೆ.

English summary
Tumakuru JMFC court has directed the Kyathasandra police station to file an FIR against Bollywood actress Kangana Ranaut of tweeting about the farmers protest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X