ವಿಶ್ವದ ಅತಿದೊಡ್ಡ ಸೋಲಾರ್ ಪಾರ್ಕ್ ವಿಶೇಷತೆಗಳು

ತುಮಕೂರು, ಸೆಪ್ಟೆಂಬರ್ 28 : ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಪಾವಗಡ ತಾಲೂಕಿನಲ್ಲಿ ನಿರ್ಮಾಣವಾಗುತ್ತಿರುವ ವಿಶ್ವದ ಅತಿದೊಡ್ಡ ಸೋಲಾರ್ ಪಾರ್ಕ್ ಕಾಮಗಾರಿಗಳನ್ನು ವೀಕ್ಷಣೆ ಮಾಡಿದರು. 12ಸಾವಿರ ಕೋಟಿ ವೆಚ್ಚದಲ್ಲಿ ಈ ಬೃಹತ್ ಯೋಜನೆಯನ್ನು ಕೈಗೊಳ್ಳಲಾಗಿದೆ.

ಬುಧವಾರ ಸಿದ್ದರಾಮಯ್ಯ ಅವರು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಜೊತೆ ಪಾವಗಡಕ್ಕೆ ಭೇಟಿ ನೀಡಿದರು. ರಾಯಚೆರ್ಲು, ತಿರುಮಣಿ, ವೆಂಕಟಮ್ಮನಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಸೋಲಾರ್ ಪಾರ್ಕ್ ವೀಕ್ಷಣೆ ಮಾಡಿ, ಇಂಧನ ಇಲಾಖೆಯ ಪ್ರಯತ್ನವನ್ನು ಶ್ಲಾಘಿಷಿಸಿದರು.

ಈ ಯೋಜನೆಗೆ 12 ಸಾವಿರ ಎಕರೆ ಭೂಮಿಯನ್ನು ಬಳಸಿಕೊಳ್ಳಲಾಗುತ್ತಿದೆ. 2 ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡುವ ಗುರಿಯನ್ನು ಹೊಂದಲಾಗಿದೆ. ನವೆಂಬರ್ ತಿಂಗಳ ವೇಳೆಗೆ 600 ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗುವ ನಿರೀಕ್ಷೆ ಇದೆ.

ವಿಶ್ವದ ಅತೀ ದೊಡ್ಡ ಸೋಲಾರ್ ಪಾರ್ಕ್ ಇದಾಗಿದೆ. ಈ ಪಾರ್ಕ್‌ನಿಂದ ವಿದ್ಯುತ್ ಖರೀದಿ ಮಾಡಲು ರಾಜ್ಯದ 5 ವಿದ್ಯುತ್ ಸರಬರಾಜು ಕಂಪನಿಗಳು ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಜೊತೆ ಒಪ್ಪಂದ ಮಾಡಿಕೊಂಡಿವೆ....

1600 ಕೋಟಿ ವೆಚ್ಚವಾಗಲಿದೆ

1600 ಕೋಟಿ ವೆಚ್ಚವಾಗಲಿದೆ

ಪಾವಗಡದಲ್ಲಿರುವ ಸೋಲಾರ್ ಪಾರ್ಕ್‌ನಿಂದ ಇತರ ಕಡೆಗೆ ವಿದ್ಯುತ್ ಪೂರೈಸಲು ಹಿರಿಯೂರು, ಮಧುಗಿರಿ, ಬೆಂಗಳೂರಿಗೆ ವಿದ್ಯುತ್ ಲೈನ್ ಎಳೆಯುವ ಕಾಮಗಾರಿಯನ್ನು ಪಿಡಿಸಿಎಲ್ ಕಂಪನಿಗೆ ಕೊಡಲಾಗಿದೆ. ವಿದ್ಯುತ್ ಲೈನ್ ಎಳೆಯುವ ಕಾಮಗಾರಿಗೆ 1600 ಕೋಟಿ ಖರ್ಚಾಗಲಿದೆ.

25 ಸಾವಿರ ರೂ.ಬಾಡಿಗೆ ಪಾವತಿ

25 ಸಾವಿರ ರೂ.ಬಾಡಿಗೆ ಪಾವತಿ

ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ರಾಯಚೆರ್ಲು, ತಿರುಮಣಿ, ವೆಂಕಟಮ್ಮನಹಳ್ಳಿಯ ರೈತರ 12 ಸಾವಿರ ಎಕರೆ ಜಮೀನನ್ನು ಬಳಸಿಕೊಳ್ಳಲಾಗುತ್ತಿದೆ. ಈ ಪೈಕಿ 9 ಸಾವಿರ ಎಕರೆ ಬಳಕೆ ಮಾಡಿಕೊಳ್ಳಲು ರೈತರ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಪ್ರತಿ ಎಕರೆಗೆ ತಲಾ 25 ಸಾವಿರ ರೂ. ಬಾಡಿಗೆ ಪಾವತಿ ಮಾಡಲಾಗುತ್ತದೆ.

ಹೈಬ್ರಿಡ್ ಪಾರ್ಕ್ ನಿರ್ಮಾಣಕ್ಕೆ ಕೇಂದ್ರಕ್ಕೆ ಪ್ರಸ್ತಾವನೆ

ಹೈಬ್ರಿಡ್ ಪಾರ್ಕ್ ನಿರ್ಮಾಣಕ್ಕೆ ಕೇಂದ್ರಕ್ಕೆ ಪ್ರಸ್ತಾವನೆ

ಕೇಂದ್ರ ಸರ್ಕಾರ ಈ ಯೋಜನೆಗಾಗಿ 400 ಕೋಟಿ ಅನುದಾನ ನೀಡಿದೆ. ಸೋಲಾರ್ ಮತ್ತು ಪವನ ಶಕ್ತಿ ಮೂಲಕ ವಿದ್ಯುತ್ ಉತ್ಪಾದಿಸುವ ಹೈಬ್ರಿಡ್ ಪಾರ್ಕ್ ಆರಂಭಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ರೈತರು 600 ಎಕರೆ ಜಮೀನು ನೀಡಲು ಮುಂದೆ ಬಂದಿದ್ದು, ಈ ಜಾಗದಲ್ಲಿ ಪಾರ್ಕ್ ನಿರ್ಮಾಣವಾಗಲಿದೆ.

ವಿಶ್ವದ ದೊಡ್ಡ ಪಾರ್ಕ್

ವಿಶ್ವದ ದೊಡ್ಡ ಪಾರ್ಕ್

ಪಾವಗಡದಲ್ಲಿ ನಿರ್ಮಾಣವಾಗುತ್ತಿರುವ ಸೋಲಾರ್ ಪಾರ್ಕ್ ವಿಶ್ವದ ಅತೀ ದೊಡ್ಡ ಸೋಲಾರ್ ಪಾರ್ಕ್ ಆಗಿದೆ. 12 ಸಾವಿರ ಎಕರೆ ಜಾಗದಲ್ಲಿ ಪಾರ್ಕ್ ನಿರ್ಮಾಣವಾಗುತ್ತಿದೆ. 2 ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡುವ ಗುರಿ ಹೊಂದಲಾಗಿದ್ದು, ನವೆಂಬರ್ ವೇಳೆಗೆ 600 ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+